7

ಒಳಮೀಸಲಾತಿ ವಿರೋಧಿಸಿ ಡಿ. 29ರಿಂದ ಪ್ರತಿಭಟನೆ

Published:
Updated:

ಕೊರಟಗೆರೆ: ಪರಿಶಿಷ್ಟ ಜಾತಿಗೆ ಸೇರಿದ ನೂರು ಒಳಪಂಗಡಗಳು ಒಗ್ಗೂಡಿ ಡಿ. 29ರಂದು ಒಳಮೀಸಲಾತಿ ವಿರೋಧಿಸಿ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ದಲಿತ ಮುಖಂಡ ದಾಡಿ ವೆಂಕಟೇಶ್ ತಿಳಿಸಿದರು.

ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಿದ್ದ ಒಳಮೀಸಲಾತಿ ಜಾರಿಗಾಗಿ ಜಾಗೃತಿ ಕೂಟದಲ್ಲಿ ಮಾತನಾಡಿದರು. ತುಮಕೂರಿನಲ್ಲಿ ಮಾದಿಗ ಮೀಸಲಾತಿ ಸಮಿತಿ ಡಿ. 28ರಿಂದ ಆಯೋಜಿಸಿರುವ ರಾಜ್ಯಮಟ್ಟದ ಅಹೋರಾತ್ರಿ ಧರಣಿಗೆ ಮಾದಿಗ ಮಾನವ ಹಕ್ಕುಗಳ ವೇದಿಕೆ ಹಾಗೂ ಮಾದಿಗ ಸಂಘಟನೆಗಳ ಒಕ್ಕೂಟ ಬೆಂಬಲ ಸೂಚಿಸುತ್ತದೆ ಎಂದು ತಿಳಿಸಿದರು.

ಮುಂಡರಾದ ಎ.ಗಂಗಾಧರ್, ಬೆಲ್ಲದಮಡು ಕೃಷ್ಣಪ್ಪ, ಚಿಕ್ಕರಂಗಯ್ಯ, ಸಿ.ಎಸ್.ಹನುಮಂತರಾಜು, ಬಿ.ಡಿ.ಪುರ ಸುರೇಶ್, ನರಸಿಂಹಪ್ಪ, ವೈ.ಎಚ್.ಹುಚ್ಚಯ್ಯ, ಡಾ.ಲಕ್ಷ್ಮಿಕಾಂತ್, ವೆಂಕಟೇಶ್, ಗಂಗಣ್ಣ, ಆನಂದ್, ಚಿಕ್ಕಣ್ಣ, ಡಾ.ಒ.ನಾಗರಾಜು, ರವಿಕುಮಾರ್ ನೀಹ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry