ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2020ಕ್ಕೆ ನಾಸಾದಿಂದ ಹೊಸ ಅತ್ಯಾಧುನಿಕ ದೂರದರ್ಶಕ

Last Updated 29 ಡಿಸೆಂಬರ್ 2017, 20:18 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ‘ನಾಸಾ’ ಅತ್ಯಾಧುನಿಕ ಬಾಹ್ಯಾಕಾಶ ದೂರದರ್ಶಕ ತಯಾರಿಸಲು ಯೋಜನೆ ರೂಪಿಸಿದೆ.

ಹಬಲ್‌ ದೂರದರ್ಶಕಕ್ಕಿಂತ ಸ್ಪಷ್ಟವಾದ ಚಿತ್ರಗಳನ್ನು ಇದು ಸೆರೆ ಹಿಡಿಯಲಿದೆ. 2020ರ ವೇಳೆಗೆ ಯೋಜನೆ ಕಾರ್ಯರೂಪಕ್ಕೆ ಬರಲಿದೆ.

ವೈಡ್ ಫೀಲ್ಡ್ ಇನ್ಫ್ರಾರೆಡ್ ಸರ್ವೆ ಟೆಲಿಸ್ಕೋಪ್‌ (ಡಬ್ಲ್ಯೂಎಫ್‌ಐಆರ್‌ಎಸ್‌ಟಿ) ಎಂದು ಈ ದೂರದರ್ಶಕವನ್ನು ಕರೆಯಲಾಗಿದೆ. ದೂರದರ್ಶಕಕ್ಕೆ ಅಳವಡಿಸಲಾಗಿರುವ ಕ್ಯಾಮೆರಾ 300 ಮೆಗಾಪಿಕ್ಸೆಲ್‌ ಕ್ಷಮತೆ ಹೊಂದಿದೆ. 

‘ಈ ದೂರದರ್ಶಕದಲ್ಲಿ ಸೆರೆಹಿಡಿದ ಚಿತ್ರದ ಗುಣಮಟ್ಟವು ಹಬಲ್‌ ದೂರದರ್ಶಕ ಸೆರೆಹಿಡಿದ ಚಿತ್ರದ ಗುಣಮಟ್ಟಕ್ಕಿಂತ ನೂರು ಪಟ್ಟು ಉತ್ತಮವಾಗಿರುತ್ತದೆ’ ಎಂದು  ಯೋಜನೆಯ ಸಹ ಅಧ್ಯಕ್ಷರಾಗಿರುವ ಡೇವಿಡ್‌ ಸ್ಪೆರ್ಗೆಲ್ ತಿಳಿಸಿದ್ದಾರೆ.

‘ಈ ದೂರದರ್ಶಕ ತೆಗೆದ ಚಿತ್ರವು ಖಗೋಳವಿಜ್ಞಾನಿಗಳಿಗೆ ಬ್ರಹ್ಮಾಂಡದ ರಹಸ್ಯಗಳನ್ನು ಭೇದಿಸಲು ಸಹಕಾರಿಯಾಗಲಿದೆ’ ಎಂದು ಅವರು ತಿಳಿಸಿದ್ದಾರೆ.

‘ನಕ್ಷತ್ರಗಳು, ಗ್ರಹಗಳ ಬಗೆಗಿನ ಅಧ್ಯಯನಕ್ಕೆ ಈ ದೂರದರ್ಶಕ ನೆರವಾಗಲಿದೆ. ಇದರಿಂದ ವಿಜ್ಞಾನಿಗಳ ಅಧ್ಯಯನಕ್ಕೆ ಹೆಚ್ಚು ಮಾಹಿತಿ ದೊರೆಯಲಿದೆ’ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT