ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಶ್ಮೀರಿ ಚಿಲ್ಲಿ ಚಿಕನ್‌ ಸಮೋಸಕ್ಕೆ ಬಹುಮಾನ

Last Updated 28 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಜೋಹಾನ್ಸ್‌ಬರ್ಗ್‌: ಇಲ್ಲಿನ ಭಾರತೀಯ ಸಮುದಾಯವದರಿಗೆ ಆಯೋಜಿಸಿದ್ದ ಸಮೋಸ ಸಿದ್ಧಪಡಿಸುವ ಸ್ಪರ್ಧೆಯಲ್ಲಿ ಪ್ರಸಿದ್ಧ ಕಾಶ್ಮೀರಿ ಚಿಲ್ಲಿ ಚಿಕನ್‌ ಭರಿತ ಸಮೋಸ ಮೊದಲ ಬಹುಮಾನ ಪಡೆದಿದೆ.

ಇಲ್ಲಿನ ‘ವೀಕ್ಲಿ ಪೋಸ್ಟ್‌’ ವಾರಪತ್ರಿಕೆ ಮೊದಲ ಸಲ ಈ ಸ್ಪರ್ಧೆ ಆಯೋಜಿಸಿತ್ತು. ಸ್ಪರ್ಧೆಯಲ್ಲಿ ಚಾಕೊಲೇಟ್‌, ಗೋಡಂಬಿ, ಮತ್ತಿತರ ಪದಾರ್ಥಗಳನ್ನು ಬಳಸಿ ಸಮೋಸ ತಯಾರಿಸಲಾಗಿತ್ತು. ಅವುಗಳನ್ನು ಹಿಂದಿಕ್ಕಿ, ಕಾಶ್ಮೀರಿ ಚಿಲ್ಲಿ ಚಿಕನ್‌ ಸಮೋಸ ಪ್ರಶಸ್ತಿ ಗಳಿಸಿದೆ.

ಸಲ್ಮಾ ಅಗ್ಜೀ ಈ ಸ್ಪರ್ಧೆಯ ವಿಜೇತರು. ‘ಮಕ್ಕಳಿಗೆ ಚಿಕನ್‌ ಸ್ಯಾಂಡ್‌ವಿಚ್‌ ಮಾಡಿ ಕೊಡುತ್ತಿದ್ದೆ. ಆಗ ಚಿಕನ್‌ ಅನ್ನು ಕಾಶ್ಮೀರಿ ಮೆಣಸಿನ ಪುಡಿ ಬಳಸಿ ಸಿದ್ಧಪಡಿಸುತ್ತಿದ್ದೆ. ಈಗ ಅದೇ ಕಾಶ್ಮೀರಿ ಮೆಣಸಿನ ಪುಡಿ ಬಳಸಿ ಸಮೋಸ ಸಿದ್ಧಪಡಿಸಿದ್ದೆ’ ಎಂದು ಸಲ್ಮಾ ತಿಳಿಸಿದ್ದಾರೆ.

‘ಅಡುಗೆ ಮಾಡುವುದನ್ನು ಇಷ್ಟಪಡುತ್ತೇನೆ. ಯಾವುದೇ ಖಾದ್ಯ ತಯಾರಿಕೆ ವಿಧಾನದಲ್ಲಿ ಒಂದಷ್ಟು ಬದಲಾವಣೆ ಮಾಡಿ, ಅದನ್ನು ಇನ್ನಷ್ಟು ರುಚಿಕರವಾಗಿಸಲು ಬಯಸುತ್ತೇನೆ’ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT