ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾದಕ ವಸ್ತುಗಳಿಗೆ ಯುವ ಪೀಳಿಗೆ ಬಲಿ

Last Updated 30 ಡಿಸೆಂಬರ್ 2017, 8:55 IST
ಅಕ್ಷರ ಗಾತ್ರ

ಹಂಸಭಾವಿ:‘ಯುವ ಪೀಳಿಗೆಯೂ ಮಾದಕ ವಸ್ತುಗಳಿಗೆ ದಾಸರಾಗಿ ತಮ್ಮ ವಿದ್ಯಾರ್ಥಿ ಜೀವನ ವ್ಯರ್ಥ ಮಾಡಿಕೊಳ್ಳುತ್ತಿದ್ದಾರೆ’ ಎಂದು ಅಬಕಾರಿ ಬಸ್‌ಇನ್‌ಸ್ಟೆಕ್ಟರ್‌ ಮೋಹನ್ ಬಿ.ಎಂ. ಕಳವಳ ವ್ಯಕ್ತಪಡಿಸಿದರು.

ಗ್ರಾಮದ ಮೃತ್ಯುಂಜಯ ವಿದ್ಯಾಪೀಠದ ಮಹಾಂತಸ್ವಾಮಿ ಕಲಾ ವಿಜ್ಞಾನ ಮತ್ತು ವಾಣಿಜ್ಯ ಪದವಿ ಕಾಲೇಜಿನಲ್ಲಿ ಗುರುವಾರ ‘ನಾರ್ಕೋ ಡ್ರಗ್ಸ್‌ ಮಾರಾಟ ತಡೆ’ ಕುರಿತು ನಡೆದ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಭಾರತದಲ್ಲಿ ಅನಾದಿ ಕಾಲದಿಂದಲೂ ಮಾದಕ ವಸ್ತುಗಳ ಆಕರ್ಷಣೆ ನಿರಂತರವಾಗಿ ನಡೆದಿದೆ. ಮನುಷ್ಯನ ನೋವಿಗೆ ಅವು ಪರಿಹಾರವೆಂಬ ಭ್ರಮೆ ಬಹು ಜನರಲ್ಲಿದೆ. ಆದರೆ, ಅವುಗಳನ್ನು ನಮ್ಮನ್ನು ಮಾನಸಿಕವಾಗಿ ಹಾಗೂ ದೈಹಿಕವಾಗಿ ಕೊಲ್ಲುತ್ತವೆ ಎಂದರು.

ಪ್ರಾಚಾರ್ಯ ಡಾ.ಎಂ.ಎಂ.ಅಕ್ಕಿ ಮಾತನಾಡಿ, ಮಾನವನ ಜೀವನ ಅತ್ಯಮೂಲ್ಯ ಹಾಗೂ ಅಲ್ಪವಾಗಿದ್ದು ಮಾದಕ ವಸ್ತುಗಳಿಂದ ಆರೋಗ್ಯ ಹದಗೆಡಿಸಿಕೊಂಡು ನೈತಿಕ ಅದಃ ಫತನ ಹೊಂದುತ್ತಿದ್ದಾನೆ ಎಂದರು.

ಅಬಕಾರಿ ಸಿಬ್ಬಂದಿ ಮಂಜುನಾಥ ಚಿಕ್ಕಣ್ಣನವರ, ರಮೇಶ ಪೂಜಾರ, ಮಲ್ಲಿಕಾರ್ಜುನ ಗುಗ್ಗರೇರ, ಚನ್ನಪ್ಪ ಎಮ್ಮೇರ, ಎಸ್.ಎ.ತಿಪ್ಪೇಶ ಹಾಗೂ ವಿದ್ಯಾರ್ಥಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT