7

ಜೆರುಸಲೇಂ ರೈಲ್ವೆ ನಿಲ್ದಾಣಕ್ಕೆ ಟ್ರಂಪ್ ಹೆಸರು

Published:
Updated:

ಜೆರುಸಲೇಂ (ಎಎಫ್‌ಪಿ): ಜೆರುಸಲೇಂನ ನೂತನ ರೈಲ್ವೆ ನಿಲ್ದಾಣವೊಂದಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೆಸರಿಡಲಾಗುವುದು ಎಂದು ಸಾರಿಗೆ ಸಚಿವ ಯಿಸ್ರೇಲ್ ಕಾಟ್ಜ್ ಹೇಳಿದ್ದಾರೆ.

‘ಜೆರುಸಲೇಂ ಅನ್ನು ಇಸ್ರೇಲ್‌ ರಾಜಧಾನಿ ಎಂದು ಘೋಷಿಸುವ ಮೂಲಕ ಟ್ರಂಪ್  ಐತಿಹಾಸಿಕ ಮತ್ತು ದಿಟ್ಟ ನಿರ್ಧಾರ ಕೈಗೊಂಡಿದ್ದಾರೆ. ಈ ನಿರ್ಧಾರಕ್ಕಾಗಿ ಟ್ರಂಪ್‌ ಅವರಿಗೆ ಸಲ್ಲಿಸುವ ಗೌರವ ಇದಾಗಿದೆ’ ಎಂದು ಅವರು ಹೇಳಿದ್ದಾರೆ.

ಯಹೂದಿಗಳ ಪವಿತ್ರ ಸ್ಥಳವಾಗಿರುವ ಪಶ್ಚಿಮ ಗೋಡೆ ಸಮೀಪವೇ ನಿರ್ಮಾಣವಾಗುವ ರೈಲ್ವೆ ನಿಲ್ದಾಣಕ್ಕೆ ಡೊನಾಲ್ಡ್ ಟ್ರಂಪ್ ಎಂದು ಹೆಸರಿಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry