7

ತೊಗರಿ ಖರೀದಿ ಕೇಂದ್ರ ಸ್ಥಾಪನೆಗೆ ಆಗ್ರಹ

Published:
Updated:

ಹುಣಸಗಿ: ಸಮೀಪದ ಕೊಡೇಕಲ್ಲ ಗ್ರಾಮದಲ್ಲಿ ಶಾಶ್ವತ ತೊಗರಿ ಖರೀದಿ ಕೇಂದ್ರ ಸ್ಥಾಪನೆ ಮಾಡುವುದು ಸೇರಿದಂತೆ ಇತರ ಬೇಡಿಕೆಗಳ ಈಡೇರಿಕೆ ಗಾಗಿ ಕೊಡೇಕಲ್ಲನಲ್ಲಿ ಶುಕ್ರವಾರ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದವು.

ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಮುಖಂಡರಾದ ಮಹಾದೇವಿ ಬೇನಾಳಮಠ ಮಾತನಾಡಿ, ‘ಕೊಡೇಕಲ್ಲ ಗ್ರಾಮವು ತಾಲ್ಲೂಕಿ ನಲ್ಲಿಯೇ ದೊಡ್ಡ ಹೋಬಳಿ ಕೇಂದ್ರವಾ ಗಿದ್ದು, 35ಕ್ಕೂ ಹೆಚ್ಚು ಹಳ್ಳಿಗಳ ವ್ಯಾಪ್ತಿಯನ್ನು ಹೊಂದಿದೆ.

ಅಂದಾಜು 15 ಸಾವಿರಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ತೊಗರಿಯನ್ನೇ ಬಿತ್ತನೆ ಮಾಡಿದ್ದಾರೆ. ಆದರೆ, ಬೆಳೆದ ಫಸಲನ್ನು ಮಾರಾಟ ಮಾಡಲು ದೂರದ ಸುರಪುರ, ತಾಳಿಕೋಟೆ, ಮುದ್ದೇಬಿಹಾಳ ಇಲ್ಲವೇ ನಾಲತವಾಡ ಪಟ್ಟಣಗಳತ್ತ ತೆರಳುವ ಅನಿವಾರ್ಯತೆ ಇದೆ.

ಇದಕ್ಕಾಗಿ ದುಬಾರಿ ದರದ ಬಾಡಿಗೆ ತೆರಬೇಕಾಗಿದ್ದು, ತೊಂದರೆ ಪಡುವಂತಾಗಿದೆ. ಅಲ್ಲದೆ, ಮಧ್ಯವರ್ತಿ ಗಳ ಹಾವಳಿ ಹೆಚ್ಚಾಗಿದೆ. ಅದಕ್ಕಾಗಿ ಕೊಡೇಕಲ್ಲನಲ್ಲಿಯೇ ತೊಗರಿ ಖರೀದಿ ಕೇಂದ್ರ ಆರಂಭಿಸಬೇಕು ಹಾಗೂ ಪ್ರತಿ ಕ್ವಿಂಟಲ್‌ಗೆ ₹7,500 ದರ ನಿಗದಿ ಪಡಿಸಬೇಕು’ ಎಂದು ಒತ್ತಾಯಿಸಿದರು.

ಕರವೇ ವಲಯ ಘಟಕದ ಅಧ್ಯಕ್ಷ ರಮೇಶ ಬಿರಾದಾರ ಮಾತನಾಡಿ, ‘ಕೊಡೇಕಲ್ಲನಲ್ಲಿ 33 ಕೆವಿ ವಿದ್ಯುತ್ ವಿತರಣಾ ಘಟಕ ಇದ್ದರೂ ಕೂಡಾ ಸಮರ್ಪಕ ವಿದ್ಯುತ್ ಸರಬರಾಜು ಆಗುತ್ತಿಲ್ಲ. ಆದ್ದರಿಂದ ನಿರಂತರ ಜ್ಯೋತಿಯಡಿ ಇಲ್ಲಿನ ಹಳ್ಳಿಗಳಿಗೆ ನಿರಂತರ ವಿದ್ಯುತ್ ಒದಗಿಸಬೇಕು. ತೊಗರಿ ಖರೀದಿ ಕೇಂದ್ರ ಸ್ಥಾಪಿಸುವುದ ರೊಂದಿಗೆ ಖರೀದಿಗೆ ಅಗತ್ಯ ವ್ಯವಸ್ಥೆ ಮಾಡಬೇಕು’ ಎಂದು ಆಗ್ರಹಿಸಿದರು.

‘ಇಲ್ಲಿ ಸುಸಜ್ಜಿತ ಬಸ್ ನಿಲ್ದಾಣವಿದ್ದರೂ ಕೂಡಾ ಸಂಚಾರಿ ನಿಯಂತ್ರಕರಿಲ್ಲದೇ ನಿತ್ಯ ಬಸ್‌ಗಳು ಮುಖ್ಯ ರಸ್ತೆಯಲ್ಲಿಯೇ ನಿಲ್ಲುವಂತಾಗಿದೆ. ಆದ್ದರಿಂದ ಸಾರಿಗೆ ಇಲಾಖೆಯ ಅಧಿಕಾರಿಗಳ ಇತ್ತ ಗಮನ ಹರಿಸಲಿ’ ಎಂದರು.

ಕಾಲಜ್ಞಾನಿ ಬಸವೇಶ್ವರ ದೇವಸ್ಥಾನ (ಪ್ಯಾಟಿ ಗುಡಿ)ಯಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ನಾಡ ಕಚೇರಿಯವರೆಗೆ ಬಂದು ಹುಣಸಗಿ ವಿಶೇಷ ತಹಶೀಲ್ದಾರ್‌ ಸುರೇಶ ಚವಲ್ಕರ್ ಹಾಗೂ ಉಪ ತಹಶೀಲ್ದಾರ್ ಮಹಾದೇವಪ್ಪಗೌಡ ಬಿರಾದಾರ ಅವರಿಗೆ ಮನವಿ ಸಲ್ಲಿಸಿದರು.

ರೈತ ಸಂಘದ ವಲಯ ಘಟಕದ ಅಧ್ಯಕ್ಷ ಅಯ್ಯಣ್ಣ ಪಡಶೆಟ್ಟಿ, ರವೀಂದ್ರ ಅಂಗಡಿ, ಸುರೇಶ ದೇವೂರು, ರಮೇಶ ಪೂಜಾರಿ, ಬಸವರಾಜ ದೊಡಮನಿ, ರಮೇಶ ಉಪ್ಪಲದಿನ್ನಿ, ವಿರೇಶ ಚಿತ್ತಾಪುರ, ವಿರೇಶ ಜೈನಾಪುರ, ಬಸವರಾಜ ಹಗರಟಗಿ, ಕಾಶಿನಾಥ ಹಾದಿಮನಿ, ಅಂಬ್ರೇಶ ನೂಲಿ, ಶ್ರೀಕಾಂತಗೌಡ, ಅಮರೇಶ ಅಗ್ನಿ, ಆದಪ್ಪ, ದೇಸಾಯಿಗೌಡ ಸೇರಿದಂತೆ ಬೂದಿಹಾಳ, ಬರದೇವನಾಳ, ಹಗರ ಟಗಿ, ಕರೇಕಲ್ಲ, ಬಪ್ಪರಗಿ, ರಾಜವಾಳ, ತೀರ್ಥ, ರಾಜನಕೋಳೂರು ಗ್ರಾಮಗಳ ರೈತರು  ಪಾಲ್ಗೊಂಡಿದ್ದರು. ಪಿಎಸ್ಐ ಅರ್ಜುನಪ್ಪ ಅರಕೇರಿ ನೇತೃತ್ವದಲ್ಲಿ ಬಿಗಿ ಬಂದೋಬ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry