7

ರಂಗೇರಲಿ ಮೋಜಿನ ಪಾರ್ಟಿ

Published:
Updated:
ರಂಗೇರಲಿ ಮೋಜಿನ ಪಾರ್ಟಿ

ಹೊಸ ವರ್ಷವನ್ನು ಸ್ವಾಗತಿಸಲು ಮೋಜಿನ ಕೂಟಗಳು ನಡೆಯುವುದು ಸಾಮಾನ್ಯ. ಪಾರ್ಟಿ ಅಂದ ಮೇಲೆ ಪಾನ–ಗಾನ ಗೋಷ್ಠಿಗಳೂ ಇರಬೇಕಲ್ಲವೇ? ಪಾನಗೋಷ್ಠಿ ಎಂದಾಕ್ಷಣ ಮದ್ಯಸೇವನೆ ಎಂದಷ್ಟೇ ಅರ್ಥವಲ್ಲ. ಯಾವುದೇ ಹಣ್ಣಿನ ರಸ, ತಂಪುಪಾನೀಯಗಳೂ ಪಾರ್ಟಿಗೆ ಕಳೆತರಬಲ್ಲವು.

ಪಾರ್ಟಿ ರಂಗೇರಲು ಏನೆಲ್ಲಾ ಮಾಡಬಹುದು? ಇಲ್ಲಿವೆ ನೋಡಿ ಒಂದಿಷ್ಟು ಟಿಪ್ಸ್...

* ಪಾರ್ಟಿ ಆರಂಭವಾಗುವ ಮೊದಲು ಕನಿಷ್ಠ 25 ಹಾಡುಗಳ ಪಟ್ಟಿ ಮಾಡಿಕೊಳ್ಳಿ.

* ಪಾರ್ಟಿಯಲ್ಲಿ ಸೇರಿಕೊಳ್ಳುವ ಸ್ನೇಹಿತರು ಅಥವಾ ಬಂಧುಗಳ ಪಟ್ಟಿ ಮಾಡಿ ಅವರೊಂದಿಗೆ ಅವರಿಷ್ಟದ ಹಾಡುಗಳ ಬಗ್ಗೆ ಚರ್ಚಿಸಿ.

* ಹಾಡಿನ ಭಾಷೆಯನ್ನು ಎಚ್ಚರಿಕೆಯಿಂದ ಆಯ್ಕೆ ಮಾಡಿ, ಡಾನ್ಸ್‌ಗೆ ಹೊಂದುವ ವೇಗದ ಧಾಟಿಯ ಹಾಡುಗಳಿಗೆ ಆದ್ಯತೆ ಇರಲಿ.

* ಯೂಟ್ಯೂಬ್ ಮತ್ತು ಇತರ ವೆಬ್‌ಸೈಟ್‌ಗಳಲ್ಲಿ ಸಿಗುವ ಇಷ್ಟದ ಹಾಡುಗಳ ಲಿಂಕ್‌ಗಳನ್ನು ಬುಕ್‌ಮಾರ್ಕ್‌ ಮಾಡಿಕೊಳ್ಳಿ. ಡೌನ್‌ಲೋಡ್ ಮಾಡಿಕೊಂಡು, ಪ್ರತ್ಯೇಕ ಫೋಲ್ಡರ್‌ಗಳಲ್ಲಿ ಸೇವ್‌ಮಾಡಿಕೊಳ್ಳುವುದು ಒಳಿತು.

* ಅಗತ್ಯವಿದ್ದರೆ ಮಾತ್ರ ಲೌಡ್ ಸ್ಪೀಕರ್ ಬಳಸಿ. ಇಲ್ಲದಿದ್ದರೆ ಮೊಬೈಲ್ ಸ್ಪೀಕರ್‌ಗಳೇ ಸಾಕು. amp me ಥರದ ಆ್ಯಪ್‌ಗಳಿಂದ ಹಲವರ ಮೊಬೈಲ್‌ಗಳಲ್ಲಿ ಒಮ್ಮೆಲೆ, ಒಂದೇ ಹಾಡು ಜೋರಾಗಿ ಮೊಳಗುವಂತೆ ಮಾಡಬಹುದು.

* ಪವರ್‌ಬ್ಯಾಂಕ್ ಮತ್ತು ಮೊಬೈಲ್‌ಗಳನ್ನು ಚಾರ್ಜ್‌ ಮಾಡಿಕೊಳ್ಳಲು ಮರೆಯದಿರಿ.

* ಮನೆಯ ಹಿರಿಯರೂ ನಿಮ್ಮೊಂದಿಗೆ ಸೇರಿಕೊಳ್ಳುವ ಸಾಧ್ಯತೆ ಇದ್ದರೆ ಅವರ ಆಸಕ್ತಿಗಳನ್ನೂ ಗಮನದಲ್ಲಿಟ್ಟುಕೊಳ್ಳಿ.

* ಗಾನಗೋಷ್ಠಿ ಎಷ್ಟು ಗಂಟೆ ನಡೆಯುತ್ತದೆ ಎಂಬುದನ್ನು ಪ್ಲಾನ್ ಮಾಡಿಕೊಳ್ಳಿ. ಆರಂಭ, ಮಧ್ಯ ಮತ್ತು ಅಂತ್ಯದ ಹಾಡುಗಳನ್ನು ಎಚ್ಚರಿಕೆಯಿಂದ ಆಯ್ಕೆ ಮಾಡಿಕೊಳ್ಳಿ.

* ಆರಂಭದಲ್ಲಿ ಫಾಸ್ಟ್ ನಂಬರ್ ಇದ್ದರೆ ನಿಮ್ಮ ಪಾರ್ಟಿಯ ಸ್ವರೂಪ ಹೇಗಿರುತ್ತದೆ ಎಂದು ನೀವು ವಿವರಿಸುವ ಅಗತ್ಯವೇ ಇಲ್ಲ ಅಲ್ಲವೇ?

* ಪಾರ್ಟಿಗೆ ಮಾಂಸಾಹಾರವೇ ಇರಬೇಕಾಗಿಲ್ಲ. ನಾಲಿಗೆಯ ರುಚಿಮೊಗ್ಗುಗಳ ಮೂಲಕ ಉತ್ಸಾಹವನ್ನು ಬಡಿದೆಬ್ಬಿಸುವಂಥ ಸಸ್ಯಾಹಾರವೂ ಆದೀತು.

* ಲಘು ಉಪಾಹಾರ ಅಥವಾ ಆಹಾರ ಸೇವನೆಯ ನಂತರವೇ ಪಾರ್ಟಿ ಆರಂಭವಾಗಲಿ. ಗಂಟೆಗಟ್ಟಲೆ ಖುಷಿಪಡಲು ಹೊಟ್ಟೆಯೂ ಗಟ್ಟಿಯಾಗಿರಬೇಕು.

* ಮೋಜಿನ ಆಟ, ಅಂತ್ಯಾಕ್ಷರಿ, ಅಚ್ಚರಿಯ ಉಡುಗೊರೆ, ಅಪರೂಪದ ಆದರೆ ಎಲ್ಲರಿಗೂ ಬೇಕಾಗುವ ಅತಿಥಿಗಳನ್ನು ಕರೆಸಿ ಎಲ್ಲರಿಗೂ ಅಚ್ಚರಿ ಕೊಡುವುದು, ಒಬ್ಬೊಬ್ಬರೂ ಮಿಮಿಕ್ರಿ, ಮೋಜಿನ ಸಂಗತಿಗಳನ್ನು ಹೇಳಿಕೊಳ್ಳುವುದು ಪಾರ್ಟಿಯ ಕಳೆಹೆಚ್ಚಿಸಬಲ್ಲದು.

* ಸಮಾನ ಆಸಕ್ತರ ಗುಂಪು ಇದ್ದರೆ ಈಚೆಗೆ ಓದಿದ ಪುಸ್ತಕ ಹಾಗೂ ನೋಡಿದ ಸಿನಿಮಾ, ನಾಟಕಗಳ ಬಗ್ಗೆ ಚರ್ಚಿಸುವ ಮೂಲಕವೂ ಹೊಸ ವರ್ಷಕ್ಕೆ ಸ್ವಾಗತ ಕೋರಬಹುದು.

* ಮೆಹೆಂದಿ ಹಾಕುವುದು, ಮಿಸ್ಟರ್ ಬೀನ್, ಹಾಸ್ಯ ಕಾರ್ಯಕ್ರಮಗಳ ವೀಕ್ಷಣೆಯ ಮೂಲಕವೂ ಸಮಯ ಕಳೆಯಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry