7

ಕೃಷಿ ಭೂಮಿಗೆ ನೀರು ನುಗ್ಗಿ ಬೆಳೆ ಹಾನಿ

Published:
Updated:

ಚನ್ನಪಟ್ಟಣ: ತಾಲ್ಲೂಕಿನ ಹರೂರು ಗ್ರಾಮದ ಕೆರೆ ಕೋಡಿಯನ್ನು ನೀರಾವರಿ ಇಲಾಖೆಯು ಹೆಚ್ಚಿಸಿರುವುದರಿಂದನೀರು ಹೆಚ್ಚಿ ಕೃಷಿ ಜಮೀನಿಗೆ ನೀರು ನುಗ್ಗಿ ಬೆಳೆಗಳೆಲ್ಲಾ ನೀರಿನಲ್ಲಿ ಮುಳುಗುವಂತಾಗಿದೆ ಎಂದು ತಾಲ್ಲೂಕಿನ ಹರೂರು ಮೊಗೇನಹಳ್ಳಿ ಹಾಗೂ ತೊರೆಹೊಸೂರು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.

ರೈತರಾದ ಶ್ರೀನಿವಾಸ್, ಎಂ.ಪಿ.ಕುಮಾರ್, ಮಾದೇಗೌಡ, ಸಣ್ಣಪ್ಪ, ಶ್ರೀಧರ್, ನಾರಾಯಣಸ್ವಾಮಿ, ರಾಮಚಂದ್ರ, ಗುಣಶೇಖರ್, ಶ್ಯಾಮ್, ಮಹದೇವ್, ಸಿದ್ದೇಗೌಡ, ಚಂದ್ರಯ್ಯ, ಶಾರದಮ್ಮ, ಪುಟ್ಟಲಿಂಗಯ್ಯ ಅವರ ಬೆಳೆಗಳು ನೀರಿನಲ್ಲಿ ಮುಳುಗಿವೆ ಎಂದು ಆರೋಪಿಸಿದ್ದಾರೆ.

ಕೆರೆಯ ಅಭಿವೃದ್ಧಿ ಹೆಸರಿನಲ್ಲಿ ಕೆರೆಯ ಕೋಡಿ ಎತ್ತರಿಸಲಾಗಿದೆ. ಏತ ನೀರಾವರಿ ಯೋಜನೆಯಡಿಯಲ್ಲಿ ಕೆರೆಗೆ ನೀರು ತುಂಬಿಸಲಾಗುತ್ತಿದೆ. ಈಗ ಕೆರೆ ಭರ್ತಿಯಾಗುವ ಹಂತ ತಲುಪಿದ್ದು, ಕೋಡಿ ಎತ್ತರವಾಗಿರುವುದರಿಂದ ನೀರು ಬೆಳೆಗಳಿಗೆ ನುಗ್ಗಿದೆ. ಕೊಯ್ಲಿಗೆ ಬಂದಿರುವ ಬೆಳೆ ಕಟಾವ್ ಮಾಡಲು ಆಗದ ಸ್ಥಿತಿ ಎದುರಾಗಿದೆ ಎಂದು ದೂರಿದ್ದಾರೆ.

ಭತ್ತ, ರಾಗಿ ಸೇರಿದಂತೆ ಹಲವು ಬೆಳೆಗಳನ್ನು ಬೆಳೆಯಲಾಗಿದೆ. ಈಗ ನೀರು ನುಗ್ಗಿರುವ ಪರಿಣಾಮ ಸುಮಾರು 35 ಎಕರೆಯಲ್ಲಿ ಬೆಳೆದಿರುವ ಬೆಳೆ ರು ಪಾಲಾಗಿವೆ. ಇದರಿಂದ ಲಕ್ಷಾಂತರ ರೂಪಾಯಿ ನಷ್ಟವುಂಟಾಗಿದೆ. ಸಂಬಂಧಪಟ್ಟವರು ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry