ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಟೆ, ಶಸ್ತ್ರಾಗಾರ ದುರಸ್ತಿಗೆ ಚಾಲನೆ

Last Updated 27 ಡಿಸೆಂಬರ್ 2017, 5:50 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ಮುಂಗಾರು ಹಂಗಾಮಿನಲ್ಲಿ ಸತತವಾಗಿ ಸುರಿದ ಮಳೆಯಿಂದ ಕುಸಿದಿದ್ದ ಕೋಟೆ ಭಾಗದ ದುರಸ್ತಿ ಕಾರ್ಯಕ್ಕೆ ರಾಜ್ಯ ಪ್ರಾಚ್ಯವಸ್ತು ಇಲಾಖೆ ಚಾಲನೆ ನೀಡಿದೆ. ಪಟ್ಟಣದ ಪುರಸಭೆ ಕಚೇರಿ ಬಳಿಯ ಕೋಟೆ ಹಾಗೂ ಬುರುಜಿನ ದುರಸ್ತಿ ಕಾರ್ಯ ಆರಂಭವಾಗಿದೆ. ಬುರುಜಿನ ಮೇಲೆ ಬೆಳೆದಿದ್ದ ಕಳೆ ಗಿಡಗಳನ್ನು ಸ್ವಚ್ಛಗೊಳಿಸಲಾಗಿದೆ.

ಕುಸಿದಿರುವ ಬುರುಜಿನ ತಳಪಾಯದ ಅಭಿವೃದ್ಧಿ ಬಿರುಸಿನಿಂದ ಸಾಗಿದೆ. ಪುರಸಭೆ ಕಚೇರಿ ಬಳಿಯ ಕೋಟೆ ಭಾಗ (ಪೂರ್ವ ಕೋಟೆ) ಮತ್ತು ಈ ಕೋಟೆಗೆ ಹೊಂದಿಕೊಂಡ ಗುಡ್ಡದ ದುರಸ್ತಿ ಕಾರ್ಯದ ಜತೆಗೆ 3 ಮದ್ದಿನ ಮನೆಗಳ ಜೀರ್ಣೋದ್ಧಾರಕ್ಕೆ ಇಲಾಖೆ ಮುಂದಾಗಿದೆ.

‘ಪಟ್ಟಣದ ಕೋಟೆ, ಬುರುಜು ಮತ್ತು ಮದ್ದಿನ ಮನೆಗಳಿಗೆ ಕಾಯಕಲ್ಪ ನೀಡಲು ಸರ್ಕಾರಕ್ಕೆ ರೂ.19 ಕೋಟಿ ವೆಚ್ಚದ ಪ್ರಸ್ತಾವನೆ ಸಲ್ಲಿಸಲಾಗಿದೆ. ಸದ್ಯ ₹5 ಕೋಟಿ ಹಣ ಬಿಡುಗಡೆಯಾಗಿದೆ.

‘ಈ ಹಣದಲ್ಲಿ 3 ಶಸ್ತ್ರಾಗಾರ (ಮದ್ದಿನ ಮನೆ)ಗಳು ಹಾಗೂ ಕೋಟೆ ಮತ್ತು ಬುರುಜು ಸೇರಿ ಸ್ವಲ್ಪ ಭಾಗವನ್ನು ಮಾತ್ರ ದುರಸ್ತಿ ಮಾಡಲಾಗುವುದು. ಇನ್ನುಳಿದ ಕೋಟೆ ಮತ್ತು ಕಂದಕದಲ್ಲಿ ಬೆಳೆದಿರುವ ಕಳೆ ಗಿಡ ತೆಗೆದು ಹಸನುಗೊಳಿಸುವ ಕಾರ್ಯ ಸದ್ಯ ನಡೆಯದು’ ಎಂದು ರಾಜ್ಯ ಪ್ರಾಚ್ಯವಸ್ತು ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಮೋಹನಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಚೆಕ್‌ ಪೋಸ್ಟ್ ಬಳಿ ಕಂದಕಕ್ಕೆ ಹೊಂದಿಕೊಂಡ ಜಾಗದಲ್ಲಿ ಅನಧಿಕೃತವಾಗಿ ಕಟ್ಟಡ ನಿರ್ಮಿಸಿ ಹೋಟೆಲ್‌ ನಡೆಸಲಾಗುತ್ತಿದೆ. ಆರಂಭದ ಹಂತದಲ್ಲೇ ಕಾಮಗಾರಿಯನ್ನು ತಡೆಯುವಂತೆ ಪೊಲೀಸ್‌ ಠಾಣೆಗೆ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ ಎಂದು ಅವರು ಆರೋಪಿಸಿದರು.

ಈ ಕುರಿತು ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ ಹಾಗೂ ಸ್ಥಳೀಯ ಪುರಸಭೆ ಮುಖ್ಯಾಧಿಕಾರಿಗೆ ಪತ್ರ ಬರೆದು ಕ್ರಮಕ್ಕೆ ಕೋರಲಾಗಿದೆ. ಆದರೆ ಯಾರೊಬ್ಬರೂ ಇತ್ತ ಗಮನ ಹರಿಸುತ್ತಿಲ್ಲ’ ಎಂದು ಅವರು ಅಸಹಾಯಕತೆ ವ್ಯಕ್ತಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT