7

ಭಾಲ್ಕಿ: ಸಚಿವರ ಹೇಳಿಕೆ ಖಂಡಿಸಿ ಧರಣಿ

Published:
Updated:

ಭಾಲ್ಕಿ: ಪಟ್ಟಣದಲ್ಲಿ ಗುರುವಾರ ಭಾರತೀಯ ದಲಿತ ಪ್ಯಾಂಥರ್‌ ಸಂಘಟನೆ ಪದಾಧಿಕಾರಿಗಳು ಈಚೆಗೆ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಸಂವಿಧಾನ ಬದಲಾವಣೆ ಕುರಿತು ನೀಡಿರುವ ಹೇಳಿಕೆ ಖಂಡಿಸಿ ಧರಣಿ ಸತ್ಯಾಗ್ರಹ ನಡೆಸಿ ತಹಶೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಮುಖರು, ಸಚಿವ ಅನಂತಕುಮಾರ ಹೆಗಡೆ ಅವರು ಬೇಜವಬ್ದಾರಿ ಹೇಳಿಕೆ ನೀಡುವ ಮೂಲಕ ಡಾ.ಬಿ.ಆರ್. ಅಂಬೇಡ್ಕರ್‌ ಹಾಗೂ ಸಂವಿಧಾನಕ್ಕೆ ಘೋರ ಅವಮಾನ ಮಾಡಿದ್ದಾರೆ. ಸಮಾಜದಲ್ಲಿ ಅಶಾಂತಿ ಉಂಟು ಮಾಡುತ್ತಿದ್ದಾರೆ. ಅವರನ್ನು ಕೂಡಲೇ ಸಚಿವ ಸ್ಥಾನದಿಂದ ಕೈಬಿಡಬೇಕು ಎಂದು ರಾಷ್ಟ್ರಪತಿಗೆ ಬರೆದ ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.

ಪ್ರಮುಖರಾದ ಮನೋಹರ ಮೋರೆ, ಪ್ರಕಾಶ ಭಾವಿಕಟ್ಟೆ, ಕೈಲಾಸ ಎಸ್‌.ಭಾವಿಕಟ್ಟೆ, ಸುನೀಲ ಕಾಂಬ್ಳೆ, ಮಾರುತಿ ಭಾವಿಕಟ್ಟೆ, ರಾಜಕುಮಾರ ಸಿರ್ಸಿಕರ್‌, ಮಲ್ಲಿಕಾರ್ಜುನ ಫುಲೆ, ಅನಿಲ್‌ ಸೂರ್ಯವಂಶಿ, ರಾಜಕುಮಾರ ಉಜ್ವಲೆ, ಭರತ ಕಾಂಬಳೆ, ರಮೇಶ ಮಿತ್ರಾ, ಮನೋಹರ ಗಾಯಕವಾಡ, ಪ್ರವೀಣ ಮೋರೆ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry