7

ನೆರೆ ಹಾವಳಿ ಸಂತ್ರಸ್ತರಿಂದ ಪ್ರತಿಭಟನೆ

Published:
Updated:

ರಾಣಿಬೆನ್ನೂರ: ಕುಮದ್ವತಿ ನದಿಯ ನೆರೆ ಹಾವಳಿ ಸಂತ್ರಸ್ತರಿಗೆ ನಿವೇಶನ ಹಂಚುವ ವಿಚಾರದಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ, ಮಷ್ಟೂರು ಗ್ರಾಮದ ಸಂತ್ರಸ್ತರು ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಸಂತ್ರಸ್ತರಿಗೆ ಮುಷ್ಟೂರು ಗ್ರಾಮದಲ್ಲಿ ಹಂಚಿಕೆ ನಿವೇಶನಗಳನ್ನು ಹಂಚಲಾಗಿದ್ದು, ಇಲ್ಲಿ ನಡೆದಿರುವ ಅವ್ಯವಹಾರಗಳ ಬಗ್ಗೆ ಜಿಲ್ಲಾಧಿಕಾರಿಗಳು ಸೂಕ್ತ ತನಿಖೆಗೆ ಆದೇಶಿಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿರು.

ಪಿ.ಬಿ ರಸ್ತೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ಗ್ರಾಮಸ್ಥರು, ಬಳಿಕ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.  ರಮೇಶ ಹಲ್ಡಲ್ಡರ ಮಾತನಾಡಿ, ‘ ಅಧಿಕಾರಿಗಳು ಮತ್ತು ಸ್ಥಳೀಯ ಜನಪ್ರತಿನಿಧಿಗಳ ನಿಷ್ಕಾಳಜಿಯಿಂದಾಗಿ ನಿಜವಾದ ನಿರಾಶ್ರಿತರಿಗೆ ಫಲ ದೊರೆಯುತ್ತಿಲ್ಲ’ ಎಂದು ದೂರಿದರು.

‘ಪ್ರಭಾವಿಗಳ ಮತ್ತು ಅವರ ಸಂಬಂಧಿಕರ ಹೆಸರಿನಲ್ಲಿ ಹಾಗೂ 71 ನಿರಾಶ್ರಿತರಿಗೆ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿಯಿಂದ ಪಟ್ಟಾ ವಿತರಣೆ ಮಾಡಲಾಗಿದೆ. ಇದರಲ್ಲಿ 38 ನಿವೇಶನಗಳು ಮುದೇನೂರು ಗ್ರಾಮ ಪಂಚಾಯ್ತಿ ವತಿಯಿಂದ ವಿತರಣೆ ಆಗಿವೆ.  ಪಟ್ಟಾ ವಿತರಣೆಗೆ ನಕಲಿ ಸಹಿ ಮಾಡಿರುವುದು ಹಾವೇರಿ ಉಪವಿಭಾಗಾಧಿಕಾರಿಗಳ ತನಿಖೆಯಲ್ಲಿ ಬಯಲಾಗಿದೆ’ ಎಂದು ಅವರು ಆರೋಪಿಸಿದರು.

ವೆಂಕಟೇಶ ಮಾಳಿಗೇರ, ನಾಗರಡ್ಡಿ ಎರೆಕೊಪ್ಪಿ, ನಾಗಪ್ಪ ತಳವಾರ, ಶಿವಪ್ಪ ಜಾನಪ್ಪನವರ, ಬಸವಣ್ಣೆಪ್ಪ ದೇವರಮನಿ, ವಾಸಪ್ಪ ಕಿವುಡೇರ, ಈರಪ್ಪ ಬಡಿಗೇರ, ಅಣ್ಣಪ್ಪ ಹಲ್ಡಲ್ಡರ, ದೊಣ್ಣೆಪ್ಪ ಅಜ್ಜೇರ, ಲೋಕೇಶ ಕಿವುಡೇರ, ರಾಮಪ್ಪ ಹಲ್ಡಲ್ಡರ, ಪ್ರಭು ತಳವಾರ, ವಸಂತ ಬದ್ದೇರ, ಎನ್.ಆರ್.ಪಾಟೀಲ, ರಾಜು ಓಲೇಕಾರ, ನಜೀರಸಾಬ್ ಶೇತಸನದಿ, ಮಾಲತೇಶ ಅಜರಡ್ಡಿ ಹಾಗೂ ಕುಮಾರ ತಳವಾರ ಇದ್ದರು.

* * 

ನಿರ್ಮಿತಿ ಕೇಂದ್ರದವರು ಅಕ್ರಮವಾಗಿ ನಿವೇಶನ ಪಡೆದ ನಿರಾಶ್ರಿತರಿಗೆ ಮೊದಲು ಮನೆ ನಿರ್ಮಿಸಿ ಕೊಟ್ಟಿದ್ದಾರೆ. ಇವೆಲ್ಲವುಗಳ ಬಗ್ಗೆ ಸಮಗ್ರ ತನಿಖೆಯಾಗಬೇಕು

ರಮೇಶ ಹಲ್ಡಲ್ಡರ

ಮುಖಂಡ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry