7

ಬಿಸಿ ಜಾಕೆಟ್

Published:
Updated:
ಬಿಸಿ ಜಾಕೆಟ್

ಚಳಿಯಿಂದ ತಪ್ಪಿಸಿಕೊಂಡು ಮುದುಡಿ ಕೊಳ್ಳಲು ಸ್ವೆಟರ್ ಅಥವಾ ಜಾಕೆಟ್ ಬೇಕೇ ಬೇಕು. ಆದರೆ ಚಳಿ ಮಿತಿ ಮೀರಿದರೆ? ಅದಕ್ಕೆಂದೇ ದೇಹವನ್ನು ಬೆಚ್ಚಗಿರಿಸಲು ಶಾಖ ಉತ್ಪಾದಿಸುವ ಜಾಕೆಟ್ ಒಂದು ರೂಪಿತಗೊಂಡಿದೆ. ಅದೇ ರಾವೆನ್‌ ರಗ್ಡ್.

ಅಮೆರಿಕದ ರಾವೆನ್ ಕಂಪನಿ ಶಾಖ ಉತ್ಪತ್ತಿ ಮಾಡುವ ಜಾಕೆಟ್ ವಿನ್ಯಾಸಗೊಳಿಸಿರುವುದು. ಉಷ್ಣಾಂಶ ನಿರ್ವಹಿಸಲು ಮೂರು ಬಟನ್‌ ನೀಡಲಾಗಿದೆ. ಎಷ್ಟು ಬೆಚ್ಚಗಿರಬೇಕೆಂದು ಬಯಸುತ್ತೀರೋ ಅದಕ್ಕೆ ತಕ್ಕಂತೆ ಬಟನ್‌ ಇರುತ್ತದೆ. ಇದರಲ್ಲಿ ಹೀಟೆಡ್‌ ಥಂಬ್ ಹೋಲ್ ಕಫ್‌ಗಳನ್ನು ನೀಡಿರುವುದು ವಿಶೇಷ.

90 ನಿಮಿಷ ಚಾರ್ಜ್ ಮಾಡಿದರೆ 6 ಗಂಟೆವರೆಗೂ ಶಾಖ ನೀಡಬಲ್ಲದು. ಬೆನ್ನು, ಮುಂಭಾಗ ಹಾಗೂ ಕೈಗಳ ಜಾಗದಲ್ಲಿ ಬ್ಯಾಟರಿ ಪ್ಯಾಡ್ ನೀಡಲಾಗಿದೆ. ಕಿಕ್‌ ಸ್ಟಾರ್ಟರ್‌ನಲ್ಲಿ ಕ್ರೌಡ್‌ ಫಂಡಿಂಗ್ ಆರಂಭಗೊಂಡಿದ್ದು, ಮುಂದಿನ ವರ್ಷ ಮಾರುಕಟ್ಟೆಗೆ ಬರಲಿದೆಯಂತೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry