ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಎಂಎಫ್ ಧೋರಣೆ ಖಂಡಿಸಿ ಪ್ರತಿಭಟನೆ 29ಕ್ಕೆ

ಳೆಯ ಪಿಂಚಣಿ ಯೋಜನೆ ಜಾರಿಯಲ್ಲಿ ಕರ್ನಾಟಕ ಹಾಲು ಒಕ್ಕೂಟ ವಿಳಂಬಕ್ಕೆ ಆಕ್ರೋಶ
Last Updated 28 ಡಿಸೆಂಬರ್ 2017, 8:37 IST
ಅಕ್ಷರ ಗಾತ್ರ

ಧಾರವಾಡ: ಹಳೆಯ ಪಿಂಚಣಿ ಯೋಜನೆ ಜಾರಿಯಲ್ಲಿ ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ಆಡಳಿತ ಮಂಡಳಿ ಅನುಸರಿಸುತ್ತಿರುವ ವಿಳಂಬ ಧೋರಣೆ ಖಂಡಿಸಿ ಬೆಂಗಳೂರಿನ ಕೇಂದ್ರ ಕಚೇರಿ ಎದುರಿಗೆ ಡಿ 29ರಂದು ಕೆಎಂಎಫ್ ಜಿಲ್ಲಾ ಹಾಲು ಒಕ್ಕೂಟಗಳ ನೌಕರರ ಫೆಡರೇಶನ್ ವತಿಯಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಅಧ್ಯಕ್ಷ ವಿ.ಎನ್. ಹಳಕಟ್ಟಿ ಹೇಳಿದರು.

ಹಿರಿಯ ನೌಕರರಿಗೆ ಹಳೆಯ ಪಂಚಣಿ ಯೋಜನೆ ಜಾರಿಗೆ ಒತ್ತಾಯಿಸಿ ಕೆಎಂಎಫ್, ಡಿಎಂಯು ಅಧಿಕಾರಿಗಳ ಹಾಗೂ ನೌಕರರ ಜಂಟಿ ಸಮನ್ವಯ ಸಮಿತಿ ಪ್ರಸ್ತಾವ ಸಲ್ಲಿಸಿ 7–8 ತಿಂಗಳು ಕಳೆದಿದೆ. ಆದರೂ ಕೆಎಂಎಫ್ ಆಡಳಿತ ಮಂಡಳಿ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

’ಸರ್ಕಾರ ಸೆಪ್ಟೆಂಬರ್ 2016ಕ್ಕೂ ಮೊದಲು ನೇಮಕಗೊಂಡ ನೌಕರರಿಗೆ ಹಳೆಯ ಪಿಂಚಣಿ ಯೊಜನೆಯಡಿ ನಿವೃತ್ತಿ ವೇತನ ನೀಡದೇ, ಹೊಸ ಪಿಂಚಣಿ ನೀಡಲು ಮುಂದಾಗಿದೆ. ಇದರಿಂದ ಸುಮಾರು 20–22 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ನೌಕರರಿಗೆ ಅನ್ಯಾಯ ಆಗಲಿದೆ. ಇದನ್ನು ಸರಿಪಡಿಸಲು ಕೆಎಂಎಫ್‌ಗೆ ಮನವಿ ಮಾಡಿದ್ದರೂ, ಕೇವಲ ಆಶ್ವಾಸನೆ ನೀಡುತ್ತ ಬರಲಾಗುತ್ತಿದೆ’ ಎಂದು ಆರೋಪಿಸಿದರು.

‘2016ಕ್ಕೂ ಮೊದಲೇ ಸುಮಾರು 4917 ಹಿರಿಯ ನೌಕರರು ನೇಮಕವಾಗಿದ್ದು, ಕೆಲವರು ಸರ್ಕಾರಿ ಇಲಾಖೆಗಳಿಗೆ ನಿಯೋಜನೆಗೊಂಡು ನಂತರ ಪುನಃ ಕೆಎಂಎಫ್‌ಗೆ ಮರು ನಿಯೋಜನೆಗೊಂಡು ನಿವೃತ್ತಿಯಾಗಿದ್ದಾರೆ. ಅವರಿಗೆ ಹಳೆಯ ಪಿಂಚಣಿ ಯೋಜನೆಯಡಿ ನಿವೃತ್ತಿ ವೇತನ ಮಂಜೂರು ಮಾಡುವುದನ್ನು ಬಿಟ್ಟು ಹೊಸ ಪಿಂಚಣಿ ಯೋಜನೆ ಜಾರಿಗೊಳಿಸಲು ಮುಂದಾಗಿರುವುದು ನೌಕರರಿಗೆ ಮಾಡುತ್ತಿರುವ ಅನ್ಯಾಯ’ ಎಂದು ಹೇಳಿದರು.

2016ರ ನಂತರ ನೇಮಕಗೊಂಡ ನೌಕರರಿಗೆ ಸದ್ಯ ಜಾರಿಗೆ ತಂದಿರುವ ನಿವೃತ್ತಿ ವೇತನ ಯೋಜನೆಯಡಿ ಎನ್‌ಪಿಎಸ್‌ ಪರಿಷ್ಕರಿಸಿ ಆಡಳಿತ ವರ್ಗ ಪ್ರತಿಶತ ಶೇ 20ರಷ್ಟು ಹಾಗೂ ನೌಕರರು ಶೇ 10ರಷ್ಟು ಕ್ರೋಡೀಕರಿಸುವ ಬದಲು(ಇಪಿಎಫ್ ಮತ್ತು ಎನ್‌ಡಿಎಸ್) ಒಂದನ್ನೇ ಪರಿಷ್ಕರಿಸಿ ಎನ್‌ಪಿಎಸ್ ಜಾರಿಗೆ ತರಬೇಕು. ಹಿರಿಯರಿಗೆ ಹಳೆಯ ಯೋಜನೆಯನ್ವಯ, ಹೊಸಬರಿಗೆ ಹೊಸ ಪಿಂಚಣಿ ಯೋಜನೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ಕೆಎಂಎಫ್ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸುವಲ್ಲಿ ಅನುಸರಿಸಿದ ವಿಳಂಬ ಧೋರಣೆ ಖಂಡಿಸಿ ಪ್ರತಿಭಟನೆ ನಡೆಸಲಾಗುತ್ತಿದ್ದು, 14 ಹಾಲು ಒಕ್ಕೂಟಗಳು ಹಾಗೂ ಅಂಗ ಸಂಸ್ಥೆಗಳ ಸುಮಾರು 300 ಕ್ಕೂ ಅಧಿಕ ನೌಕರರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು.

ಫೆಡರೇಷನ್ ಕಾರ್ಯಾಧ್ಯಕ್ಷ ಎನ್.ಎಸ್.ಅರವಳದ, ಎಂ.ಎಸ್.ಹಿರೇಮಠ, ಬಿ.ಜಗನ್ನಾಥ, ಬಿ.ಎಸ್.ಹಿಂಬಗೇರಿ, ಕೆ.ಎಸ್.ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT