7

ಕನ್ನಡ ಮಾಧ್ಯಮ ಪ್ರತಿಪಾದಿಸಿದ ಕವಿ

Published:
Updated:

ಪಿರಿಯಾಪಟ್ಟಣ: ಕನ್ನಡ ನಾಡು ಕಂಡ 20ನೇ ಶತಮಾನದ ಅಗ್ರಮಾನ್ಯ ಕವಿಗಳಲ್ಲಿ ಕುವೆಂಪು ಪ್ರಮುಖರು ಎಂದು ತಾಲ್ಲೂಕು ಶಿಕ್ಷಣ ಸಂಯೋಜಕ ಎಂ.ಪಿ.ಯೋಗರಾಜ್ ಅಭಿಪ್ರಾಯಪಟ್ಟರು.

ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಶುಕ್ರವಾರ ಏರ್ಪಡಿಸಿದ್ದ ರಾಷ್ಟ್ರಕವಿ ಕುವೆಂಪು ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕನ್ನಡ ಸಾಹಿತ್ಯ ಲೋಕದಲ್ಲಿ ಕುವೆಂಪು ವ್ಯಕ್ತಿಯಾಗದೆ ಶಕ್ತಿಯಾಗಿ ದ್ದರು. ಕೇವಲ ಕವಿಯಾಗದೆ ಜಗತ್ತಿಗೆ ವಿಶ್ವಮಾನವ ಸಂದೇಶ ಸಾರಿದ ಮಾನವ ತಾವಾದಿ ಯಾಗಿದ್ದರು. ಕನ್ನಡವೇ ಶಿಕ್ಷಣದ ಮಾಧ್ಯಮವಾಗ ಬೇಕೆಂದು ಪ್ರತಿಪಾದಿಸುವ ಮೂಲಕ ಮಾತೃಭಾಷೆ ಬೆಳವಣಿಗೆಗೆ ಸಹಕಾರಿಯಾದರು ಎಂದು ತಿಳಿಸಿದರು.

ಹಿರಿಯ ವಕೀಲ ಬಿ.ವಿ.ಜವರೇಗೌಡ, ರೈತ ಮುಖಂಡ ದೇವರಾಜ್ ಮಾತನಾ ಡಿದರು. ಎಪಿಎಂಸಿ ಅಧ್ಯಕ್ಷ ಆರ್.ಟಿ.ರೇವಣ್ಣ, ಶಿರಸ್ತೇದಾರ್ ಪ್ರಕಾಶ್, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ಕೆ.ಪ್ರಕಾಶ್, ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಸಿದ್ದರಾಜು, ರೈತ ಮುಖಂಡರಾದ ಬೋರಲಿಂಗೇಗೌಡ, ದೊಡ್ಡಮೊಗೇಗೌಡ, ಸಮಾಜ ಕಲ್ಯಾಣಾ ಧಿಕಾರಿ ರಾಮೇಗೌಡ ಹಾಜರಿದ್ದರು.

ಮತ್ತೊಂದೆಡೆ, ತಾಲ್ಲೂಕಿನ ಬೆಟ್ಟದಪುರ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಜನ್ಮದಿನ ಆಚರಿಸಲಾಯಿತು. ಶಿಕ್ಷಕಿ ಅಮಿತಾ ಮಾತನಾಡಿ, ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿ ತಂದುಕೊಡುವ ಮೂಲಕ ಕನ್ನಡ ಸಾಹಿತ್ಯ ಜಗತ್ತಿಗೆ ಅಪಾರ ಕೂಡುಗೆ ನೀಡಿದ್ದಾರೆ ಎಂದರು.

ಗೊರಹಳ್ಳಿ ಜಗದೀಶ್ ಮಾತನಾಡಿ, ಕುವೆಂಪು 20ನೇ ಶತಮಾನದ ದೈತ್ಯ ಕವಿಯಾಗಿದ್ದು, ಅವರ ಜೀವನ ಯುವ ಕವಿಗಳಿಗೆ ಸ್ಫೂರ್ತಿದಾಯಕವಾಗಿದೆ ಎಂದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಕುವೆಂಪು ಅವರ ಜೀವನ– ಕೃತಿ ಕುರಿತು ರಸಪ್ರಶ್ನೆ ಹಾಗೂ ಭಾಷಣ ಸ್ಪರ್ಧೆ ನಡೆಸಿ, ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ನಾರಾಯಣ್, ನಿಂಗರಾಜು ಮೋಹನ್, ಮಮತಾ, ರೂಪಕುಮಾರಿ, ತ್ರಿವೇಣಿ, ವರಲಕ್ಷ್ಮಿ ಇತರರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry