6

ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧೆ ಖಚಿತ

Published:
Updated:
ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧೆ ಖಚಿತ

ಭಾರತೀನಗರ: ‘ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧೆ ಖಚಿತ’ ಎಂದುವಿಧಾನ ಪರಿಷತ್‌ ಮಾಜಿ ಸದಸ್ಯ ಮಧು ಜಿ. ಮಾದೇಗೌಡ ಭಾನುವಾರ ವಿಶ್ವಾಸ ವ್ಯಕ್ತಪಡಿಸಿದರು.

ಇಲ್ಲಿನ ಭಾರತೀ ಸಹಕಾರ ಸಂಘದ ಆವರಣದಲ್ಲಿ ಮಧು ಜಿ. ಮಾದೇಗೌಡ ಅಭಿಮಾನಿ ಬಳಗ ಭಾನುವಾರ ಆಯೋಜಿಸಿದ್ದ ಮಧು ಜಿ. ಮಾದೇಗೌಡ ಅವರ 53ನೇ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕಳೆದ ಮೂರು ಚುನಾವಣೆಗಳಲ್ಲಿ ಸೋಲು ಕಂಡಿದ್ದರೂ, ಜನರ ಮಧ್ಯೆ ಇದ್ದು ಜನರ ಆಶೊತ್ತರಗಳಿಗೆ ಸ್ಪಂದಿಸುತ್ತಿದ್ದೇನೆ. 14 ವರ್ಷ ರಾಜಕೀಯ ವನವಾಸ ಅನುಭವಿಸಿದ್ದೇನೆ. ಈ ಬಾರಿಯಾದರೂ ರಾಜಕೀಯ ವನವಾಸದಿಂದ ಮುಕ್ತಿಸಿಗುವ ವಿಶ್ವಾಸವಿದೆ ಎಂದರು.

ಸಂಸ್ಥೆ ಮೂಲಕ ಗ್ರಾಮೀಣ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಮಾರ್ಚ್‌ ವೇಳೆಗೆ ಭಾರತೀನಗರದಲ್ಲಿ 200 ಹಾಸಿಗೆ ಸಾಮರ್ಥ್ಯದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಆರಂಭಿಸಲಾಗುತ್ತಿದೆ. ಕೈಗೆಟುಕುವ ದರದಲ್ಲಿ ಆರೋಗ್ಯ ಸೇವೆ ಸಿಗಲಿದೆ ಎಂದರು.

ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಚಂದ್ರಶೇಖರನಾಥಸ್ವಾಮಿ ಅವರು, ಜನರು ದುರಾಭ್ಯಾಸ, ದುಶ್ಚಟಗಳ ದಾಸರಾಗಬಾಋದು. ಪಂಚೇಂದ್ರಿಯಗಳ ಮೇಲೆ ನಿಯಂತ್ರಣ ಹೊಂದಿದರೆ ರಾಜಕಾರಣದಲ್ಲಿ ಸಾಧನೆ ಮಾಡಲು ಸಾಧ್ಯ ಎಂದರು.

ಶಾಸಕ ಎನ್.ಚಲುವರಾಯಸ್ವಾಮಿ ಅವರು,ರಾಜಕೀಯ ಚರ್ಚಿಸುವ ವೇದಿಕೆ ಇದಲ್ಲ. ಜನ್ಮದಿನ ಆಚರಿಸಿಕೊಳ್ಳುತ್ತಿರುವ ಮಧು ಹುಟ್ಟುಹಬ್ಬದ ದಿನ. ಭವಿಷ್ಯದಲ್ಲಿ ಅವರು ಇನ್ನಷ್ಟು ಸಾಮಾಜಿಕ ಕಾರ್ಯ ಮಾಡುವಂತಾಗಲಿ’ ಎಂದು ಹೇಳಿದರು.

ಸನ್ಮಾನ: ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಅಭಿನಂದಿಸಲಾಯಿತು. ವೈದ್ಯ ಡಾ. ಭಾನುಕುಮಾರ್, ಪತ್ರಕರ್ತ ಮತ್ತಿಕೆರೆ ಜಯರಾಂ, ಸಾಹಿತಿ ಷೌಕತ್ ಅಲಿ, ಕೃಷಿಕ ಹನುಮೇಗೌಡ, ಕುಶಲ ಕರ್ಮಿ ಅರಸ್ ಆಚಾರ್, ವಿದ್ಯಾರ್ಥಿನಿ ಕು. ಅರ್ಚನಾ ವೈ.ಸಿ, ಪೌರಕಾರ್ಮಿಕ ಮಹಿಳೆ ಸರೋಜಮ್ಮ, ಕಲಾವಿದೆ ಮಂಜುಳಾ ರಾಜ್‌, ಕ್ರೀಡಾ ಸಾಧಕಿ ಪ್ರೀತಿ ಅವರನ್ನು ಅಭಿನಂದಿಸಲಾಯಿತು.

ಪೂರ್ಣಪ್ರಜ್ಞಾ ಶಾಲೆಯ ಲೇಖನಾ, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕವನಾ ಸೋಮನಗೌಡ, ಭಾರತೀ ಸಂಯುಕ್ತ ಪದವಿಪೂರ್ವ ಕಾಲೇಜಿನ ಎಚ್.ಬಿ. ನಿಖಿಲೇಶ್‌ಗೌಡ, ಭಾರತೀ ಪದವಿಪೂರ್ವ ಕಾಲೇಜಿನ ಲಾವಣ್ಯರಿಗೆ ಗೌರವಿಸಲಾಯಿತು. ಮಹಿಳೆಯರಿಗೆ ಸಸಿ ವಿತರಣೆ, ವಿದ್ಯಾರ್ಥಿಗಳಿಗೆ ಸೋಲಾರ್ ಲ್ಯಾಂಪ್‌ ವಿತರಿಸಲಾಯಿತು.

ಪ್ರಾಚಾರ್ಯ ಪ್ರೊ.ಎಲ್. ಮುಕುಂದರಾಜ್ ಮುಖ್ಯಭಾಷಣ ಮಾಡಿದರು. ಶಾಸಕ ಪಿ.ಎಂ. ನರೇಂದ್ರಸ್ವಾಮಿ, ಮಾಜಿ ಶಾಸಕರಾದ ಕಲ್ಪನಾ ಸಿದ್ದರಾಜು, ಬಿ.ರಾಮಕೃಷ್ಣ, ಎಚ್.ಬಿ. ರಾಮು, ಜಿ.ಪಂ. ಮಾಜಿ ಅಧ್ಯಕ್ಷ ಬಿ. ಬಸವರಾಜು, ಮುಖಂಡರಾದ ವಿಜಯೇಂದ್ರ, ಜಿ.ಪಂ. ಸದಸ್ಯ ಎ.ಎಸ್. ರಾಜೀವ್, ಬಿಇಟಿ ಕಾರ್ಯದರ್ಶಿಗಳಾದ ಬಿ.ಎಂ. ನಂಜೇಗೌಡ, ಸಿದ್ದೇಗೌಡ, ಡಿಸಿಸಿ ಬ್ಯಾಂಕ್ ನಿರ್ದೇಶಕ ಜೋಗೀಗೌಡ, ತಾ.ಪಂ ಸದಸ್ಯರಾದ ಲಲಿತಾ ಕುಮಾರ್, ಗಿರೀಶ್, ದೇವೇಗೌಡ, ಚಲುವರಾಜು, ವೆಂಕಟೇಶ್, ಆಶಾ ಗೋಪಿ,ಸುಮಾ, ಮಹದೇವಮ್ಮ, ಎಪಿಎಂಸಿ.ಅಧ್ಯಕ್ಷ ನಾಗೇಶ್, ಮಮತಾ, ಟಿಎಪಿಸಿಎಂಎಸ್ ಅಧ್ಯಕ್ಷೆ ಪುಟ್ಟತಾಯಮ್ಮ ಪಾಲ್ಗೊಂಡಿದ್ದರು.

* * 

ನಾನು ಭಾಷಣ ಮಾಡುವುದಿಲ್ಲ, ನನ್ನ ಕೆಲಸವೇ ಉತ್ತರವಾಗಬೇಕು.

ಮಧು ಜಿ. ಮಾದೇಗೌಡ.

ವಿಧಾನ ಪರಿಷತ್‌ ಮಾಜಿ ಸದಸ್ಯ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry