7

‘₹4.50 ಕೋಟಿ ವೆಚ್ಚದಲ್ಲಿ ಟ್ರ್ಯಾಕ್ ನಿರ್ಮಾಣ’

Published:
Updated:

ಹಳಿಯಾಳ: ಉತ್ತಮ ಶಿಕ್ಷಣ ಕ್ರೀಡೆ ಮತ್ತಿತರರ ಚಟುವಟಿಕೆಗಳಲ್ಲಿ ತೊಡಗಿಸಿ ಕೊಳ್ಳಬೇಕು. ಆಗ ಮಾತ್ರ ಮಕ್ಕಳು ಭವಿಷ್ಯದಲ್ಲಿ ನಾಗರಿಕರಾಗಲು ಸಾಧ್ಯ ಎಂದು ಸಚಿವ ಆರ್.ವಿ.ದೇಶಪಾಂಡೆ ಹೇಳಿದರು.

ಶುಕ್ರವಾರ ಸ್ಥಳೀಯ ಕಿಲ್ಲೇದಾರ ಲೇಔಟ್‌ನಲ್ಲಿ ಸುಮಾರು ₹ 71 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಸರ್ಕಾರಿ ಬಾಲಕಿಯರ ಪ್ರಾಥಮಿಕ ಮತ್ತು ಪ್ರೌಢಶಾಲೆ ಕಟ್ಟಡ ಉದ್ಘಾಟಿಸಿ ಮಾತನಾಡಿದರು.

ಪ್ರತಿಯೊಬ್ಬ ವ್ಯಕ್ತಿಗೂ ಉತ್ತಮ ಚಾರಿತ್ರ್ಯ, ಗುಣ ಇರಬೇಕು. ಸಮಾಜದಲ್ಲಿ ಶಾಂತಿ, ಪ್ರೀತಿ, ವಿಶ್ವಾಸವಿರಬೇಕು. ಧರ್ಮ, ಜಾತಿಯ ಮೇಲೆ ವಿಶ್ವಾಸವಿರಬೇಕು. ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೋಸ್ಕರ ಸರ್ಕಾರ ಶಿಕ್ಷಣ, ಆರೋಗ್ಯಕ್ಕೆ ಹೆಚ್ಚಿನ ಗಮನ ಹರಿಸುತ್ತಿದೆ. ವಿದ್ಯಾಸಿರಿ ಯೋಜನೆಯಡಿ ಮಕ್ಕಳಿಗೆ ಸಹಾಯಧನ ಸೌಲಭ್ಯ ನೀಡುತ್ತಿದೆ.

ಹಳಿಯಾಳದ ಶಿವಾಜಿ ಕ್ರೀಡಾಂಗಣದಲ್ಲಿ ಸುಮಾರು ₹ 4.50 ಕೋಟಿ ವೆಚ್ಚದಿಂದ ಕ್ರೀಡಾ ಟ್ರ್ಯಾಕ್ ನಿರ್ಮಾಣಗೊಳ್ಳುತ್ತಿದೆ. ಒಳಾಂಗಣ ಕ್ರೀಡಾಂಗಣ ಸಹ ಆಗುತ್ತಿದೆ. ಬೃಹತ್ ಪಟ್ಟಣಗಳಲ್ಲಿ ಇರುವಂತಹ ಸೌಲಭ್ಯಗಳನ್ನೂ ಸಹ ಗ್ರಾಮೀಣ ಭಾಗದಲ್ಲಿಯೂ ಒದಗಿಸಲಾಗುತ್ತಿದೆ. ಮಕ್ಕಳು ಸೌಲಭ್ಯಗಳಿಂದ ವಂಚಿತರಾಗಬಾರದು ಆ ನಿಟ್ಟಿನಿಂದ ಸರ್ಕಾರ ಕಾರ್ಯನಿರ್ವಹಿಸುತ್ತಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ ಮಾತನಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎಂ.ಮುಲ್ಲಾ ಪ್ರಾಸ್ತವಿಕವಾಗಿ ಮಾತನಾಡಿದರು.

ಪುರಸಭೆ ಅಧ್ಯಕ್ಷ ಉಮೇಶ ಬೊಳಶೆಟ್ಟಿ, ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಸಂತೋಷ ರೇಣುಕೆ, ಎಸ್.ಡಿ.ಎಂ.ಸಿ ಅಧ್ಯಕ್ಷೆ ಪ್ರೇಮಾ ತೋರಣಕಟ್ಟಿ, ಮುಖ್ಯಶಿಕ್ಷಕ ಭೀಮಾ ಶಂಕರ ಹರಿಜನ, ಕೆ.ಎಫ್.ಭಜಂತ್ರಿ, ಕೆಜಿಎಸ್ ಸದಸ್ಯ ಚಂದ್ರ ಪೂಜಾರಿ ಇದ್ದರು.

ಸುರೇಂದ್ರ ಬಿರ್ಜೇ ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry