7

ಅಬ್ಬಾ ಏನ್ರಿ ಇಷ್ಟೊಂದು ಚಳಿ

Published:
Updated:
ಅಬ್ಬಾ ಏನ್ರಿ ಇಷ್ಟೊಂದು ಚಳಿ

ತುಮಕೂರು: ’ಅಬ್ಬಾ ಏನ್ರಿ ಚಳಿ... ನಿನ್ನೆ, ಮೊನ್ನೆಗಿಂತ ಇವೊತ್ತು ಎಷ್ಟೊಂದು ಚಳಿ ಇತ್ರಿ... ಇವೊತ್ತು 8 ಗಂಟೆಗೆ ಎದ್ದೆ. ವಾಕಿಂಗ್‌ ಗೆ ಹೋಗ್ಲಿಲ್ಲ... ಚಳಿ ತಡ್ಕೊಳ್ಳಕ್ಕೆ ಆಗ್ದೇನೆ ಇವೊತ್ತು ಬೆಳಿಗ್ಗೆಯೇ 3 ಕಪ್ ಕಾಫಿ ಹಿರಿಬಿಟ್ಟೆ ರೀ’... ’ಅಯ್ಯೊ ನಮ್ ಕಥೆ ಕೇಳ್ತೀರಾ. ವಾಕಿಂಗ್‌ ಹೋಗ್ದೆ ಇದ್ರೆ ಏನೊ ಒಂಥರಾ. ಹೀಗಾಗಿ, ಚಳಿ ಇದ್ರೂ ಹೋಗ್ಲೆ ಬೇಕು. ಸ್ವೆಟರ್, ಮಫ್ಲರ್ , ಶೂ ಎಲ್ಲವನ್ನೂ ಹಾಕಿಕೊಂಡು ಪ್ಯಾಕ್ ಆಗಿ ಹೋಗ್ತಿದ್ದೇನೆ’...

’ನೋಡಿ ಈ ಚಳಿಗೆ ಇವೊತ್ತು ಸ್ವಲ್ಪ ಅಂಗಡಿಗೆ ಬರುವುದು ಲೇಟಾಯ್ತು.. ತಡವಾಗಿ ಅಂಗಡಿ ಬಾಗಿಲು ತೆಗೆದೆ. ಈ ಜನರಿಗೆ ಏನು ಇಲ್ದೆ ಇದ್ರೂ ಕಾಫಿ, ಟೀ ಬೇಕು ಬೇಕು ಅಲ್ವಾ’. ಎರಡು ವಾರಗಳಿಂದ ನಗರದ ಜನರು ‘ಚಳಿ’ಯ ಬಗ್ಗೆ ಹೇಳಿಕೊಳ್ಳುತ್ತಿರುವ ಮಾತುಗಳು ಇವು.

ಸಂಜೆ 5 ಗಂಟೆಯಿಂದಲೇ ಸಣ್ಣಗೆ ಶುರುವಾಗುವ ಚಳಿ 10 ಗಂಟೆಗೆ ಹೆಚ್ಚಾಗುತ್ತದೆ. ಬೆಳಿಗ್ಗೆಯ ಹೊತ್ತಿಗೆ ಮೈ ಕೊರೆಯುವಷ್ಟರ ಮಟ್ಟಿಗೆ ಆವರಿಸಿ ಚಳಿ ಚಳಿ ಎಂದು ನಡುಗುವಂತೆ ಮಾಡಿಬಿಟ್ಟಿದೆ. ಮತ್ತೊಂದೆಡೆ ವಯೋವೃದ್ಧರು, ಮಕ್ಕಳು ಆರೋಗ್ಯ ಸಮಸ್ಯೆಗೆ ತುತ್ತಾಗುತ್ತಿದ್ದಾರೆ.

ಹವಾಮಾನ ಇಲಾಖೆ ಮಾಹಿತಿ ಪ್ರಕಾರ ಡಿ.25ರಂದು 14 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿದೆ. ಡಿ.26ರಂದೂ 14 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ಮುನ್ಸೂಚನೆ ಇದ್ದರೆ ಡಿ.27ರಂದು 12 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿತ್ತು. ಅದೇ ರೀತಿ ಡಿ.28ರಂದು 13 ಡಿಗ್ರಿ ಸೆಲ್ಸಿಯಸ್, ಡಿ.29ರಂದು 14 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಲಿದೆ ಎಂದು ಮುನ್ಸೂಚನೆ ನೀಡಿದೆ. ಹೀಗಾಗಿ, ನಗರದ ಜನರು ಇನ್ನೂ ನಾಲ್ಕೈದು ದಿನದಲ್ಲಿ ಇನ್ನಷ್ಟು ಚಳಿಗೆ ನಡುಗಲು ಸಜ್ಜಾಗಬೇಕಾಗಿದೆ.

ಡಿಸೆಂಬರ್ 1ರಂದು ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್, 2ರಂದು 18 ಡಿಗ್ರಿ ಸೆಲ್ಸಿಯಸ್, ಡಿ.5 ರಂದು 18 ಡಿಗ್ರಿ ಸೆಲ್ಸಿಯಸ್, ಡಿ.6ರಂದು 17 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

ಡಿ.17ರಂದು 16 ಡಿಗ್ರಿ ಸೆಲ್ಸಿಯಸ್, ಡಿ.19ರಂದು 14 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಡಿ.22ರಂದು 15 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಈ ತಿಂಗಳಲ್ಲಿ ಕನಿಷ್ಠ ತಾಪಮಾನ ದಾಖಲಾತಿಯಲ್ಲಿ ಈ ವಾರದಲ್ಲಿಯೇ ಏರು ಮುಖ ಕಂಡಿದೆ.

ವ್ಯಾಪಾರ ಜೋರು

ಚಳಿಗೆ ನಡುಗುವ ಜನ, ವೃದ್ಧರು, ಮಕ್ಕಳು, ಮಹಿಳೆಯರು ಸ್ವೆಟರ್, ಹೊದಿಕೆ, ಮಫ್ಲರ್, ಮಕ್ಕಳಿಗೆ ಕುಲಾಯಿ ಖರೀದಿ ಮಾರುಕಟ್ಟೆಯಲ್ಲಿ ಜೋರಾಗಿದೆ. ಉಣ್ಣೆಯ ತರಹೇವಾರು ಉತ್ಪನ್ನಗಳು ಮಾರುಕಟ್ಟೆಯಲ್ಲಿ ಗೋಚರಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry