7

ಸಾವಯವ ಕೃಷಿಗೆ ಒತ್ತು ನೀಡಬೇಕು

Published:
Updated:

ಉಡುಪಿ: ಸಾಂಪ್ರದಾಯಿಕ ಕೃಷಿ ಪದ್ಧತಿ ಅನುಸರಿಸುವುದರಿಂದ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಎಂದು ಕ್ರೀಡೆ ಮತ್ತು ಯುವಜನ ಸಬಲೀಕರಣ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದರು. ಬೆನೆಗಲ್, ಕುಕ್ಕೆಹಳ್ಳಿ ತರಕಾರಿ ಬೆಳೆಗಾರರ ಸೌಹಾರ್ದ ಸಹಕಾರ ಸಂಘದ ‘ಸಂಚಾರಿ ತರಕಾರಿ ಮಾರುಕಟ್ಟೆ’ಗೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು.

ರಾಸಾಯನಿಕ ಪದ್ಧತಿಯಲ್ಲಿ ತರಕಾರಿ ಹಾಗೂ ಹಣ್ಣು ಹಂಪಲು ಬೆಳೆಸುವುದರಿಂದ ಮಾರಕ ರಾಸಾಯನಿಕಗಳು ದೇಹ ಸೇರಿ ಖಾಯಿಲೆಗೆ ಕಾರಣವಾಗುತ್ತವೆ. ಪ್ರಸ್ತುತ ಪ್ರತಿಯೊಂದು ಆಹಾರದಲ್ಲೂ ರಾಸಾಯನಿಕ ಅಂಶ ಇರುತ್ತದೆ. ಆದ್ದರಿಂದ ರೈತರು ಹೆಚ್ಚು ಸಾವಯವ ಕೃಷಿಗೆ ಒತ್ತು ನೀಡಬೇಕು ಎಂದು ಸಲಹೆ ನೀಡಿದರು.

ಇಂದು ಸಾವಯವ ತೋಟಗಾರಿಕಾ ಬೆಳೆಗೆ ಉತ್ತಮವಾದ ಬೇಡಿಕೆ ಇದ್ದು, ಮಾರುಕಟ್ಟೆ ಬೇಡಿಕೆಗೆ ತಕ್ಕಂತೆ ರೈತರು ರಸಗೊಬ್ಬರ ಕೀಟನಾಶಕ ರಹಿತವಾದ ಉತ್ಪನ್ನ ಬೆಳೆದು, ಆರ್ಥಿಕವಾಗಿ ಅಭಿವೃದ್ಧಿಯನ್ನು ಹೊಂದಬೇಕು ಎಂದರು.

ನಬಾರ್ಡ್ ಸಹಾಯ ಪ್ರಧಾನ ವ್ಯವಸ್ಥಾಪಕ ರಮೇಶ್, ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್‌ ನಿರ್ದೇಶಕ ಡಾ. ರವೀಂದ್ರನಾಥ್ ನಾಯಕ್, ತಲ್ಲೂರು ಫ್ಯಾಮಿಲಿ ಟ್ರಸ್ಟ್ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ , ದೇವೇಂದ್ರ ಪ್ರಭು, ಸಿಂಡಿಕೇಟ್ ಬ್ಯಾಂಕ್ ದೇವಾನಂದ್ ಉಪಾಧ್ಯಾಯ,ಬೆನಗಲ್ ತರಕಾರಿ ಬೆಳೆಗಾರರ ಸೌಹಾರ್ದ ಸಹಕಾರಿ ಅಧ್ಯಕ್ಷ ನಾಗರಾಜ್, ಕೋಶಾಧಿಕಾರಿ ರಾಘವೇಂದ್ರ ಭಟ್, ಸದಸ್ಯ ಅರ್ಜುನ್, ಮಟ್ಟುಗುಳ್ಳ ಬೆಳೆಗಾರರ ಸೌಹಾರ್ದ ಸಹಕಾರಿ ಅಧ್ಯಕ್ಷ ಲಕ್ಷ್ಮಣ ಉಪಸ್ಥಿತರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry