7
X

'ಪ್ರಜಾವಾಣಿ'ಯ ಜಾಲತಾಣವನ್ನು ಹೆಚ್ಚು ಓದುಗ ಸ್ನೇಹಿಯಾಗಿಸುವ ಉದ್ದೇಶದಿಂದ ಹೊಸ ವಿನ್ಯಾಸವನ್ನು ರೂಪಿಸಲಾಗಿದೆ.
ಈ ವಿನ್ಯಾಸದ ಕುರಿತ ನಿಮ್ಮ ಅಭಿಪ್ರಾಯಗಳನ್ನು ಇಲ್ಲಿರುವ ಲಿಂಕ್ ಕ್ಲಿಕ್ಕಿಸುವ ಮೂಲಕ ನಮಗೆ ತಿಳಿಸಬಹುದು

webfeedback@prajavani.co.in

ಬಂದ್‌ ಯಶಸ್ವಿ; ಎಲ್ಲೆಡೆ ಆಕ್ರೋಶ, ಟೈರ್‌ಗೆ ಬೆಂಕಿ

Published:
Updated:
ಬಂದ್‌ ಯಶಸ್ವಿ; ಎಲ್ಲೆಡೆ ಆಕ್ರೋಶ, ಟೈರ್‌ಗೆ ಬೆಂಕಿ

ವಿಜಯಪುರ: ನಗರದಲ್ಲಿ ಈಚೆಗೆ ದಲಿತ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿ, ಕೊಲೆಗೈದ ಘಟನೆ ಖಂಡಿಸಿ, ಬಸವನಬಾಗೇವಾಡಿ, ಚಡಚಣ, ನಾಲತವಾಡ, ತಾಂಬಾ, ಕಲಕೇರಿಯಲ್ಲಿ ಮಂಗಳವಾರ ಬಂದ್‌ ಆಚರಿಸಿದ್ದು, ಎಲ್ಲೆಡೆ ತೀವ್ರ ಆಕ್ರೋಶ ವ್ಯಕ್ತವಾಯಿತು. ಪ್ರತಿಭಟನೆಯೂ ನಡೆಯಿತು.

ಮುಂಜಾನೆಯಿಂದಲೇ ವ್ಯಾಪಾರಸ್ಥರು ಸ್ವಯಂ ಪ್ರೇರಿತರಾಗಿ ಅಂಗಡಿಗಳನ್ನು ಮುಚ್ಚಿದ್ದರು. ಸಾರಿಗೆ ಸಂಚಾರ ಸಂಪೂರ್ಣ ಸ್ತಬ್ಧಗೊಂಡಿತ್ತು. ಶಾಲಾ–ಕಾಲೇಜುಗಳು ಬಾಗಿಲು ಮುಚ್ಚಿದ್ದವು. ಪ್ರತಿಭಟನಾ ಮೆರವಣಿಗೆ ನಡೆದವು. ಎಲ್ಲ ರಸ್ತೆಗಳಲ್ಲೂ ಟೈರ್‌ಗೆ ಬೆಂಕಿ ಹಚ್ಚಿದ ಪ್ರತಿಭಟನಾಕಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಲಘು ಲಾಠಿ ಪ್ರಹಾರ

ಚಡಚಣ: ಬಾಲಕಿ ಮೇಲೆ ಅತ್ಯಾಚಾರ ನಡೆಸಿ, ಕೊಲೆಗೈದ ಆರೋಪಿಗಳನ್ನು ಗಲ್ಲಿಗೇರಿಸಬೇಕು ಎಂದು ಒತ್ತಾಯಿಸಿ ಪಟ್ಟಣದ ಬಸವೇಶ್ವರ ವೃತ್ತ, ಶಿವಾಜಿ ನಗರ, ಅಂಬೇಡ್ಕರ್ ವೃತ್ತ, ಕೆಇಬಿ ವೃತ್ತ ಸೇರಿದಂತೆ ವಿವಿಧೆಡೆ ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಲಾಯಿತು.

ಮೂರು ತಾಸಿಗೂ ಹೆಚ್ಚಿನ ಅವಧಿ ರಾಜ್ಯ ಹೆದ್ದಾರಿಯಲ್ಲಿ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಪಟ್ಟಣದ ಎಪಿಎಂಸಿ ಬಳಿ ಜಮಾಯಿಸಿದ ಅಪಾರ ಸಂಖ್ಯೆಯ ಜನರು ಮೆರವಣಿಗೆ ಮೂಲಕ ಬಸವೇಶ್ವರ ವೃತ್ತಕ್ಕೆ ತೆರಳಿ ಸಭೆ ನಡೆಸಿದರು.

ಈ ವೇಳೆ ಡಿಎಸ್‌ಎಸ್‌ ಮುಖಂಡ ಮಲ್ಲು ಬನಸೋಡೆ ತಮ್ಮ ಪ್ರತಿಭಟನಾ ಭಾಷಣದ ನಡುವೆ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಹೇಳಿಕೆ ಪ್ರಸ್ತಾಪಿಸುತ್ತಿದ್ದಂತೆ, ಬಂದ್‌ನಲ್ಲಿ ಭಾಗಿಯಾಗಿದ್ದ ಬಿಜೆಪಿಯ ಕೆಲ ಕಾರ್ಯಕರ್ತರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಈ ಸಂದರ್ಭ ಎರಡೂ ಕಡೆ ವಾದ–ಪ್ರತಿ ವಾದ ನಡೆಯಿತು. ಪರಿಸ್ಥಿತಿ ಕೈ ಮೀರುವುದನ್ನು ಅರಿತ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ, ಜನರ ಗುಂಪನ್ನು ಚೆದುರಿಸಿದರು.

ಗೋಪಾಲ ಕಾರಜೋಳ, ದೇವಾನಂದ ಚವ್ಹಾಣ, ಧರ್ಮಣ್ಣ ಬನಸೋಡೆ, ರುದ್ರೇಶ ಬನಸೋಡೆ, ಮಲ್ಲಪ್ಪ ಕಟ್ಟಿಮನಿ, ಪ್ರಕಾಶ ಕಟ್ಟಿಮನಿ, ರೇವಣಸಿದ್ದಪ್ಪ ಕಟ್ಟಿಮನಿ, ಮಹಾದೇವ ವಾಘಮೋರೆ, ಕಾಂತುಗೌಡ ಪಾಟೀಲ, ದೇವೇಂದ್ರಪ್ಪ ಪಾಟೀಲ, ಮಹಾದೇವ ಯಂಕಂಚಿ, ರಾಮ ಅವಟಿ, ಚಂದ್ರಶೇಖರ ನಿರಾಳೆ, ಮಲ್ಲು ಧೋತ್ರ, ಸುರೇಶ ಜಂಗಲಗಿ, ಪ್ರಮೋದ ಮಠ, ಸಂಗಮೇಶ ಮುಂಡೋಡಗಿ, ಚೇತನ ನಿರಾಳೆ, ರಾಜು ಕೋಳಿ, ರಾಜು ಕ್ಷತ್ರಿ, ವಿವಿಧ ಪ್ರಗತಿಪರ ಸಂಘಟನೆಗಳ ನೂರಾರು ಪದಾಧಿಕಾರಿಗಳು, ಕಾರ್ಯಕರ್ತರು ಬಂದ್‌ನಲ್ಲಿ ಭಾಗಿಯಾಗಿದ್ದರು.

ಟೈರ್‌ಗೆ ಬೆಂಕಿ; ಬಂದ್‌ ಯಶಸ್ವಿ

ನಾಲತವಾಡ: ಇಲ್ಲಿನ ಟಿಪ್ಪು ಸುಲ್ತಾನ್ ಸಂಘ, ಕನ್ನಡ ಪರ ಸಂಘಟನೆಗಳು, ಬಿಸಿಲು ನಾಡಿನ ಹಸಿರು ಸೇನೆ, ಅಹಿಂದ, ಕನಕ, ರೈತ ಸಂಘಟನೆ ಸೇರಿದಂತೆ ವಿವಿಧ ಪ್ರಗತಿಪರ ಸಂಘಟನೆಗಳು ಕರೆ ನೀಡಿದ್ದ ಬಂದ್‌ ಯಶಸ್ವಿಯಾಗಿದೆ.

ಪಟ್ಟಣದ ವೀರೇಶ್ವರ ವೃತ್ತದಿಂದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮೂಲಕ ಗಣಪತಿ ವೃತ್ತಕ್ಕೆ ತೆರಳಿ, ಕೆಲಕಾಲ ಪ್ರತಿಭಟನೆ ನಡೆಸಿ, ಉಪ ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.

ವಿವಿಧ ಸಂಘಟನೆಗಳ ಮುಖಂಡರಾದ ಜಿ.ಮಹಾಂತಗೌಡ ಗಂಗನಗೌಡರ, ಉಮೇಶ ಆಲಕೊಪ್ಪರ, ಹಣಮಂತ ಚಲವಾದಿ, ಬೋರಮ್ಮ ಪಾಟೀಲ, ಭೀಮಣ್ಣ ಗುರಿಕಾರ, ಸಿದ್ದಪ್ಪ ಕಟ್ಟಿಮನಿ, ಕೃಷ್ಣ ಭಿಳೆಬಾಯಿ, ಮಹ್ಮದ ಗೌಸ್ ಸಿಕ್ಕಲಗಾರ ಮಾತನಾಡಿದರು.

ಪ್ರತಿಭಟನೆಯಲ್ಲಿ ಮುಖಂಡ ಮಲ್ಲು ತಳವಾರ, ತಾಲ್ಲೂಕು ಕುರುಬ ಸಂಘದ ಅಧ್ಯಕ್ಷ ಹಾಲಣ್ಣ, ಗುಡದಪ್ಪ ಕಮರಿ, ಜಿ.ಪಂ.ಮಾಜಿ ಸದಸ್ಯ ನಿಂಗಪ್ಪ ಬಪ್ಪರಗಿ, ಮೈಬೂಬ ಖಾಜಿ, ರಸೂಲ ಮಕಾಂದಾರ, ಕರವೇ ಅಧ್ಯಕ್ಷ ಪಾಪಣ್ಣ ಗಾದಿ, ಮೈನು ಕೊಣ್ಣೂರ, ಅಲ್ಲಾಭಕ್ಷ ಖಾಜಿ, ದುರಗಪ್ಪ ಲೊಟಗೇರಿ, ಭೀಮಣ್ಣ ಲೊಟಗೇರಿ, ಯಾಕುಬ ಮುದ್ದೇಬಿಹಾಳ, ಉಸ್ಮಾನ ಸಿಕ್ಕಲಗಾರ, ಅಲ್ಲಾಭಕ್ಷ ಮೂಲಿಮನಿ, ಗನಿಸಾಬ ಖಾಜಿ, ಜಗದೀಶ ಕೆಂಬಾಯಿ ಪಾಲ್ಗೊಂಡಿದ್ದರು.

ಗಲ್ಲು ಶಿಕ್ಷೆ ವಿಧಿಸಿ

ತಾಂಬಾ: ಇಲ್ಲಿನ ವಿರಕ್ತ ಮಠದ ಮುಂಭಾಗ ಜಮಾಯಿಸಿದ ವಿವಿಧ ಸಂಘಟನೆಗಳ ಅಪಾರ ಸಂಖ್ಯೆಯ ಕಾರ್ಯಕರ್ತರು, ವಿದ್ಯಾರ್ಥಿಗಳು ಮೆರವಣಿಗೆ ಮೂಲಕ ಡಾ.ಬಿ.ಆರ್‌.ಅಂಬೇಡ್ಕರ್‌ ವೃತ್ತದ ಮಾರ್ಗವಾಗಿ ಸಂಗನಬಸವೇಶ್ವರ ವೃತ್ತಕ್ಕೆ ತೆರಳಿ ಕೆಲಕಾಲ ರಸ್ತೆ ತಡೆ ನಡೆಸಿ, ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರಕಾಶ ಪಾಟೀಲ ಮಾತನಾಡಿ ‘ವಿಜಯಪುರದಲ್ಲಿನ ಘಟನೆ ಹೇಯ ಕೃತ್ಯ. ಪ್ರಜ್ಞಾವಂತ ಸಮಾಜ ತಲೆ ತಗ್ಗಿಸುವಂತಾಗಿದೆ. ಅತ್ಯಾಚಾರ, ದೌರ್ಜನ್ಯ. ದಬ್ಬಾಳಿಕೆ ಹೆಚ್ಚುತ್ತಿದ್ದು, ಸಮಾಜದಲ್ಲಿ ಮಹಿಳೆಯರು, ಮಕ್ಕಳು ನಿರ್ಭಯವಾಗಿ ಓಡಾಡಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಾಲ್ಲೂಕು ಪಂಚಾಯಿತಿ ಸದಸ್ಯ ಪ್ರಕಾಶ ಮುಂಜಿ, ರೇವಪ್ಪ ಹೊರ್ತಿ, ಸಂಜೀವ ಗೊರನಾಳ, ರಾಜು ಗಂಗನಳ್ಳಿ, ಜಕ್ಕಪ್ಪ ಹತ್ತಳ್ಳಿ, ಪುಟ್ಟು ಪಾಟೀಲ, ರವಿ ನಡಗಡ್ಡಿ, ಶಿವು ಹಿರೇಕುರಬರ, ಪ್ರವೀಣ ತಂಗಾ, ನಾಗಪ್ಪ ಕೆಂಗನಾಳ, ಶಿವರಾಜ ಕೆಂಗನಾಳ, ಸತೀಶ ನಾಟೀಕಾರ, ಮಲ್ಲಕಪ್ಪ ಹೊರ್ತಿ, ಶ್ರೀಧರ ಅವಟಿ, ಸುರೇಶ ಶಿವಪುರ, ಮಾಶೀಮ ವಾಲೀಕಾರ, ಇಸ್ಮಾಯಿಲ್ ಉಜನಿ, ಸುರೇಶ ನಡಗಡ್ಡಿ, ಕುಬೇರ ನಾವದಗಿ, ಶಿವಪ್ಪ ಹಿಪ್ಪರಗಿ ಬಂದ್‌ನ ನೇತೃತ್ವ ವಹಿಸಿದ್ದರು.

ಧರ್ಮದೇಟು ನೀಡಿ; ಗಲ್ಲಿಗೇರಿಸಿ

ಕಲಕೇರಿ: ರಾಜ್ಯ ದಲಿತ ಸಂಘರ್ಷ ಸಮಿತಿ, ಟಿಪ್ಪು ಕ್ರಾಂತಿ ಸೇನೆ, ಉಪ್ಪಾರ ಭಗೀರಥ ಸಂಘಟನೆಗಳ ನೇತೃತ್ವದಲ್ಲಿ ಗ್ರಾಮದಲ್ಲಿ ನಡೆದ ಬಂದ್‌ ಮಂಗಳವಾರ ಯಶಸ್ವಿಯಾಯಿತು.

ಇಲ್ಲಿನ ಡಾ.ಬಿ.ಆರ್.ಅಂಬೇಡ್ಕರ್‌ ವೃತ್ತದಲ್ಲಿ ಜಮಾಯಿಸಿದ ಅಪಾರ ಸಂಖ್ಯೆಯ ವಿವಿಧ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನಾ ಜಾಥಾ ಮೂಲಕ ಮುಖ್ಯ ಬಜಾರ್‌ಗೆ ತೆರಳಿ ರಸ್ತೆ ತಡೆದು, ಟೈರ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು.

ಡಿಎಸ್ಎಸ್ ಜಿಲ್ಲಾ ಸಂಘಟನಾ ಸಂಚಾಲಕ ಶರಣು ಶಿಂಧೆ, ತಾಲ್ಲೂಕು ಸಂಚಾಲಕ ಅಶೋಕ ಸುಲ್ಫಿ ಮಾತನಾಡಿ, ‘ಬಾಲಕಿ ಅಪಹರಿಸಿ ಅತ್ಯಾಚಾರಗೈದು ಕೊಲೆ ಎಸಗಿದ ಪ್ರಕರಣದಿಂದ ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ. ಆರೋಪಿಗಳಿಗೆ ಸಾರ್ವಜನಿಕವಾಗಿ ಧರ್ಮದೇಟು ನೀಡಿ, ಗಲ್ಲಿಗೇರಿಸಿದಾಗ ಮಾತ್ರ ಇಂತಹ ಘಟನೆ ಮರುಕಳಿಸಲ್ಲ’ ಎಂದು ಹೇಳಿದರು.

ಬಿಎಸ್‌ಪಿ ರಾಜ್ಯ ಕಾರ್ಯದರ್ಶಿ ದಸ್ತಗೀರ ಮುಲ್ಲಾ, ಟಿಪ್ಪು ಕ್ರಾಂತಿ ಸೇನೆ ತಾಲ್ಲೂಕು ಘಟಕದ ಅಧ್ಯಕ್ಷ ಕಾಶೀಮ ನಾಯ್ಕೋಡಿ, ಡಿಎಸ್ಎಸ್ ತಾಲ್ಲೂಕು ಸಂಚಾಲಕ ಲಕ್ಕಪ್ಪ ಬಡಿಗೇರ, ಜಾಂಗೀರಬಾಶಾ ಸಿರಸಗಿ, ಶಿವರಾಜ ದೇಶಮುಖ, ಮೈಬೂಬ ಇನಾಮದಾರ, ಯಲ್ಲಪ್ಪ ಹೊಸಮನಿ, ಮಹಾಂತೇಶ ಕಾಂಬಳೆ, ಯಮನೂರಿ ಸಿಂದಗಿರಿ, ಶಬ್ಬೀರ ಮುಲ್ಲಾ ಮಾತನಾಡಿದರು.

ದವಲು ನಾಯ್ಕೋಡಿ, ಪರಶುರಾಮ ಬಡಿಗೇರ, ನಜೀರ ಹೊನ್ನಳ್ಳಿ, ಭಾಗ್ಯವಂತ ಮೋಪಗಾರ, ಸಂಗಮೇಶ ನಡುವಿನಕೇರಿ, ಮಹಿಬೂಬ ನಾಯ್ಕೋಡಿ, ಅನಿಲ ಬಡಿಗೇರ, ರಫೀಕ ಗುಡ್ನಾಳ, ಹಾಜಿಪಾಶಾ ಕೆಂಭಾವಿ, ಮಲ್ಲು ನಾವಿ, ರವೀಂದ್ರ ಸುಧಾಕರ, ರಸೂಲ ಮಳ್ಳಿ ಬಂದ್‌ ನೇತೃ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry