7
ಮೊಳಕಾಲ್ಮುರು: ಬಿಜೆಪಿ ರಾಲಿ ಯಶಸ್ವಿಗೆ ಸಹಕಾರಿಸಲು ಮನವಿ

ಬಿಜೆಪಿ ಪರಿವರ್ತನಾ ರಾಲಿ; ಪೂರ್ವಭಾವಿ ಸಭೆ

Published:
Updated:

ಮೊಳಕಾಲ್ಮುರು: ಜನವರಿರಂದು ಪಟ್ಟಣಕ್ಕೆ ಬರುತ್ತಿರುವ ಬಿಜೆಪಿ ಪರಿವರ್ತನಾ ರ‍್ಯಾಲಿಯ ಹಿನ್ನೆಲೆಯಲ್ಲಿ ಇಲ್ಲಿನ ದುರ್ಗಾದೇವಿ ದೇವಸ್ಥಾನ ಆವರಣದಲ್ಲಿ ಬುಧವಾರ ಪೂರ್ವಭಾವಿ ಸಭೆ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಎಸ್‌. ತಿಪ್ಪೇಸ್ವಾಮಿ, ‘ರಾಜ್ಯಸರ್ಕಾರದ ದುರಾಡಳಿತ ಹಾಗೂ ಕೇಂದ್ರ ಸರ್ಕಾರದ ಸಾಧನೆಗಳನ್ನು ಜನರಲ್ಲಿ ಮನವರಿಕೆ ಮಾಡಲು ಯಾತ್ರೆ ಕೈಗೊಳ್ಳಲಾಗಿದೆ. ಇದರಿಂದ ಮುಂದಿನ ದಿನಳಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವ ಸ್ಥಿತಿ ನಿರ್ಮಾಣವಾಗಬೇಕು. ಈ ನಿಟ್ಟಿನಲ್ಲಿ ಕಾರ್ಯಕರ್ತರು ಹಾಗೂ ಮುಖಂಡರು ಶಕ್ತಿಮೀರಿ ಸಹಕಾರ ನೀಡಬೇಕು’ ಎಂದು ಹೇಳಿದರು.

ಜಿಲ್ಲಾಪಂಚಾಯ್ತಿ ಮಾಜಿ ಸದಸ್ಯ ಎಚ್‌.ಟಿ. ನಾಗರೆಡ್ಡಿ ಮಾತನಾಡಿ, ‘ಸಮಗ್ರ ಅಭಿವೃದ್ಧಿ ಬಿಜೆಪಿಯಿಂದ ಮಾತ್ರ ಸಾಧ್ಯ. ಕಾಂಗ್ರೆಸ್‌ನಿಂದ ಅಭಿವೃದ್ಧಿ ಶೂನ್ಯವಾಗಿದೆ.

ಹಿಂದೂಗಳನ್ನು ಒಡೆದು ಆಳುವ ಕಾರ್ಯವನ್ನು ರಾಜ್ಯಸರ್ಕಾರ ಮಾಡುತ್ತಿದೆ. ಅನ್ನಭಾಗ್ಯ ಯೋಜನೆಗೆ ಕೇಂದ್ರಸರ್ಕಾರ ಅನುದಾನವೇ ಹೆಚ್ಚಾಗಿದೆ, ಆದರೆ ಇದನ್ನು ಮರೆಮಾಚುವ ಕಾರ್ಯವನ್ನು ರಾಜ್ಯಸರ್ಕಾರ ಮಾಡುತ್ತಿದೆ’ ಎಂದು ದೂರಿದರು.

ಟಿ. ರೇವಣ್ಣ, ಜಿಲ್ಲಾ ಕಾರ್ಯದರ್ಶಿ ಜಯಪಾಲಯ್ಯ, ಜಿಂಕಲು ಬಸವರಾಜ್‌, ಕೃಷ್ಣಪ್ಪ, ಡಿ.ಒ. ಮೊರಾರ್ಜಿ, ರಾಜಶೇಖರ ಗಾಯಕವಾಡ್‌, ತಾಲ್ಲೂಕು ಪಂಚಾಯ್ತಿ ಸದಸ್ಯರಾದ ಎಸ್. ತಿಪ್ಪೇಸ್ವಾಮಿ, ನರೇಂದ್ರಬಾಬು, ಶಿವಕುಮಾರ್‌, ಹೊನ್ನೂರು ಗೋವಿಂದಪ್ಪ, ಗುಂಡ್ಲೂರು ಕರಿಯಣ್ಣ, ಎಸ್‌ಸಿ ಮೋರ್ಚಾ, ಎಲ್‌. ಪರಮೇಶ್ವರಪ್ಪ, ಎಸ್.ಟಿ. ಚಂದ್ರಣ್ಣ, ಶಾಂತಾರಾಂ ಬಸಾಪತಿ, ಟಿ.ಟಿ ರವಿಕುಮಾರ್‌ ಅವರೂ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry