6

ತಿಳಿವಳಿಕೆಯ ಜಾಡು!

Published:
Updated:

ಹಿರಿಯ ವಕೀಲ ಪ್ರಶಾಂತ ಭೂಷಣ್‌ ಅವರ ‘ದಿನದ ಟ್ವೀಟ್‌’ (ಪ್ರ.ವಾ., ಡಿ. 15) ಹಾಸ್ಯಾಸ್ಪದವಾಗಿದೆ! ‘ಗುಜರಾತ್‌ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ಅದು ಪ್ರಜಾತಂತ್ರದ ಸೋಲಾಗುತ್ತದೆ’ ಎಂದು ಅವರು ಹೇಳಿದ್ದಾರೆ.

ಪಕ್ಷವೊಂದನ್ನು ಗೆಲ್ಲಿಸುವವರು ಅಥವಾ ಸೋಲಿಸುವವರು ಮತದಾರರು. ಚುನಾವಣೆಯಲ್ಲಿ ಬಿಜೆಪಿ ಸೋತರೆ ಅಲ್ಲಿ ಪ್ರಜಾತಂತ್ರದ ಗೆಲುವನ್ನು ಪ್ರಶಾಂತ ಭೂಷಣ್‌ ಕಾಣುತ್ತಾರೆ! ಪ್ರಜಾತಂತ್ರ ನಿಂತಿರುವುದೇ ಮತದಾರರ ಮರ್ಜಿಯ ಮೇಲೆ. ಹೀಗಿರುವಾಗ ಮತದಾರರ ತೀರ್ಮಾನವನ್ನು ಪ್ರಾಂಜಲವಾಗಿ ಸ್ವೀಕರಿಸುವುದು ತಿಳಿವಳಿಕೆ ಇರುವವರ ನಿಲುವಾಗಬೇಕು.

ಗುಜಾತ್‌ನಲ್ಲಿ ಈಗ ಬಿಜೆಪಿಗೆ ಗೆಲುವಾಗಿದ್ದು, ಅವರ ಪ್ರಕಾರ ಅಲ್ಲಿ ಪ್ರಜಾಪ್ರಭುತ್ವಕ್ಕೆ ಸೋಲಾಗಿದೆಯೇ? ಆಗಲಿ ಬಿಡಿ, ಅಲ್ಲಿನ ಮತದಾರರಿಗೆ ಪ್ರಜಾತಂತ್ರ ಬೇಡ ಎಂದಾಯಿತು! ‘ಬಿಜೆಪಿಯನ್ನು ವಿರೋಧಿಸುವ ಪಕ್ಷಗಳು ಮಾತ್ರ ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿಯುವಂಥವು’ ಎನ್ನುವುದು ಅವರ ಗ್ರಹಿಕೆ, ನಂಬಿಕೆ. ಇದಕ್ಕೆ ಏನೆನ್ನೋಣ?

ಪ್ರಶಾಂತ ಭೂಷಣ್‌ ಒಬ್ಬ ಅತೃಪ್ತ, ನಿರುತ್ಸಾಹಿ ವ್ಯಕ್ತಿ ಎನ್ನುವುದನ್ನು ಅವರ ಟ್ವೀಟ್‌ಗಳು ಸಾಬೀತು ಮಾಡುತ್ತವೆ. ತಮ್ಮ ತಿಳಿವಳಿಕೆ ಹರಿಯುತ್ತಿರುವ ಜಾಡನ್ನು ಬದಲಾಯಿಸಬೇಕೇ ಎನ್ನುವುದನ್ನು ಅವರೇ ಕಂಡುಕೊಳ್ಳಬೇಕು. ಅದಕ್ಕೆ ಅವರ ತಿಳಿವಳಿಕೆಯೇ ನೆರವಾಗಬೇಕು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry