7

ಬಿಡದ ಚಾಳಿ!

Published:
Updated:

ವಿಶ್ವ ಸಂಸ್ಥೆಯಿಂದ ಛೀಮಾರಿ ಹಾಕಿಸಿಕೊಂಡು ಅಪಮಾನಕ್ಕೆ ಈಡಾಗಿದ್ದ ಪಾಕಿಸ್ತಾನವು ತನ್ನ ಹಳೆಯ ಚಾಳಿಯನ್ನು ಬಿಡುವಂತೆ ಕಾಣುತ್ತಿಲ್ಲ. ಗಡಿ ಪ್ರದೇಶಗಳಲ್ಲಿ ಕದನ ವಿರಾಮ ಉಲ್ಲಂಘಿಸುತ್ತ ಅಶಾಂತಿ ಸೃಷ್ಟಿಸುವ ಪ್ರಯತ್ನದಲ್ಲಿದೆ. ಕೆಲವು ದಿನಗಳ ಹಿಂದೆ ಜಮ್ಮು ಕಾಶ್ಮೀರದ ರಾಜೌರಿ ಜಿಲ್ಲೆಯ ಗಡಿ ನಿಯಂತ್ರಣ ಪ್ರದೇಶದ ಒಳಗೆ ನುಸುಳಿದ ಪಾಕ್ ಉಗ್ರರು, ಭಾರತದ ನಾಲ್ವರು ಯೋಧರ ಹತ್ಯೆ ಮಾಡಿ ಅಟ್ಟಹಾಸ ಮರೆದಿದ್ದರು. ಇದಕ್ಕೆ ಪ್ರತಿಯಾಗಿ ಭಾರತೀಯ ಯೋಧರು ಪಾಕ್ ಆಕ್ರಮಿತ ಕಾಶ್ಮೀರ ನೆಲದೊಳಗೆ ನುಗ್ಗಿ ಮೂವರು ಪಾಕ್ ಯೋಧರನ್ನು ಹತ್ಯೆಮಾಡಿ ಎಚ್ಚರಿಕೆಯ ಪಾಠ ಕಲಿಸಿದ್ದಾರೆ.

ಇನ್ನಾದರೂ ಪಾಕಿಸ್ತಾನ ಬುದ್ಧಿ ಕಲಿತು. ಭಾರತದ ಗಡಿ ಪ್ರದೇಶಗಳಲ್ಲಿ ತನ್ನ ಉಪಟಳ ನಿಲ್ಲಿಸಲಿ.

–ಮೌಲಾಲಿ ಕೆ. ಬೋರಗಿ, ಸಿಂದಗಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry