3

‘ಬಸವಣ್ಣ ವ್ಯಕ್ತಿಯಲ್ಲ, ಚೈತನ್ಯ ರೂಪ’

Published:
Updated:

ಜಮಖಂಡಿ: ‘ವಿಶ್ವಗುರು ಬಸವಣ್ಣನನ್ನು ವ್ಯಕ್ತಿ ರೂಪದಲ್ಲಿ ನೋಡಬಾರದು. ಬಸವಣ್ಣನನ್ನು ಚೈತನ್ಯ ರೂಪದಲ್ಲಿ ಕಾಣಬೇಕು. ಪರಿವರ್ತನಾತ್ಮಕ ಚಿಂತನವನ್ನು ವಚನಗಳಲ್ಲಿ ಲಿಂಗವಾಗಿ ನುಡಿದಿದ್ದಾರೆ’ ಎಂದು ಬಸವ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಅರವಿಂದ ಜತ್ತಿ ಹೇಳಿದರು.

ತಾಲ್ಲೂಕಿನ ಹುನ್ನೂರ–ಮಧುರಖಂಡಿ ಗ್ರಾಮಗಳ ಬಸವಜ್ಞಾನ ಗುರುಕುಲದ ಆಶ್ರಯದಲ್ಲಿ ಬುಧವಾರ ನಡೆದ ಶರಣ ಸಂಸ್ಕೃತಿ ಉತ್ಸವ ಹಾಗೂ ಜಾನಪದ ಕಲಾ ಮಹೋತ್ಸವ ಸಮಾರೋಪ ಸಮಾರಂಭದಲ್ಲಿ ಗುರುಕುಲದ ವತಿಯಿಂದ ನೀಡಲಾದ ‘ಬಸವಚೇತನ’ ರಾಜ್ಯ ಮಟ್ಟದ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

ಬೆಂಗಳೂರಿನ ಜಲ ಸಾಕ್ಷರತೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅಯ್ಯಪ್ಪ ಮಸಗಿ ರಾಜ್ಯ ಮಟ್ಟದ ‘ಕೃಷಿಚೇತನ’ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

ಹೈಕೋರ್ಟ್‌ನ ನಿವೃತ್ತ ನ್ಯಾಯ ಮೂರ್ತಿ ಅರಳಿ ನಾಗರಾಜ ಅಧ್ಯಕ್ಷತೆ ವಹಿಸಿದ್ದರು.

ಮಾಜಿ ಸಚಿವ ಕುಷ್ಟಗಿಯ ಅಮರೇಗೌಡ ಪಾಟೀಲ, ದಾವಣಗೆರೆಯ ಬಸವ ಬಳಗದ ವಿ. ಸಿದ್ಧರಾಮಣ್ಣ, ಶಿರೂರಿನ ಮಹಾಂತತೀರ್ಥದ ಡಾ.ಬಸವಲಿಂಗ ಶ್ರೀಗಳು, ಮಾಜಿ ಸಚಿವ ಎಸ್‌.ಎಸ್‌. ಪಾಟೀಲ, ಭದ್ರಾವತಿಯ ಶರಣೆ ಗಂಗಾಬಿಕೆ ಇತರರು ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry