7

ಪತಂಜಲಿಗೆ ಅತ್ಯಂತ ವಿಶ್ವಾಸಾರ್ಹ ಬ್ರ್ಯಾಂಡ್‌ನ ಗರಿ

Published:
Updated:
ಪತಂಜಲಿಗೆ ಅತ್ಯಂತ ವಿಶ್ವಾಸಾರ್ಹ ಬ್ರ್ಯಾಂಡ್‌ನ ಗರಿ

ಹರಿದ್ವಾರ: ಬಾಬಾ ರಾಮದೇವ್‌ ನೇತೃತ್ವದಲ್ಲಿನ ಪತಂಜಲಿ ಆಯುರ್ವೇದ ಸಂಸ್ಥೆಯು, ‘ಅತ್ಯಂತ ವಿಶ್ವಾಸಾರ್ಹ ಎಫ್‌ಎಂಸಿಜಿ ಬ್ರ್ಯಾಂಡ್‌  (ತ್ವರಿತವಾಗಿ ಬಿಕರಿಯಾಗುವ ಗ್ರಾಹಕ ಉತ್ಪನ್ನಗಳ) ಖ್ಯಾತಿಗೆ ಪಾತ್ರವಾಗಿದೆ.

‘ಬ್ರ್ಯಾಂಡ್‌ ಟ್ರಸ್ಟ್‌’, ನಡೆಸಿದ ‘ಭಾರತ ಅಧ್ಯಯನ 2017’ರ ವರದಿಯಲ್ಲಿ 11 ಸಾವಿರ ಕಂಪೆನಿಗಳ ಪೈಕಿ ಪತಂಜಲಿ ಈ ಮನ್ನಣೆಗೆ ಪಾತ್ರವಾಗಿದೆ. ಇದರ ಜತೆಗೆ, 10 ಸಾವಿರ ಕಂಪೆನಿಗಳ ಸಾಲಿನಲ್ಲಿ, ಅತ್ಯಂತ ಆಕರ್ಷಕ ಬ್ರ್ಯಾಂಡ್‌ ಎನ್ನುವ ಖ್ಯಾತಿಯನ್ನೂ ಪಡೆದಿದೆ.

‘ಗ್ರಾಹಕರು ನಮ್ಮ ಮೇಲೆ ಇರಿಸಿರುವ ವಿಶ್ವಾಸವು ನಾವು ಇನ್ನಷ್ಟು ಪರಿಶ್ರಮಪಡಲು ಉತ್ತೇಜನ ನೀಡಿದೆ. ನಮ್ಮ ಉತ್ಪನ್ನಗಳು ಶೇ 100ರಷ್ಟು ಶುದ್ಧತೆ ಹೊಂದಿರುವುದೇ ನಮ್ಮ ಯಶಸ್ಸಿನ ಮಂತ್ರವಾಗಿದೆ’ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಆಚಾರ್ಯ ಬಾಲಕೃಷ್ಣ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry