7

ಕಾಫಿ ರಫ್ತು ಪ್ರಮಾಣ ಹೆಚ್ಚಳ

Published:
Updated:

ನವದೆಹಲಿ: ದೇಶದ ಕಾಫಿ ರಫ್ತು ಪ್ರಮಾಣವು ಜನವರಿ–ನವೆಂಬರ್‌ ಅವಧಿಯಲ್ಲಿ ಶೇ 8.08 ರಷ್ಟು ಹೆಚ್ಚಾಗಿದ್ದು, 3.61 ಲಕ್ಷ ಟನ್‌ಗಳಿಗೆ ತಲುಪಿದೆ.

ಕಳೆದ ವರ್ಷ ಇದೇ ಅವಧಿಯಲ್ಲಿ 3.34 ಲಕ್ಷ ಟನ್‌ ರಫ್ತು ಮಾಡಲಾಗಿತ್ತು ಎಂದು ಕಾಫಿ ಮಂಡಳಿ ಮಾಹಿತಿ ನೀಡಿದೆ.

ಭಾರತದಿಂದ ಇಟಲಿ, ಜರ್ಮನಿ ಮತ್ತು ರಷ್ಯಾಕ್ಕೆ ಅತಿ ಹೆಚ್ಚಿನ ಪ್ರಮಾಣದಲ್ಲಿ ಕಾಫಿ ರಫ್ತಾಗುತ್ತಿದೆ. ಅರೇಬಿಕಾ ಮತ್ತು ರೋಬಸ್ಟಾ ಎರಡನ್ನೂ ರಫ್ತು ಮಾಡಲಾಗುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry