5

ಎಲ್ಲಾ ಸಹಕಾರಿ ಬ್ಯಾಂಕ್‌ಗಳಿಗೂ ತೆರಿಗೆ ವಿನಾಯ್ತಿ ಇಲ್ಲ

Published:
Updated:
ಎಲ್ಲಾ ಸಹಕಾರಿ ಬ್ಯಾಂಕ್‌ಗಳಿಗೂ ತೆರಿಗೆ ವಿನಾಯ್ತಿ ಇಲ್ಲ

ನವದೆಹಲಿ : ವಾಣಿಜ್ಯ ಬ್ಯಾಂಕ್‌ಗಳ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಲಾಭದಲ್ಲಿರುವ ಸಹಕಾರಿ ಬ್ಯಾಂಕ್‌ಗಳಿಗೆ ಆದಾಯ ತೆರಿಗೆ ವಿನಾಯ್ತಿ ನೀಡುವುದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರು ಶುಕ್ರವಾರ ಲೋಕಸಭೆಯಲ್ಲಿ ಈ ಮಾಹಿತಿ ನೀಡಿದ್ದಾರೆ.

ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್‌ 80ಪಿ ಅಡಿಯಲ್ಲಿ ವಿನಾಯ್ತಿ ನೀಡಲು ಅವಕಾಶ ಇದೆ. ಆದರೆ  ಬಹಳಷ್ಟು ಸಹಕಾರಿ ಬ್ಯಾಂಕ್‌ಗಳು ಲೆಟರ್ ಆಫ್‌ ಕ್ರೆಡಿಟ್‌ (ಎಲ್‌ಒಸಿ) ಬಿಲ್‌ ಡಿಸ್ಕೌಂಟ್‌, ಲಾಕರ್‌ ಮತ್ತು ಬ್ಯಾಂಕ್‌ ಖಾತರಿ... ಹೀಗೆ ವಾಣಿಜ್ಯ ಬ್ಯಾಂಕ್‌ಗಳು ನೀಡುವ ಸೌಲಭ್ಯಗಳನ್ನು ನೀಡುತ್ತಿವೆ.  ಹೀಗಾಗಿ, ವಿನಾಯ್ತಿ ನೀಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry