7

ನೇರ ತೆರಿಗೆ ಸಂಗ್ರಹ ₹ 6.49 ಲಕ್ಷ ಕೋಟಿ

Published:
Updated:

ನವದೆಹಲಿ: ಪ್ರಸಕ್ತ ಆರ್ಥಿಕ ವರ್ಷದಲ್ಲಿ (2017–18) ಡಿಸೆಂಬರ್‌ 18ರವರೆಗೆ ನೇರ ತೆರಿಗೆ ಮೂಲಕ ₹ 6.49 ಲಕ್ಷ ಕೋಟಿ ಸಂಗ್ರಹವಾಗಿದೆ.

2017–18ಕ್ಕೆ ನೇರ ತೆರಿಗೆ ಮೂಲಕ ₹ 9.80 ಲಕ್ಷ ಕೋಟಿ ಸಂಗ್ರಹಿಸುವ ಅಂದಾಜು ಮಾಡಲಾಗಿದೆ. ಇದರಲ್ಲಿ ಡಿಸೆಂಬರ್‌ 18ರವರೆಗೆ ಸಂಗ್ರಹವಾಗಿರುವ ತೆರಿಗೆ ಪ್ರಮಾಣವು ಶೇ 67ರಷ್ಟಾಗಿದೆ.

ಆರ್ಥಿಕ ವರ್ಷದಲ್ಲಿ ನೇರ ತೆರಿಗೆ ಸಂಗ್ರಹವು ಶೇ 15.32 ರಷ್ಟು ಪ್ರಗತಿ ಕಾಣುವ ನಿರೀಕ್ಷೆ ಮಾಡಲಾಗಿತ್ತು. ಆದರೆ ಶೇ 16.60ರಷ್ಟು ಏರಿಕೆ ಕಂಡಿದೆ ಎಂದು ಹಣಕಾಸು ಖಾತೆ ರಾಜ್ಯ ಸಚಿವ ಶಿವ ಪ್ರತಾಪ ಶುಕ್ಲಾ ಅವರು ಲೋಕಸಭೆಗೆ ಮಾಹಿತಿ ನೀಡಿದ್ದಾರೆ.

2016–17ನೇ ಆರ್ಥಿಕ ವರ್ಷದಲ್ಲಿ ₹ 8.47 ಲಕ್ಷ ಕೋಟಿ ಸಂಗ್ರಹವಾಗುವ ಅಂದಾಜು ಮಾಡಲಾಗಿತ್ತು. ಆದರೆ ಅದಕ್ಕಿಂತಲೂ ಸ್ವಲ್ಪ ಹೆಚ್ಚು ₹ 8.49 ಲಕ್ಷ ಕೋಟಿ ಸಂಗ್ರವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry