7

ಕಾಬೂಲ್‌ ಸರಣಿ ಸ್ಫೋಟ 40 ಮಂದಿ ಸಾವು

Published:
Updated:
ಕಾಬೂಲ್‌ ಸರಣಿ ಸ್ಫೋಟ 40 ಮಂದಿ ಸಾವು

ಕಾಬೂಲ್‌: ಅಫ್ಗಾನಿಸ್ತಾನದ ರಾಜಧಾನಿ ಕಾಬೂಲ್‌ನ ಕೇಂದ್ರ ಭಾಗದಲ್ಲಿರುವ ಶಿಯಾ ಸಮುದಾಯದ ಸಾಂಸ್ಕೃತಿಕ ಕೇಂದ್ರದಲ್ಲಿ ಗುರುವಾರ ಸಂಭವಿಸಿದ ಸರಣಿ ಸ್ಫೋಟದಲ್ಲಿ 40 ಮಂದಿ ಮೃತಪಟ್ಟು, 12ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಸಾವು, ನೋವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಆಂತರಿಕ ಭದ್ರತಾ ಸಚಿವಾಲಯ ತಿಳಿಸಿದೆ. ಐಎಸ್‌ ಸಂಘಟನೆ ಈ ಸ್ಫೋಟದ ಹೊಣೆ ಹೊತ್ತುಕೊಂಡಿದೆ. ಗುಪ್ತಚರ ಇಲಾಖೆ ಕಚೇರಿ ಆವರಣದಲ್ಲಿ ಬುಧವಾರ ಆರು ನಾಗರಿಕರನ್ನು ಬಲಿ ಪಡೆದ ಐಎಸ್‌ ಆತ್ಮಾಹುತಿ ದಾಳಿಯ ಬೆನ್ನಲ್ಲೇ ಈ ಘಟನೆ ನಡೆದಿದೆ.

ಅಫ್ಗಾನಿಸ್ತಾನದ ಮೇಲಿನ ಸೋವಿಯತ್‌ ರಷ್ಯಾದ ದಾಳಿಯ 38ನೇ ವರ್ಷಾಚರಣೆ ಸಮಾರಂಭ ನಡೆಯುತ್ತಿದ್ದ ಸಂದರ್ಭದಲ್ಲಿ ಸ್ಫೋಟ ಸಂಭವಿಸಿದೆ.

ಶಿಯಾಟ್‌ ತಬಾವನ್‌ ಸಾಂಸ್ಕೃತಿಕ ಕೇಂದ್ರದಲ್ಲಿ ಒಂದರ ನಂತರ ಒಂದರಂತೆ ಒಟ್ಟು ಮೂರು ಬಾಂಬ್‌ ಸ್ಫೋಟಿಸಿವೆ.

ಮೊದಲ ಬಾಂಬ್‌ ಮಾತ್ರ ಪ್ರಬಲವಾಗಿತ್ತು. ಉಳಿದೆರೆಡು ಬಾಂಬ್‌ ಅಷ್ಟೊಂದು ಶಕ್ತಿಶಾಲಿಯಾಗಿರಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry