7

ಕೋಟ್ಯಧಿಪತಿ!

Published:
Updated:

ಸಚಿವ ಅನಂತಕುಮಾರ್ ಹೆಗಡೆ ಅವರ ನಾಲಿಗೆ ಕತ್ತರಿಸಿ ಕೊಟ್ಟವರಿಗೆ ₹ 1 ಕೋಟಿ ಬಹುಮಾನ ನೀಡುವುದಾಗಿ ಕಲಬುರ್ಗಿಯ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಗುರುಶಾಂತ ಪಟ್ಟೇದಾರ ಘೋಷಿಸಿದ್ದಾರೆ (ಪ್ರ.ವಾ., ಡಿ. 27)!

ಆ ನಾಲಿಗೆಯನ್ನು ಈ ಮಹಾನುಭಾವರು ಏನು ಮಾಡುತ್ತಾರೆ? ಆ ನಾಲಿಗೆಗೆ ಅಷ್ಟೊಂದು ಬೆಲೆ ಕಟ್ಟಲು ಕಾರಣವೇನು?

ಜಿಲ್ಲಾ ಪಂಚಾಯಿತಿಯ ಮಾಜಿ ಸದಸ್ಯರ ಬಳಿ, ಕೋಟ್ಯಂತರ ರೂಪಾಯಿ ಬಹುಮಾನ ಕೊಡುವಷ್ಟು ಹಣ ಇದೆಯೆಂದಾದರೆ, ಇವರೇನಾದರೂ ಶಾಸಕ ಅಥವಾ ಮಂತ್ರಿಯಾಗಿದ್ದರೆ ಬಹುಮಾನದ ಮೊತ್ತ ಎಷ್ಟಿರುತ್ತಿತ್ತು? ಸಚಿವರ ನಾಲಿಗೆಗೆ ಕೊಡುವ ಬದಲು, ಆ ಹಣವನ್ನು ಕಲಬುರ್ಗಿಯ ಜನರ ಸೇವೆಗೆ ಬಳಸಿದ್ದರೆ ಪಟ್ಟೇದಾರರು ಹೆಚ್ಚು ಎತ್ತರಕ್ಕೇರುತ್ತಿದ್ದರು.

–ಪಿ.ಜೆ.ರಾಘವೇಂದ್ರ, ಮೈಸೂರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry