7

ಹೆಂಗೈತೆ ನನ್‌ ಫೋಟೊ!

Published:
Updated:
ಹೆಂಗೈತೆ ನನ್‌ ಫೋಟೊ!

ಮುಂಬೈನಲ್ಲಿ ನಡೆದ ವಿರುಷ್ಕಾ ಜೋಡಿಯ ಆರತಕ್ಷತೆ ಕಾರ್ಯಕ್ರಮದಲ್ಲಿ ಸಂಗೀತ ದಿಗ್ಗಜ ಎ.ಆರ್‌.ರೆಹಮಾನ್‌ ಹಾಗೂ ಕ್ರಿಕೆಟಿಗ ಯುವರಾಜ್‌ ಸಿಂಗ್‌ ಕ್ಲಿಕ್ಕಿಸಿದ ಸೆಲ್ಫಿ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ.

ಮದುವೆ ಆರತಕ್ಷತೆ ವೇಳೆ ಎ.ಆರ್‌. ರೆಹಮಾನ್‌, ವಿರಾಟ್‌ ಮತ್ತು ಅನುಷ್ಕಾ ಜೋಡಿ ಜೊತೆ ತೆಗೆಸಿಕೊಂಡ ಫೋಟೊದಲ್ಲಿ ಅವರ ಮುಖ ಹತ್ತಿರದಿಂದ ಫೋಕಸ್‌ ಆಗಿದೆ. ಆದರೆ ‘ವಿರುಷ್ಕಾ’ ಬ್ಲರ್‌ ಆಗಿದ್ದಾರೆ. ದೇಶದೆಲ್ಲೆಡೆ ವಿರುಷ್ಕಾ ಜೋಡಿಯ ಸುದ್ದಿಯೇ ಹೈಲೈಟ್‌. ಆದರೆ ರೆಹಮಾನ್‌ ಅವರ ಫೋಟೊದಲ್ಲಿ ಮಾತ್ರ ರೆಹಮಾನ್‌ ಅವರೇ ಹೈಲೈಟ್‌. ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ರೆಹಮಾನ್‌ ಟ್ವೀಟಿಗರಿಂದ ವಿಡಂಬನೆಗೆ ಪಾತ್ರರಾಗಿದ್ದಾರೆ. ಅಭಿಮಾನಿಗಳು ‘ಮದುಮಕ್ಕಳನ್ನೇ ಔಟ್‌ ಆಫ್‌ ಫೋಕಸ್‌ ಮಾಡಿದ್ದೀರ’, ‘ನಿಮ್ಮಲ್ಲಿರೋದು ಕೂಡ ನಮ್ಮಂಥದೇ ಫೋನಾ’ ಎಂದು ಮರುಟ್ವೀಟ್‌ ಮಾಡಿ, ರೆಹಮಾನ್‌ ಅವರ ಕಾಲೆಳೆದಿದ್ದಾರೆ.

ಆರತಕ್ಷತೆಗೆ ಬಂದಿದ್ದ ಕ್ರಿಕೆಟಿಗ ಯುವರಾಜ್‌ ಸಿಂಗ್‌, ಅನುಷ್ಕಾ ಶರ್ಮಾ ಜೊತೆ ಫೋಟೊ ತೆಗೆಸಿಕೊಂಡಿದ್ದಾರೆ. ಇದನ್ನೇ ಟ್ವಿಟರ್‌ನಲ್ಲಿ ಹಾಕಿ ಮದುಮಕ್ಕಳಿಗೆ ಶುಭಾಶಯ ಕೋರಿದ್ದಾರೆ. ಈ ಫೋಟೊದಲ್ಲಿ ‘ವಿರಾಟ್‌ನೊಂದಿಗೆ ಕೋಪಗೊಂಡಿದ್ದೀರಾ ಯುವಿ’, ವಿರಾಟ್‌ ಅವರನ್ನು ಯಾಕೆ ಕ್ರಾಪ್‌ ಮಾಡಿದ್ದೀರಾ’ ಎಂದು ಅನೇಕರು ಟ್ವೀಟ್‌ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry