7

ಜಿಎಸ್‌ಟಿ ವರಮಾನ ಮತ್ತೆ ಕುಸಿತ

Published:
Updated:

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹವು ಸತತ ಎರಡನೇ ತಿಂಗಳೂ ಕುಸಿತ ದಾಖಲಿಸಿದೆ.

ನವೆಂಬರ್‌ ತಿಂಗಳ ತೆರಿಗೆ  ಸಂಗ್ರಹವು ₹ 80,808 ಕೋಟಿಗಳಷ್ಟಾಗಿದ್ದು, ಅಕ್ಟೋಬರ್‌ನಲ್ಲಿ ಇದು ₹ 83 ಸಾವಿರ ಕೋಟಿಗಳಷ್ಟಿತ್ತು. ಡಿಸೆಂಬರ್‌ 25ರವರೆಗೆ ನವೆಂಬರ್‌ ತಿಂಗಳ ತೆರಿಗೆ ಸಂಗ್ರಹವು ₹ 80,808 ಕೋಟಿಗಳಷ್ಟಿತ್ತು. 53.06 ಲಕ್ಷ ರಿಟರ್ನ್ಸ್‌ಗಳು ಸಲ್ಲಿಕೆಯಾಗಿವೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

ಇದುವರೆಗೆ ಸಂಗ್ರಹಗೊಂಡಿರುವ ₹ 80,808 ಕೋಟಿಗಳಲ್ಲಿ ಕೇಂದ್ರೀಯ ಜಿಎಸ್‌ಟಿ ₹ 13,089 ಕೋಟಿ, ರಾಜ್ಯಗಳ ಜಿಎಸ್‌ಟಿ ₹ 18,650 ಕೋಟಿ, ಸಮಗ್ರ ಜಿಎಸ್‌ಟಿ ₹ 41,270 ಕೋಟಿ ಮತ್ತು ₹ 7,799 ಕೋಟಿಗಳು  ರಾಜ್ಯಗಳ ಪರಿಹಾರ ಸೆಸ್‌ ರೂಪದಲ್ಲಿ ಬಂದಿವೆ.

ವಿಸ್ತರಣೆಗೆ ಮನವಿ: ಹೂಡುವಳಿ ತೆರಿಗೆ ಪ್ರಯೋಜನ ಪಡೆದುಕೊಳ್ಳಲು, ಜಿಎಸ್‌ಟಿ ಜಾರಿ ಮುನ್ನ ಇದ್ದ ಮೊಬೈಲ್‌ಗಳ ದಾಸ್ತಾನು ಮಾರಾಟ ಮಾಡಲು ಇನ್ನೂ ಆರು ತಿಂಗಳ ಕಾಲಾವಕಾಶ ನೀಡಬೇಕು ಎಂದು ಮೊಬೈಲ್‌ ತಯಾರಿಕಾ ಸಂಘವು (ಐಸಿಎ) ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡಿದೆ.

ಜುಲೈ 1ರ ಮುಂಚೆ ತಯಾರಾದ ಮೊಬೈಲ್‌ಗಳ ಮೇಲಿನ  ಹೂಡುವಳಿ ತೆರಿಗೆ ಪಡೆಯಲು 2017ರ ಡಿಸೆಂಬರ್‌ 31 ಕೊನೆಯ ದಿನವಾಗಿದೆ. ‘ಹಳೆಯ ದಾಸ್ತಾನು ಕರಗಿಸಲು 6 ತಿಂಗಳ ಕಾಲಾವಕಾಶವು ಸಾಲುವುದಿಲ್ಲ. ಇನ್ನೂ ಶೇ 20ರಿಂದ ಶೇ 30ರಷ್ಟು ಸರಕು ಪೂರೈಕೆ ಹಂತದಲ್ಲಿ ಇದೆ. 2018ರ ಜೂನ್‌ 30ರವರೆಗೆ ಅವಧಿ ವಿಸ್ತರಣೆ ಮಾಡಿದರೆ, ಅದರಿಂದ ಮೊಬೈಲ್ ಉದ್ದಿಮೆ ಮತ್ತು ವಹಿವಾಟಿಗೆ ಯಾವುದೇ ಧಕ್ಕೆ ಒದಗಲಾರದು’ ಎಂದು ಐಸಿಎ ರಾಷ್ಟ್ರೀಯ ಅಧ್ಯಕ್ಷ ಪಂಕಜ್‌ ಮೊಹಿಂದ್ರೂ ಅವರು ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರಿಗೆ ಪತ್ರ ಬರೆದಿದ್ದಾರೆ.

**

ತಿಂಗಳು ತೆರಿಗೆ ಸಂಗ್ರಹ

(₹ ಕೋಟಿಗಳಲ್ಲಿ)

ಜುಲೈ  95,000

ಆಗಸ್ಟ್‌  91,000

ಸೆಪ್ಟೆಂಬರ್‌ 92,150

ಅಕ್ಟೋಬರ್‌ 83,000

ನವೆಂಬರ್‌ 80,808

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry