ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗವಿಮಠ; ನಾಳೆ ಏರಲಿದೆ ಬಸವಪಟ

Last Updated 29 ಡಿಸೆಂಬರ್ 2017, 7:14 IST
ಅಕ್ಷರ ಗಾತ್ರ

ಕೊಪ್ಪಳ: ಜಾತ್ರೆಗೆ ಡಿಸೆಂಬರ್‌ 29ರ ಒಂದು ದಿನ ಮಾತ್ರ ಬಾಕಿ ಇದೆ. ಅದಾಗಲೇ ನಗರದಾದ್ಯಂತ ಜಾತ್ರೆಯ ಸಂಭ್ರಮ ಮನೆ ಮಾಡಿದೆ. ನಗರದ ರಸ್ತೆಗಳನ್ನು ಪೌರ ಕಾರ್ಮಿಕರು ಗುಡಿಸಿ ಸ್ವಚ್ಛಗೊಳಿಸುತ್ತಿದ್ದಾರೆ. ಜ. 3ರಂದು ಎಳೆಯಲಿರುವ ತೇರು ಸ್ವಚ್ಛಗೊಂಡಿದೆ. ಡಿ. 30ರಂದು ಬಸವಪಟ ಏರಿಸುವ ಮೂಲಕ ಜಾತ್ರೆಗೆ ವಿದ್ಯುಕ್ತ ಚಾಲನೆ ದೊರೆಯಲಿದೆ.

ಇಂದು ಸಂಜೆ (ಡಿ.29) ಜಾತ್ರೆಯ ಹಿನ್ನೆಲೆಯಲ್ಲಿ ಜಿಲ್ಲಾ ಅಥ್ಲೆಟಿಕ್ಸ್‌ ಸಂಸ್ಥೆ ವತಿಯಿಂದ ನಗರದ ಸಾರ್ವಜನಿಕ ಮೈದಾನದಲ್ಲಿ ಹೊನಲು ಬೆಳಕಿನ ವಾಲಿಬಾಲ್‌ ಪಂದ್ಯ ನಡೆಯಲಿದೆ.

ನಾಳೆ (ಡಿ. 30) 'ಸಶಕ್ತ ಮನ- ಸಂತೃಪ್ತ ಜೀವನ' ಪರಿಕಲ್ಪನೆ ಅಡಿ ನಮ್ಮ ನಡೆ ಒತ್ತಡರಹಿತ ಬದುಕಿನ ಕಡೆ ವಿಷಯವಾಗಿ ಜಾಗೃತಿ ಜಾಥಾ ನಡೆಯಲಿದೆ. ನಗರದ ಬನ್ನಿಕಟ್ಟೆಯ ಗೌರಿಶಂಕರ ದೇವಸ್ಥಾನದ ಬಳಿಯಿಂದ ಗವಿಮಠದವರೆಗೆ ಜಿಲ್ಲಾಡಳಿತದ ಸಹಯೋಗದಲ್ಲಿ ಜಾಥಾ ನಡೆಯಲಿದೆ. ಬಳಿಕ ಡಾ.ಕೃಷ್ಣ ಓಂಕಾರ್‌ ಅವರಿಂದ ವಿಶೇಷ ಉಪನ್ಯಾಸ ನಡೆಯಲಿದೆ.

ಜಾತ್ರಾ ಮೈದಾನದಲ್ಲಿ ಸ್ವಚ್ಛತೆ, ಸಮತಟ್ಟುಗೊಳಿಸುವಿಕೆ, ವಸ್ತು ಪ್ರದರ್ಶನ ಮಳಿಗೆ ನಿರ್ಮಾಣ ಇತ್ಯಾದಿ ಬಹುತೇಕ ಪೂರ್ಣಗೊಂಡಿದೆ. ಕೃಷಿ ಮೇಳ, ರಕ್ತದಾನ ಶಿಬಿರ, ತೋಟಗಾರಿಕೆ ಇಲಾಖೆಯ ವಸ್ತು ಪ್ರದರ್ಶನಕ್ಕೂ ಆಯಾ ಇಲಾಖೆಯವರು ಸಿದ್ಧತೆ ನಡೆಸಿದ್ದಾರೆ.

ಸಿಹಿತಿಂಡಿ ಮಳಿಗೆಗಳಲ್ಲಿ ಈಗಾಗಲೇ ತಿನಿಸು ತಯಾರಿಕೆ ಆರಂಭವಾಗಿದೆ. ಹರಿದು ಬರುತ್ತಿರುವ ದವಸ ಧಾನ್ಯ ಮಹಾದಾಸೋಹಕ್ಕೆ ದವಸ, ಧಾನ್ಯಗಳು ಗವಿಮಠಕ್ಕೆ ಹರಿದುಬರುತ್ತಲಿವೆ. ಗುರುವಾರ ಉಪ್ಪಲದೊಡ್ಡಿಯ ಭಕ್ತರಿಂದ 3 ಸಾವಿರ ರೊಟ್ಟಿ. ಹೂವಿನಾಳ ಹಾಗೂ ವಡ್ಡಿನಾಳ ಗ್ರಾಮಸ್ಥರಿಂದ ತಲಾ 1,100 ರೊಟ್ಟಿ, ದವಸ ಧಾನ್ಯ, ದವಸ ಧಾನ್ಯ ಜಹಗೀರ ಗುಡದೂರ ಗ್ರಾಮಸ್ಥರಿಂದ 1 ಕ್ವಿಂಟಲ್ ಜೋಳದ ರೊಟ್ಟಿ, ದವಸ ಧಾನ್ಯ, ಚಿಲವಾಡಗಿ ಗ್ರಾಮಸ್ಥರಿಂದ 2 ಸಾವಿರ ರೊಟ್ಟಿ, ದವಸ ಧಾನ್ಯ, ದೇವಲಾಪುರ ಗ್ರಾಮಸ್ಥರಿಂದ 1,626 ರೊಟ್ಟಿ, ದವಸ ಧಾನ್ಯ, ವಣಗೇರಿ 5 ಸಾವಿರ ರೊಟ್ಟಿ, ದವಸ ಧಾನ್ಯ, ಕೋಳಿಹಾಳ ಗ್ರಾಮಸ್ಥರಿಂದ 18 ಸಾವಿರ ರೊಟ್ಟಿ, ದವಸ ಧಾನ್ಯ, ಕಲ್ಲತಾವರಗೇರಾ ಗ್ರಾಮಸ್ಥರಿಂದ 8 ಸಾವಿರ ರೊಟ್ಟಿ, ದವಸ ಧಾನ್ಯ ಕೂಕನಪಳ್ಳಿ ಗ್ರಾಮಸ್ಥರಿಂದ 10 ಸಾವಿರ ರೊಟ್ಟಿ, ದವಸ ಧಾನ್ಯ, ಹಿರೇಸಿಂಧೋಗಿ ಗ್ರಾಮಸ್ಥರಿಂದ 650 ರೊಟ್ಟಿ ಹಾಗೂ ದವಸ ಧಾನ್ಯ, ಹಂಚಿನಾಳ ಗ್ರಾಮಸ್ಥರಿಂದ 10 ಸಾವಿರ ರೊಟ್ಟಿ, ದವಸ ಧಾನ್ಯ, ಓಬಳಬಂಡಿ ಗ್ರಾಮಸ್ಥರಿಂದ 3 ಸಾವಿರ ರೊಟ್ಟಿ, ದವಸ ಧಾನ್ಯ, ಅಬ್ಬಿಗೇರಿ ಗ್ರಾಮಸ್ಥರಿಂದ 501 ರೊಟ್ಟಿ, ದವಸ ಧಾನ್ಯ ಮಠಕ್ಕೆ ಬಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT