7

ಕೆರೆಗಳ ಅಭಿವೃದ್ಧಿ ಅಗತ್ಯ: ಮೇಟಿ

Published:
Updated:

ಅಮೀನಗಡ: ‘ಗ್ರಾಮೀಣ ಭಾಗದ ರೈತರ ಅಭಿವೃದ್ಧಿ ದೃಷ್ಟಿಯಿಂದ ರೈತರ ಭೂಮಿಗೆ ನೀರಿಂಗಿಸುವಿಕೆ ಹಾಗೂ ನೀರಿನ ಅಂತರ್ಜಲ ಮಟ್ಟ ಹೆಚ್ಚಿಸುವಲ್ಲಿ ಕೆರೆಗಳ ಅಭಿವೃದ್ಧಿ  ಅಗತ್ಯ’ ಎಂದು ಶಾಸಕ ಎಚ್.ವೈ.ಮೇಟಿ ಹೇಳಿದರು.

ಸಮೀಪದ ಹಿರೇಮಾಗಿ ಗ್ರಾಮದಲ್ಲಿ ಜಲಸಂಪನ್ಮೂಲ ಇಲಾಖೆ ಮತ್ತು ಸಣ್ಣ ನೀರಾವರಿ ಇಲಾಖೆಯಡಿಯಲ್ಲಿ ₹ 3 ಕೋಟಿ ವೆಚ್ಚದಲ್ಲಿ ಹಿರೇಮಾಗಿ ಕೆರೆ ತುಂಬುವ ಏತ ನೀರಾವರಿ ಯೋಜನೆ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರೆವೇರಿಸಿ ಮಾತನಾಡಿದರು.

‘ಹಿರೇಮಾಗಿ ಕೆರೆ ತುಂಬುವ ಏತ ನೀರಾವರಿಗೆ ಕಾಮಗಾರಿಗೆ ಚಾಲನೆ ನೀಡಲಾಗಿದೆ.ಈ ಕೆರೆಯು ಸುಮಾರು 26.32 ದಶಲಕ್ಷ ಘನ ಮೀಟರ್ ನೀರು ಶೇಖರಣಾ ಸಾಮರ್ಥ್ಯವನ್ನು ಹೊಂದಿದೆ. ಈ ಕೆರೆ ತುಂಬುವುದರಿಂದ ಸುತ್ತಮುತ್ತಲಿನ ರೈತರ ನೀರಾವರಿ ಪ್ರದೇಶಗಳಿಗೆ, ದನಕರುಗಳಿಗೆ ನೀರಿನ ಸೌಲಭ್ಯ ಒದಗಿಸಬಹುದು ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry