7

ಕುಲಪತಿ ಕಲಿವಾಳ ನಿವೃತ್ತಿ: ಪ್ರಭಾರಗೆ ಪೈಪೋಟಿ

Published:
Updated:

ದಾವಣಗೆರೆ: ದಾವಣಗೆರೆ ವಿಶ್ವ ವಿದ್ಯಾಲಯದ ಕುಲಪತಿ ಬಿ.ಬಿ.ಕಲಿವಾಳ ಶುಕ್ರವಾರ ನಿವೃತ್ತರಾಗಿದ್ದು, ಕರ್ತವ್ಯದಿಂದ ಬಿಡುಗಡೆ ಹೊಂದಿದ್ದಾರೆ. ಶಿಕ್ಷಣ ನಿಕಾಯದ ಪ್ರೊ.ಮುರುಗಯ್ಯ, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ವೀರಭದ್ರಪ್ಪ, ವಾಣಿಜ್ಯ ವಿಭಾಗದ ಪ್ರೊ.ಲಕ್ಷ್ಮಣ ಮತ್ತು ಬಯೊ ಟೆಕ್ನಾಲಜಿ ವಿಭಾಗದ ಮುಖ್ಯಸ್ಥರಾದ ಪ್ರೊ. ಗಾಯತ್ರಿ ದೇವರಾಜ್ ಸೇವಾ ಹಿರಿತನ ಹೊಂದಿದ್ದು, ಈ ನಾಲ್ವರಲ್ಲಿ ಒಬ್ಬರನ್ನು ಪ್ರಭಾರ ಕುಲಪತಿಯನ್ನಾಗಿ ನೇಮಕ ಮಾಡಲಾಗುತ್ತದೆ ಎಂದು ವಿ.ವಿ. ಮೂಲಗಳು ಖಚಿತಪಡಿಸಿವೆ.

ಹಿಂದಿನ ಕುಲಪತಿ ಪ್ರೊ.ಇಂದುಮತಿ ನಿವೃತ್ತರಾದ ನಂತರ ಪ್ರೊ.ಮುರುಗಯ್ಯ ಪ್ರಭಾರ ಕುಲಪತಿಯಾಗಿ ಕಾರ್ಯನಿರ್ವ ಹಿಸಿದ್ದರು. ಪ್ರಭಾರ ಕುಲಪತಿ ನೇಮಕಕ್ಕೆ ಸಂಬಂಧಿಸಿದ ಆದೇಶ ಪತ್ರ ಶನಿವಾರ ವಿಶ್ವವಿದ್ಯಾಲಯಕ್ಕೆ ಬರಬಹುದು ಎಂದು ಕುಲಸಚಿವ (ಆಡಳಿತ) ಎಸ್‌.ವೈ.ಹಲಸೆ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry