7

‘ಅನಂತಕುಮಾರ ಹೆಗಡೆ ನಾಲಾಯಕ್ ಸಚಿವ’

Published:
Updated:
‘ಅನಂತಕುಮಾರ ಹೆಗಡೆ ನಾಲಾಯಕ್ ಸಚಿವ’

ಕನಕಗಿರಿ: ‘ದೇಶದ ಸಂವಿಧಾನಕ್ಕೆ ಗೌರವ ನೀಡದ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರು ಸಚಿವರಾಗಲು ನಾಲಾಯಕ್’ ಎಂದು ಕೆಪಿಸಿಸಿ ಎಸ್‌ಟಿ ಘಟಕದ ರಾಜ್ಯ ಉಪಾಧ್ಯಕ್ಷ ಬಿ. ಯಮನೂರಪ್ಪ ನಾಯಕ ಟೀಕಿಸಿದರು.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,‘ ದೇಶದಲ್ಲಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಅಲ್ಪ ಸಂಖ್ಯಾತರು, ಹಿಂದುಳಿದ ವರ್ಗಗಳ ಜನತೆ ಸಂವಿಧಾನ ಬದ್ಧವಾಗಿ ಬಂದಿರುವ ವಿವಿಧ ಸೌಲಭ್ಯಗಳನ್ನು ಪಡೆದು ಸಮಾಜದ ಮುಖ್ಯವಾಹಿನಿಗೆ ಬರುತ್ತಿರುವುದು ಬಿಜೆಪಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಬಿಜೆಪಿಯು ದಲಿತರು, ಅಲ್ಪ ಸಂಖ್ಯಾತರ ವಿರೋಧಿಯಾಗಿದೆ’ ಎಂದು ಟೀಕಿಸಿದರು.

‘ಸಂವಿಧಾನದ ತತ್ವಗಳಿಗೆ ಮಾನ್ಯತೆ ನೀಡದಿದ್ದರೆ ಹೆಗಡೆ ಅವರು ದೇಶ ಬಿಟ್ಟು ತೊಲಗಲಿ, ಇಂದಿನ ಕಂಪ್ಯೂಟರ್ ಯುಗದಲ್ಲಿಯೂ ದೇಶದ ಜನರ ಮೇಲೆ ಮನು ಸಂಸ್ಕೃತಿ ಏರುತ್ತಿರುವುದು ಸರಿ ಅಲ್ಲ’ ಎಂದರು.

‘ಸಂವಿಧಾನವನ್ನೆ ಬದಲಾಯಿಸಬೇಕೆಂಬ ಸಚಿವರ ಹೇಳಿಕೆಯ ಹಿಂದೆ ಪ್ರಧಾನಿ ನರೇಂದ್ರ ಮೋದಿ ಇದ್ದಾರೆ. ಶಾಂತಿ ಪ್ರಿಯ ರಾಜ್ಯದಲ್ಲಿ ಜಾತಿ ವಿಷ ಬೀಜ ಬಿತ್ತಿ ಅಧಿಕಾರ ಪಡೆಯಬೇಕೆಂದು ಬಿಜೆಪಿ ಹವಣಿಸುತ್ತಿದೆ. ರಾಜ್ಯದಲ್ಲಿ ಜನರು ಬಿಜೆಪಿ ಅಧಿಕಾರಕ್ಕೆ ತರಬಾರದು’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry