6

ಫ್ಯಾಸಿಸಂ ಅತ್ಯಂತ ಅಪಾಯಕಾರಿ: ತೀಸ್ತಾ

Published:
Updated:
ಫ್ಯಾಸಿಸಂ ಅತ್ಯಂತ ಅಪಾಯಕಾರಿ: ತೀಸ್ತಾ

ಚಿಕ್ಕಮಗಳೂರು: ಫ್ಯಾಸಿಸಂ ಎಂಬುದು ಅತ್ಯಂತ ಅಪಾಯಕಾರಿ, ಅದನ್ನು ಎದುರಿಸಲು ನಾವೆಲ್ಲ ತುಂಬಾ ಶ್ರಮಿಸಬೇಕಿದೆ ಎಂದು ಮಾನವ ಹಕ್ಕುಗಳ ಹೋರಾಟಗಾರ್ತಿ ತೀಸ್ತಾ ಸೆಟಲ್‌ವಾಡ್‌ ಹೇಳಿದರು.

‘ಸೌಹಾರ್ದ ಮಂಟಪ: ಹಿಂದಣ ನೋಟ... ಮುಂದಣ ಹೆಜ್ಜೆ...’ ರಾಷ್ಟ್ರೀಯ ಸಮಾವೇಶದ ಸಮಾ ರೋಪ ಸಮಾರಂಭ ದಲ್ಲಿ ಅವರು ಮಾತನಾಡಿದರು. ‘ಕೋಮುವಾದಿಗಳು ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ. ಹಿಟ್ಲರ್‌ನಂತೆ ಸರ್ವಾ ಧಿಕಾರಿ ಧೋರಣೆ ಅನುಸರಿಸು ತ್ತಿದ್ದಾರೆ. ಇದಕ್ಕೆ ಗುಜರಾತ್‌, ಉತ್ತರ ಪ್ರದೇಶಗಳಲ್ಲಿ ಅನೇಕ ಉದಾಹ ರಣೆಗಳು ಸಿಗುತ್ತವೆ. 18 ವರ್ಷಗಳಿಂದ ಗುಜರಾತ್‌ನಲ್ಲಿ ಇದನ್ನು ನಾವು ನೋಡಿದ್ದೇವೆ. ಮೂರೂವರೆ ವರ್ಷಗಳಿಂದ ದೆಹಲಿಯಲ್ಲಿ ನೋಡುತ್ತಿದ್ದೇವೆ’ ಎಂದರು.

ಫ್ಯಾಸಿಸಂ ಎದುರಿಸಲು ಅನೇಕ ತರಹದ ಮಾದರಿಗಳನ್ನು ಅನಸುರಿ ಸಬೇಕಿದೆ. ಅಲ್ಪಾವಧಿ, ಮಧ್ಯಮಾವಧಿ ಮತ್ತು ದೀರ್ಘಾವಧಿ ಕ್ರಮಗಳನ್ನು ಅನಸುರಿಸಬೇಕಿದೆ. ಆರ್‌ಎಸ್‌ಎಸ್‌ ಮುಖವಾಡವಾಗಿರುವ ಬಿಜೆಪಿ ಗೆಲ್ಲದಂತೆ ನೋಡಿಕೊಳ್ಳಬೇಕಿರುವುದು ತುರ್ತು ಅಗತ್ಯ. ಅದಕ್ಕಾಗಿ ಕೆಲವು ಪಕ್ಷಗಳ ಜೊತೆ ಕೈಜೋಡಿಸುವ ಅನಿವಾರ್ಯ ಇದೆ ಎಂದರು.

ತನಗಾಗದವರನ್ನು ನಿಯಂತ್ರಿಸಲು ಕಾನೂನುಗಳನ್ನು ಹೇರುವುದು ಫ್ಯಾಸಿಸಂ ದೊಡ್ಡ ಲಕ್ಷಣ. ಮೊದಲು ‘ಟಾಡಾ’ ಕಾಯ್ದೆ ಇತ್ತು. ಜನಸಂಘ ಅದನ್ನು ವಿರೋಧಿಸಿದಾಗ ‘ಪೋಟಾ’ ತಂದರು. ಪೋಟಾ ಕಾಯ್ದೆಯಡಿ ಗುಜರಾತ್‌ನಲ್ಲಿ ನೂರಾರು ಅಮಾಯಕರು ಜೈಲಿನಲ್ಲಿ ಕೊಳೆಯುವಂತೆ ಮಾಡಲಾಗಿದೆ ಎಂದರು.

ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ಬಂತು. ದನದ ಮಾಂಸ ಸೇವನೆ, ಸಾಗಣೆ ಅಪರಾಧವಾಗಿ ಮಾಡಿ ಬಿಟ್ಟಿದ್ದಾರೆ. ಕಾನೂನಿನಡಿ ಮುಗ್ಧರನ್ನು ಹಿಂಸಿಸುತ್ತಾರೆ. ತ್ರಿವಳಿ ತಲಾಖ್‌ ನಿಷೇಧ ಕಾಯ್ದೆ ತರಲಾಗಿದೆ.’ ಎಂದರು.

ಗುಜರಾತ್‌ನಲ್ಲಿ ಜಿಗ್ನೇಶ್‌ ಮೇವಾನಿ ಗೆಲುವು ಮಾದರಿಯಾಗಬೇಕು. ಅಂಥವರು ಇತರ ರಾಜ್ಯಗಳಲ್ಲಿಯೂ ವಿಧಾನಸಭೆ, ಸಂಸತ್ತು ಪ್ರವೇಶಿಸಬೇಕು. ಆ ಮೂಲಕ ಅಪಾಯಕಾರಿ ಕಾನೂ ನುಗಳನ್ನು ವಿರೋಧಿಸಬೇಕು ಎಂದರು.

ಸಂವಿಧಾನ ಗೌರವಿಸಿ

ಸಂವಿಧಾನ ಬದಲಿ ಸುವ ಬಗ್ಗೆ ಮಾತನಾಡುವವರು ಸಂವಿ ದಾನದಿಂದ ತಮಗೆ ಸಿಕ್ಕಿರುವ ಅವಕಾ ಶವನ್ನು ನೆನಪಿಸಕೊಳ್ಳಬೇಕು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಹೇಳಿದರು.

ಶೋಷಿತ, ತಳವರ್ಗದ ಸಮು ದಾಯ ದವರಿಗೆ ಭಾರತ ಸಂವಿದಾನ ಧ್ವನಿ ನೀಡಿದೆ. ಸರ್ವರಿಗೂ ಸಮಬಾಳು ನೀಡಿದೆ. ಅಂಥಹ ಸಂವಿದಾನವನ್ನು ಎಲ್ಲರು ಗೌರವಿಸಬೇಕು ಎಂದರು.

ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯ್ಕ್ ಮಾತನಾಡಿ, ‘ಜನರಿಂದ ಚುನಾಯಿ ತನಾದವರು ಸೇವಾ ಮನೋಭಾವನೆ ಬೆಳಸಿಕೊಳ್ಳಬೇಕು. ಶಿಕ್ಷಣ ಸಾರ್ವತ್ರೀ ಕರಣವಾದ ನಂತರವೂ ಮಾನಸಿಕವಾಗಿ ಶೇ 90ರಷ್ಟು ಮಂದಿ ಜಿಡ್ಡುಗಟ್ಟಿದ ಮನಸ್ಥಿತಿಗೆ ಜೋತು ಬಿದ್ದಿರುವುದು ಸೋಜಿಗದ ಸಂಗತಿ’ ಎಂದರು.

ಕೆಕೆಎಸ್‌ವಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಲ್.ಅಶೋಕ್, ಗ್ರಾಮೀಣ ಕೂಲಿ ಕಾರ್ಮಿಕರ ಸಂಘದ ಸ್ವರ್ಣಭಟ್, ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಕೆ.ಮಹಮ್ಮದ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry