7

‘ಪದ್ಮಾವತಿ’ ‘ಪದ್ಮಾವತ್’ಆಗಿ ತೆರೆ ಕಾಣಲಿದೆ; ಸಿಬಿಎಫ್‌ಸಿಯಿಂದ ಯು/ಎ ಪ್ರಮಾಣಪತ್ರ

Published:
Updated:
‘ಪದ್ಮಾವತಿ’ ‘ಪದ್ಮಾವತ್’ಆಗಿ ತೆರೆ ಕಾಣಲಿದೆ; ಸಿಬಿಎಫ್‌ಸಿಯಿಂದ ಯು/ಎ ಪ್ರಮಾಣಪತ್ರ

ನವದೆಹಲಿ: ವಿವಾದದ ಗೂಡಾಗಿರುವ ಸಂಜಯ್ ಬನ್ಸಾಲಿ ನಿರ್ದೇಶನದ ಪದ್ಮಾವತಿ ಸಿನಿಮಾಗೆ ಯು/ಎ ಪ್ರಮಾಣ ಪತ್ರ ನೀಡಿದ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್‌ಸಿ) ಶೀರ್ಷಿಕೆಯಲ್ಲಿ ಬದಲಾವಣೆ ತರಲು ಸೂಚಿಸಿದೆ.

ಈಗಿರುವ ಪದ್ಮಾವತಿ ಎಂಬ ಹೆಸರನ್ನು 'ಪದ್ಮಾವತ್' ಎಂದು ಬದಲಾಯಿಸುವಂತೆ ಸಿಬಿಎಫ್‌ಸಿ ಹೇಳಿದೆ.

ಸಿಬಿಎಫ್‌ಸಿ ಈ ಬಗ್ಗೆ ಗುರುವಾರ ಸಭೆ ನಡೆಸಿತ್ತು. ಯು/ಎ ಪ್ರಮಾಣ ಪತ್ರ ನೀಡಿದ ಮಂಡಳಿಯು, ಸಿನಿಮಾ ತಂಡ ನೀಡಿದ ಕಥೆ ಹಾಗೂ ಸಂಪನ್ಮೂಲಗಳನ್ನು ಆಧರಿಸಿ ಹೆಸರಿನಲ್ಲಿ ಬದಲಾವಣೆ ತರಲು ತಾಕೀತು ಮಾಡಿದೆ.

ಸಭೆಯಲ್ಲಿ ಮಂಡಳಿ ಅಧ್ಯಕ್ಷ ಪ್ರಸೂನ್ ಜೋಶಿ, ಮಂಡಳಿ ಸದಸ್ಯರು, ಸಿನಿಎಫ್‌ಸಿ ಅಧಿಕಾರಿಗಳು, ವಿಶೇಷ ಸಲಹಾ ಸಮಿತಿ ಸದಸ್ಯರು ಹಾಜರಿದ್ದರು.

ಚಿತ್ರದಲ್ಲಿ ಇತಿಹಾಸವನ್ನು ತಿರುಚಲಾಗಿದೆ ಎಂದು ರಾಜಸ್ತಾನದ ಕೆಲ ಸಂಘಟನೆಗಳು ಆರೋಪಿಸಿದ ಕಾರಣ ವಿವಾದ ಸೃಷ್ಟಿಯಾಗಿತ್ತು. ಚಿತ್ರದ ಕತೆಯು ರಜಪೂತ ರಾಣಿ ಪದ್ಮಾವತಿ ಹಾಗೂ ದೆಹಲಿ ಸುಲ್ತಾನ ಅಲ್ಲಾವುದ್ದೀನ್ ಖಿಲ್ಜಿ ಸುತ್ತ ಸುತ್ತುತ್ತದೆ.

ಈ ಚಿತ್ರದ ಪ್ರದರ್ಶನವನ್ನು ನಿಷೇಧಿಸುವಂತೆ ಒತ್ತಾಯಿಸಿ ಗುಜರಾತ್‌, ಮಹಾರಾಷ್ಟ್ರ, ಬಿಹಾರ, ರಾಜಸ್ತಾನ ಸೇರಿದಂತೆ ಹಲವು ರಾಜ್ಯಗಳಲ್ಲಿ ಪ್ರತಿಭಟನೆಗಳು ನಡೆದಿದ್ದವು.

ಇವನ್ನೂ ಓದಿ...

‘ಪದ್ಮಾವತಿ’ ಚಿತ್ರ ಇತಿಹಾಸವನ್ನು ಆಧರಿಸಿದ್ದಲ್ಲ: ಸಂಜಯ್‌ ಲೀಲಾ ಬನ್ಸಾಲಿ

‘ಪದ್ಮಾವತಿ’ ಚಿತ್ರತಂಡಕ್ಕೆ ಸೆನ್ಸಾರ್ ಮಂಡಳಿ ಛೀಮಾರಿ

‘ಪದ್ಮಾವತಿ’ ಮತ್ತು ಚರಿತ್ರೆಯ ತಾಕಲಾಟ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry