3
ಮೊದಲ ಬಾರಿಗೆ 34 ಸಾವಿರದ ಗಡಿ ದಾಟಿದ ಬಿಎಸ್‌ಇ

ಸೂಚ್ಯಂಕದ ಹೊಸ ಎತ್ತರ

Published:
Updated:
X

'ಪ್ರಜಾವಾಣಿ'ಯ ಜಾಲತಾಣವನ್ನು ಹೆಚ್ಚು ಓದುಗ ಸ್ನೇಹಿಯಾಗಿಸುವ ಉದ್ದೇಶದಿಂದ ಹೊಸ ವಿನ್ಯಾಸವನ್ನು ರೂಪಿಸಲಾಗಿದೆ.
ಈ ವಿನ್ಯಾಸದ ಕುರಿತ ನಿಮ್ಮ ಅಭಿಪ್ರಾಯಗಳನ್ನು ಇಲ್ಲಿರುವ ಲಿಂಕ್ ಕ್ಲಿಕ್ಕಿಸುವ ಮೂಲಕ ನಮಗೆ ತಿಳಿಸಬಹುದು

webfeedback@prajavani.co.in
ಸೂಚ್ಯಂಕದ ಹೊಸ ಎತ್ತರ

ಮುಂಬೈ: ದೇಶಿ ಷೇರು ಮಾರುಕಟ್ಟೆಗಳಿಗೆ ಮಂಗಳವಾರ ಇನ್ನೊಂದು ದಾಖಲೆ ದಿನವಾಗಿತ್ತು. ಸಂವೇದಿ ಸೂಚ್ಯಂಕ (ಬಿಎಸ್‌ಇ) ಮತ್ತು ರಾಷ್ಟ್ರೀಯ ಷೇರುಪೇಟೆಗಳು (ನಿಫ್ಟಿ) ಹೊಸ ಎತ್ತರ ತಲುಪಿದವು.

ವಹಿವಾಟಿನ ಅಂತ್ಯದಲ್ಲಿ ನಡೆದ ಷೇರುಗಳ ಖರೀದಿ ಭರಾಟೆಯಿಂದ ಈ ದಾಖಲೆ ಸಾಧ್ಯವಾಯಿತು. ದಿನದ ವಹಿವಾಟಿನಲ್ಲಿ ಸೂಚ್ಯಂಕವು 70.31 ಅಂಶಗಳ ಏರಿಕೆ ಕಂಡು 34,010.61 ಅಂಶಗಳಿಗೆ ತಲುಪಿತು. ಶುಕ್ರವಾರದ ವಹಿವಾಟಿನಲ್ಲಿ ಸೂಚ್ಯಂಕವು 33,940 ಅಂಶಗಳಿಗೆ ತಲುಪಿತ್ತು.

‘ನಿಫ್ಟಿ’ 38.50 ಅಂಶಗಳ ಏರಿಕೆ ಕಂಡು 10,531.50 ಅಂಶಗಳಿಗೆ ತಲುಪಿತು. ವಹಿವಾಟಿನ ಒಂದು ಹಂತದಲ್ಲಿ ಇದು 10,545.45 ಅಂಶಗಳಿಗೂ ಏರಿಕೆ ಕಂಡಿತ್ತು.

ಸಣ್ಣ ಮತ್ತು ಮಧ್ಯಮ ಗಾತ್ರದ ಷೇರುಗಳ ಖರೀದಿಗೆ ಹೂಡಿಕೆದಾರರು ಹೆಚ್ಚು ಉತ್ಸುಕತೆ ತೋರಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry