7

‘ಅಭಿವೃದ್ಧಿ ಕಾರ್ಯಗಳಿಗೆ ರಾಜಕೀಯ ಸಲ್ಲ’

Published:
Updated:

ಅಕ್ಕಿಆಲೂರ: ಮಲಗುಂದ ಗ್ರಾಮ ಪಂಚಾಯ್ತಿಯ ಒಂದನೇ ವಾರ್ಡ್‌ ಉಪ ಚುನಾವಣೆಯಲ್ಲಿ ವಿಜಯ ಸಾಧಿಸಿರುವ ಬಸವರಾಜ್ ಯಲ್ಲಪ್ಪ ನಿಂಬಕ್ಕನವರ ಬುಧವಾರ ಗ್ರಾಮ ಪಂಚಾಯ್ತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ನಂತರ ಮಾತನಾಡಿದ ಅವರು, ‘ಅಭಿವೃದ್ಧಿ ಕಾರ್ಯಗಳಲ್ಲಿ ರಾಜಕೀಯ ಮಾಡಬಾರದು. ಎಲ್ಲರೂ ಗ್ರಾಮದ ಜನತೆಗೆ ಮೂಲ ಸೌಕರ್ಯ ಒದಗಿಸಿಕೊಡಬೇಕು’ ಎಂದರು.

ಗ್ರಾಮ ಪಂಚಾಯ್ತಿ ಅಧ್ಯಕ್ಷ ಸುಭಾಷ್ ದೊಡ್ಡಕೋವಿ ಅಧ್ಯಕ್ಷತೆ ವಹಿಸಿದ್ದರು. ಸದಸ್ಯರಾದ ಷಣ್ಮುಖಪ್ಪ ಬೆಳಗಾಲ, ನಂದಾ ಪೂಜಾರ, ರತ್ನವ್ವ ಗುಡ್ಡದವರ, ಚಂದ್ರಶೇಖರ ಗೊಟಗೋಡಿ, ಪಿಡಿಒ ನಾಗರಾಜ್ ಎಲ್., ಬಸವರಾಜ್ ಹೊಸಳ್ಳಿ, ಗಿರಿಜವ್ವ ದೊಡ್ಡಮನಿ, ಮೂಕಪ್ಪ ಕುರಿಕಾಯರ, ಮುತ್ತಯ್ಯ ಹಿರೇಮಠ, ಹನುಮಂತಪ್ಪ ಕುಕ್ಕೇರ, ಯಲ್ಲಪ್ಪ ತಳವಾರ, ಸಿದ್ದಲಿಂಗಪ್ಪ ಪೂಜಾರ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry