7

ಸಂವಿಧಾನ ತಿದ್ದುಪಡಿ ಹೇಳಿಕೆಗೆ ಆಕ್ರೋಶ

Published:
Updated:

ಹುಮನಾಬಾದ್: ಭಾರತೀಯ ಸಂವಿಧಾನದ ಕುರಿತು ಅವಹೇಳನಕಾರಿ ಹಾಗೂ ಸಂವಿಧಾನ ತಿದ್ದುಪಡಿ ಮಾಡುತ್ತೇವೆ ಎಂಬ ಬಿಜೆಪಿ ಮುಖಂಡರ ಹೇಳಿಕೆಯನ್ನು ಖಂಡಿಸಿ, ಇಲ್ಲಿನ ವಿವಿಧ ಪ್ರಗತಿಪರ ಸಂಘಟನೆಗಳ ಸಮನ್ವಯ ಸಮಿತಿ ನೂರಾರು ಕಾರ್ಯಕರ್ತರು ಮಂಗಳವಾರ ಇಲ್ಲಿನ ಡಾ.ಅಂಬೇಡ್ಕರ್‌ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ಅನಂತಕುಮಾರ ಹೆಗಡೆ ಪ್ರತಿಕೃತಿ ದಹಿಸಿದರು.

ಸಮನ್ವಯ ಸಮಿತಿ ಪ್ರಮುಖ ಲಕ್ಷ್ಮಿಪುತ್ರ ಪಿ.ಮಾಳಗೆ ಮಾತನಾಡಿ, ಸಂವಿಧಾನ ತಿದ್ದುಪಡಿ ಮಾಡುವುದಾಗಿ ಹೇಳಿಕೆ ನೀಡಿರುವ ಅನಂತಕುಮಾರ ಹೆಗಡೆ, ಗೋ. ಮಧುಸೂಧನ್ ಮೊದಲಾದ ಮುಖಂಡರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ದೇಶದ ಸಂವಿಧಾನ ಮತ್ತು ಡಾ.ಅಂಬೇಡ್ಕರ್‌ ಅವರನ್ನು ಕುರಿತು ಅಗೌರವದ ಮಾತು ಹೇಳಿರುವ ಪೇಜಾವರ ಸ್ವಾಮೀಜಿ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಮತ್ತು ಸಚಿವ ಅನಂತಕುಮಾರ ಹೆಗಡೆ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.

ಸುರೇಶ ವಿ.ಘಾಂಗ್ರೆ, ಪ್ರಭು ತಾಳಮಡಗಿ, ಪ್ರಶಾಂತಕುಮಾರ ಜಾನವೀರ, ವಿನೋದ ಸಾಗರ, ಶರಣಪ್ಪ ಮೇತ್ರೆ, ಸೂರ್ಯಕಾಂತ ಕಟ್ಟಿಮನಿ, ಜಗನ್ನಾಥ ನವಲೆ, ಧರ್ಮರಾಯ ಘಾಂಗ್ರೆ, ಝೆರೆಪ್ಪ ಬೆಲ್ಲಾಳೆ, ಈಶ್ವರ ಕ್ರಾಂತಿ, ಪ್ರಕಾಶ ವಿ.ಕಲಾ, ವಿಷ್ಣುಕಾಂತ ಎಸ್‌.ಘಾಂಗ್ರೆ, ಸಚ್ಚಿನಕುಮಾರ ಪಾಂಡೆ ಮಾತನಾಡಿದರು.

ಮಲ್ಲಿಕಾರ್ಜುನ ಶರ್ಮಾ, ಹರಿಕೃಷ್ಣಾ, ಸಂಜೀವ ಚವಾಣ್, ಪ್ರೇಮಕುಮಾರ ಜಂಬಗೀಕರ್‌, ಸೂರ್ಯಕಾಂತ ಕಟ್ಟಿಮನಿ, ಮಂಜುನಾಥ ಹಳ್ಳಿಖೇಡ, ಡಿ.ತುಕಾರಾಮ ಇದ್ದರು.

ಸಂಚಾರಕ್ಕೆ ತೊಂದರೆ: ಪ್ರತಿಭಟನೆಯಿಂದ ಅರ್ಧ ಗಂಟೆಗೂ ಹೆಚ್ಚು ಸಮಯ ರಸ್ತೆ ಎರಡೂ ಬದಿಗೆ ವಾಹನಗಳು ಸಾಲುಗಟ್ಟಿ ನಿಂತಿದ್ದರಿಂದ ವಿವಿಧ ಊರುಗಳಿಗೆ ತೆರಳಬೇಕಿದ್ದ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry