7

ಸಿರಿಧಾನ್ಯ ನೆಚ್ಚಿದ ಎಂಬಿಎ ಪದವೀಧರ

Published:
Updated:
ಸಿರಿಧಾನ್ಯ ನೆಚ್ಚಿದ ಎಂಬಿಎ ಪದವೀಧರ

ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಎಂಬಿಎ ಓದಿರುವ ಸುಬ್ರಹ್ಮಣ್ಯನಗರದ ನೀಟ್‌ ಕಾಲೊನಿ ನಿವಾಸಿ ಸತೀಶ್ ಹೊಸ ರೀತಿಯ ಉದ್ದಿಮೆ ಆರಂಭಿಸಿದ್ದಾರೆ. ಅಜೀರ್ಣ, ಬೊಜ್ಜು, ರಕ್ತದೊತ್ತಡ, ಕ್ಯಾನ್ಸರ್‌, ಸಕ್ಕರೆ ಕಾಯಿಲೆಗಳಿಗೆ ಕಡಿವಾಣ ಹಾಕಬಲ್ಲ ಆರೋಗ್ಯಕರ ಪಾನೀಯಗಳನ್ನು ಸಿದ್ಧಪಡಿಸಿ ಮಾರುತ್ತಿದ್ದಾರೆ. ರಾಗಿ ಅಂಬಲಿ, ಹಾಗಲಕಾಯಿ ಸೂಪ್, ಒಣಶುಂಠಿ ಕಷಾಯ, ಗ್ರೀನ್ ಟೀ ಹಾಗೂ ವಿವಿಧ ತರಕಾರಿ ಸೂಪ್‌ಗಳಿಗೆ ಮಾರುಕಟ್ಟೆ ಗೌರವ ಕಲ್ಪಿಸಲು ಹೆಣಗುತ್ತಿದ್ದಾರೆ.

ಇಂಥ ಪಾನೀಯಗಳನ್ನು ಯಾರಾದರೂ ಕುಡಿಯುತ್ತಾರಾ? ಎಂದು ಪ್ರಶ್ನಿಸಿದರೆ ಸತೀಶ್ ತಮ್ಮ ಮಳಿಗೆಯಲ್ಲಿರುವ ಖಾಲಿ ಗ್ಲಾಸ್‌ಗಳನ್ನು ತೋರಿಸುತ್ತಾರೆ. ಮತ್ತಿಕೆರೆ ಸಮೀಪದ ಜೆ.ಪಿ. ಉದ್ಯಾನದಲ್ಲಿ ಬೆಳಿಗ್ಗೆ 6ರಿಂದ 10 ಗಂಟೆ ಅವಧಿಯಲ್ಲಿ 200ಕ್ಕೂ ಹೆಚ್ಚು ಮಂದಿ ಇವರಿಂದ ಪಾನೀಯ ಖರೀದಿಸಿ ಸೇವಿಸುತ್ತಾರೆ.

ಬಾರ್ಲಿ, ಕಡಲೆಕಾಯಿ, ಏಲಕ್ಕಿ, ಸಬ್ಬಕ್ಕಿ, ಗೋಡಂಬಿ ಮತ್ತು ಕೆಲ ಸಿರಿಧಾನ್ಯಗಳನ್ನು ಬಳಸಿ ತಯಾರಿಸಿದ ಕಷಾಯ ಮಿಕ್ಸ್‌ ಪಾಕೆಟ್‌ಗಳೂ ಇಲ್ಲಿ ಲಭ್ಯ. 200, 250, 500 ಗ್ರಾಂ ಮತ್ತು 1 ಕೆ.ಜಿ.ಯ ಪಾಕೆಟ್‌ಗಳೂ ಇಲ್ಲಿವೆ. ಬೀನ್ಸ್‌, ಹೂಕೋಸು, ಎಲೆಕೋಸು, ಟಮೊಟೊ, ಮೆಂತೆ ಸೊಪ್ಪು ಮತ್ತು ಪಾಲಕ್‌ ಸೊಪ್ಪಿನಿಂದ ಇವರು ತಯಾರಿಸುವ ಸೂಪ್‌ಗೂ ಬಹುಬೇಡಿಕೆ ಇದೆ.ಶನಿವಾರ, ಭಾನುವಾರ ಮಾತ್ರ ಸೂಪ್ ಲಭ್ಯ.

ಮೈಸೂರಿನ ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಲಯದಲ್ಲಿ (ಸಿಎಫ್‌ಟಿಆರ್‌) ಆರೋಗ್ಯಕರ ಪಾನೀಯ ತಯಾರಿ ತರಬೇತಿ ಪಡೆದಿದ್ದಾರೆ.

ಇವರ ಮಳಿಗೆಯಲ್ಲಿ ಪ್ಲಾಸ್ಟಿಕ್ ಬಳಕೆ ಇಲ್ಲ. ಸ್ಟೀಲ್, ಕಂಚಿನ ಪಾತ್ರೆ–ಲೋಟಗಳನ್ನು ಬಳಸುತ್ತಾರೆ. ಇದೀಗ ಲಾಲ್‌ಬಾಗ್ ಹಾಗೂ ಸ್ಯಾಂಕಿಕೆರೆ ಬಳಿಯೂ ಪಾನೀಯ ಮಾರಾಟ ವಿಸ್ತರಿಸಿದ್ದಾರೆ.

ಸತೀಶ್ ಅವರ ಸಂಪರ್ಕಕ್ಕೆ: ಮೊ 9902220297. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry