7

30ರಂದು ಜೇವರ್ಗಿ ಬಂದ್‌ಗೆ ಕರೆ

Published:
Updated:

ಜೇವರ್ಗಿ: ‘ಸಂವಿಧಾನ ವಿರೋಧಿ ಹೇಳಿಕೆ ನೀಡಿದ ಕೇಂದ್ರ ಸಚಿವ ಅನಂತಕುಮಾರ ಹೆಗಡೆಯನ್ನು ಸಂಪುಟದಿಂದ ವಜಾಗೊಳಿಸಬೇಕು. ವಿಜಯಪುರ ಅತ್ಯಾಚಾರ, ಕೊಲೆ ಘಟನೆಯ ದುಷ್ಕರ್ಮಿಗಳನ್ನು ಗಲ್ಲಿಗೇರಿ ಸಬೇಕು’ ಎಂದು ಒತ್ತಾಯಿಸಿ ದಲಿತ ಸಂಘಟನೆಗಳ ಸಮನ್ವಯ ಸಮಿತಿ, ಹಿಂದುಳಿದ, ಅಲ್ಪಸಂಖ್ಯಾತರ ಹಾಗೂ ಪ್ರಗತಿಪರ ಸಂಘಟನೆಗಳ ಹೋರಾಟ ಸಮಿತಿ ಡಿ. 30ರಂದು ಜೇವರ್ಗಿ ಬಂದ್‌ಗೆ ಕರೆ ನೀಡಿದೆ.

ಗುರುವಾರ ಬೆಳಿಗ್ಗೆ ಸೇರಿದ್ದ ವಿವಿಧ ಸಂಘಟನೆಗಳ ಮುಖಂಡರು, ಪದಾಧಿಕಾರಿಗಳ ಸಭೆ, ಅನಂತ ಕುಮಾರ ಹೆಗಡೆಯ ಸಂವಿಧಾನ ವಿರೋಧಿ ಹೇಳಿಕೆ ಹಾಗೂ ವಿದ್ಯಾರ್ಥಿನಿ ಕೊಲೆ ಪ್ರಕರಣವನ್ನು ಖಂಡಿಸಿತು.

ಸಭೆಯಲ್ಲಿ ಮಾತನಾಡಿದ ದಲಿತ ಮುಖಂಡ ಚಂದ್ರಶೇಖರ ಹರನಾಳ, ‘ಸಂವಿಧಾನ ವಿರೋಧಿ, ರಾಷ್ಟ್ರವಿರೋಧಿ ಹೇಳಿಕೆ ನೀಡಿರುವ ಅನಂತಕುಮಾರ ಹೆಗಡೆ ಅವರನ್ನು ತಕ್ಷಣ ಸಚಿವ ಸ್ಥಾನದಿಂದ ವಜಾಗೊಳಿಸಬೇಕು. ರಾಷ್ಟ್ರ ವಿರೋಧಿ ಕಾಯ್ದೆ ಅಡಿ ಬಂಧಿಸ ಬೇಕು. ಬಾಲಕಿಯ ಅತ್ಯಾಚಾರ, ಕೊಲೆ ಮಾಡಿದವರಿಗೆ ಗಲ್ಲುಶಿಕ್ಷೆ ವಿಧಿಸಬೇಕು’ ಎಂದು ಒತ್ತಾಯಿಸಿದರು.

‘ಪ್ರಮುಖ ಎರಡು ಬೇಡಿಕೆಗಳಿಗಾಗಿ ಆಗ್ರಹಿಸಿ ಡಿ. 30ರಂದು ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ಜೇವರ್ಗಿ ಬಂದ್‌ಗೆ ಕರೆ ನೀಡಲಾಗಿದೆ. ಈ ಬಂದ್‌ಗೆ ತಾಲ್ಲೂಕಿನ ವಿವಿಧ ಸಂಘಟನೆಗಳು ಬೆಂಬಲ ವ್ಯಕ್ತ ಪಡಿಸಿವೆ’ಎಂದು ಹರನಾಳ ತಿಳಿಸಿದರು.ಶಾಂತಿಯುತ ಬಂದ್ ಆಚರಣೆಗೆ ನಾಗರಿ ಕರು ಸಹಕರಿಸಬೇಕೆಂದು ಕೋರಿದರು.

ಮುಖಂಡರಾದ ಅಶೋಕ ಸಾಹು ಗೋಗಿ, ಸುಭಾಷ ಚನ್ನೂರ್, ಮರೆಪ್ಪ ಬಡಿಗೇರ್, ಭೀಮರಾಯ ನಗನೂರ್, ದೊಡ್ಡೇಶ ಕೊಂಬಿನ್, ಪುಂಡಲಿಕ ಗಾಯಕವಾಡ, ಮಲ್ಲಿಕಾರ್ಜುನ ದಿನ್ನಿ, ಶ್ರೀಹರಿ ಕರಕಿಹಳ್ಳಿ, ಶ್ರೀಮಂತ ಧನಕರ್, ದವಲಪ್ಪ ಮದನ್, ಭಾಗಣ್ಣ ಸಿದ್ನಾಳ, ತುಳಜಾರಾಮ ರಾಠೋಡ್, ತಿಪ್ಪಣ್ಣ ರಾಠೋಡ್, ರವಿ ಕುರಳಗೇರಾ, ಶರಣಬಸವ ಕಲ್ಲಾ, ಮೈಲಾರಿ ಬಣಮಿ, ಸುಧೀಂದ್ರ ಇಜೇರಿ, ಮಲ್ಲಣ್ಣ ಕೊಡಚಿ, ಭಗವಂತರಾಯ ಬೆಣ್ಣೂರ್, ಚಾಂದ್‌ಪಾಶಾ ಜಮಾದಾರ್, ರಸೂಲ್ ಇನಾಮದಾರ್, ರಾಜಾಪಟೇಲ್, ರೌಫ್ ಹವಾಲ್ದಾರ್, ಸಿದ್ದಪ್ಪ ಆಲೂರ್, ದೇವಿಂದ್ರ ಮುದವಾಳ, ಮಲ್ಲಮ್ಮ ಕೊಬ್ಬಿನ್, ಪ್ರಭಾಕರ ಸಾಗರ, ಬಸ್ಸುಗೌಡ ಬಿರಾದಾರ್, ತಿಪ್ಪಣ್ಣ ಕನಕ, ಜಗದೇವಿ ಜಟ್ನಾಕರ್, ವಿಶ್ವಾರಾಧ್ಯ ಬಡಿಗೇರ್, ವಿಶ್ವಾರಾಧ್ಯ ಗಂವ್ಹಾರ್, ದೇವಿಂದ್ರ ವರ್ಮಾ, ಬೆಣ್ಣೆಪ್ಪ ಕೊಂಬಿನ್, ರಾಜಶೇಖರ ಶಿಲ್ಪಿ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಹಾಗೂ ಪದಾಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry