6
ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಅಗಿಲೆ ಯೋಗೀಶ್‌

ರೈಲ್ವೆ ಮೇಲ್ಸೇತುವೆ ಬಿಎಸ್‌ವೈ ಹೋರಾಟದ ಫಲ

Published:
Updated:

ಹಾಸನ: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಪ್ರಯತ್ನದಿಂದ ಹೊಸ ಬಸ್ ನಿಲ್ದಾಣ ಸಮೀಪ ರೈಲ್ವೆ ಮೇಲ್ಸೇತುವೆ ನಿರ್ಮಾಣ ಕಾಮಗಾರಿಗೆ ಕೆಂದ್ರ ಸರ್ಕಾರ ಅನುದಾನ ನೀಡಲು ಒಪ್ಪಿಗೆ ಸೂಚಿಸಿದೆ ಎಂದು ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಅಗಿಲೆ ಯೋಗೇಶ್ ಹೇಳಿದರು.

‘ಹಿರಿಯ ನಾಗರಿಕರು ಹಾಗೂ ವಿವಿಧ ಸಂಘಟನೆಗಳು ಬೀದಿಗಿಳಿದು ಹೋರಾಟ ಮಾಡಿದ್ದರಿಂದ ರಾಜ್ಯ ಸರ್ಕಾರ ತನ್ನ ಪಾಲಿನ ಹಣವನ್ನು ಬಜೆಟ್ ನಲ್ಲಿ ನೀಡಲು ಒಪ್ಪಿಗೆ ನೀಡಿತು. ಕೇಂದ್ರದಿಂದ ಅನುದಾನ ತರಲು ಶ್ರಮಿಸಿರುವ ಯಡಿಯೂರಪ್ಪ ಅವರನ್ನು ಭೂಮಿಪೂಜೆಗೆ ಆಹ್ವಾನಿಸಬೇಕು’ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

‘ಹೊಳೆನರಸೀಪುರ ತಾಲ್ಲೂಕು ಹಂಗರಹಳ್ಳಿಯಲ್ಲಿ ರೈಲ್ವೆ ಮೇಲ್ಸೇತುವೆ ಕಾಮಗಾರಿ ಮುಕ್ತಾಯ ಹಂತಕ್ಕೆ ಬಂದರೂ ಶಾಸಕ ರೇವಣ್ಣ, ಹಾಸನ ರೈಲ್ವೆ ಮೇಲ್ಸೇತುವೆ ಬಗ್ಗೆ ಇದುವರೆಗೂ ಮಾತನಾಡಿರಲಿಲ್ಲ. ಅವರು ಎಲ್ಲ ಕಡೆಯೂ ಜನರಿಗೆ ತೊಂದರೆ ನೀಡುವ ಕೆಲಸಗಳನ್ನೇ ಮಾಡಿಕೊಂಡು ಬಂದಿದ್ದಾರೆ. ಸದಾನಂದ ಗೌಡರು ಕೇಂದ್ರ ರೈಲ್ವೆ ಸಚಿವರಾಗಿದ್ದಾಗ ಒತ್ತಡ ಹೇರಿ ಹಂಗರಹಳ್ಳಿಗೆ ರೈಲ್ವೆ ಮೇಲ್ಸೇತುವೆ ಮಾಡಿಸಿರುವ ಇವರು ಹಾಸನದ ವಿಚಾರದಲ್ಲಿ ನಿರ್ಲಕ್ಷ್ಯ ತೋರಿದ್ದಾರೆ’ ಎಂದು ಟೀಕಿಸಿದರು.

‘ಕುಡಿಯುವ ನೀರಿನ ಸಮಸ್ಯೆ ಬಂದಾಗ ಮಾತ್ರ ಹೇಳಿಕೆ ನೀಡಲು ಮುಂದೆ ಬರುತ್ತಾರೆ. ಟ್ಯಾಂಕರ್‌ಗಳಲ್ಲಿ ನೀರು ಪೂರೈಕೆಯಲ್ಲಿ ಅವ್ಯವಹಾರ ನಡೆದಿದೆ. ಜೆಡಿಎಸ್‌ ಕಾರ್ಯಕರ್ತರಿಗೆ ಹಣ ಮಾಡಿಕೊಡುವ ಉದ್ದೇಶದಿಂದ ಕುಡಿಯುವ ನೀರಿಗೆ ಅನುದಾನ ಕೇಳುತ್ತಿದ್ದಾರೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry