ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜನವರಿಯಲ್ಲಿ ನೂತನ ತಾಲ್ಲೂಕು ಕಚೇರಿ’

Last Updated 28 ಡಿಸೆಂಬರ್ 2017, 5:44 IST
ಅಕ್ಷರ ಗಾತ್ರ

ಮೂಡಲಗಿ: ‘ಜನವರಿ ಅಂತ್ಯದೊಳಗೆ ಮೂಡಲಗಿ ಹೊಸ ತಾಲ್ಲೂಕಿನ ಕಚೇರಿಗಳ ಕಾರ್ಯನಿರ್ವಹಣೆ ಆರಂಭವಾಗಲಿದೆ’ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.

‘ಹೊಸ ತಾಲ್ಲೂಕಿಗೆ ಹೋಬಳಿ ಕೇಂದ್ರದ ಅವಶ್ಯವಿದೆ. ಈಗಾಗಲೇ ಮೂಡಲಗಿಗೆ ಅರಭಾವಿ ಹೋಬಳಿ ಸೇರಿಸಲಾಗಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು

ತಾಲ್ಲೂಕಿಗೆ ಹೋಬಳಿ ಕೇಂದ್ರದ ಅಗತ್ಯ ಇದೆ. ಕೌಜಲಗಿ ಹೊಬಳಿ ಯನ್ನು ಮೂಡಲಗಿಗೆ ಸೇರಿಸಲು ಎಲ್ಲ  ಪ್ರಯತ್ನ ಮಾಡಲಾಗುವುದು’ ಎಂದರು.

ಗವಿಮಠದಲ್ಲಿ ಈಚೆಗೆ ನಡೆದ ಜನಸಂಪರ್ಕ ಸಭೆಯಲ್ಲಿ ಖಾಲಿ ನಿವೇಶನಗಳಿಗೆ ಕೋರಿದ್ದಾರೆ ಆದರೆ ಈಗ ನಿರ್ಗತಿಕ ಕುಟುಂಬಗಳಿಗೆ ವಸತಿ ಸೌಲಭ್ಯ ನಿರ್ಮಿಸುವ ಚಿಂತನೆ ನಡೆದಿದೆ ಎಂದರು.

ಪುರಸಭೆಯಿಂದ ನಗರೋತ್ಥಾನ ಯೋಜನೆಯಡಿ ₹ 7.5 ಕೋಟಿ ವೆಚ್ಚದ ವಿವಿಧ ಕಾಮಗಾರಿ ಆರಂಭವಾಗಿವೆ.  ತೋಟಗಳಿಗೆ ರಸ್ತೆ ನಿರ್ಮಿಸಲಾಗುತ್ತಿದೆ. ಮಾರ್ಚ್‌ ಅಂತ್ಯದೊಳಗೆ ರಸ್ತೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರು.

ತಾಲ್ಲೂಕು ಹೋರಾಟದಲ್ಲಿ ಕೆಲ ವರು ಕುಟುಂಬದ ವಿರುದ್ಧ ಅವಹೇಳನಕಾರಿಯಾಗಿ ಮಾತನಾ ಡಿದ್ದಾರೆ.  ರಾಜಕೀಯ ಮಾಡುವವರು ಅಭಿ ವೃದ್ಧಿ ವಿಚಾರದಲ್ಲಿ ಮಾಡಲಿ. ಕುಟುಂಬದ ವಿರುದ್ಧ ಆಧಾರ ರಹಿತ ಟೀಕೆ ಮಾಡಿದರೆ ಅಂತಹವರ ಮನೆ ಎದುರು ಬೆಂಬಲಿಗರು ಧರಣಿ ನಡೆಸುವರು ಎಂದರು.

ಬರುವ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಚುನಾಯಿತನಾಗುವೆ. ರಾಜ್ಯ ದಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಅಧಿಕಾರಿ ಹಿಡಿಯಲಿದೆ ಎಂದರು.

ಪುರಸಭೆ ಅಧ್ಯಕ್ಷ ಕಮಲವ್ವ ಹಳಬರ, ಉಪಾಧ್ಯಕ್ಷ ರವಿ ಸೋನವಾಲಕರ, ಬಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಸುಭಾಷ ಢವಳೇಶ್ವರ, ವೀರಣ್ಣ ಹೊಸೂರ, ರವಿ ಸಣ್ಣಕ್ಕಿ, ರಾಮಣ್ಣಾ ಹಂದಿಗುಂದ, ಎನ್.ಟಿ. ಪಿರೋಜಿ ಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT