ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಒಡೇಮಾ’ ರೋಗದಿಂದ ಬಳಲುತ್ತಿದ್ದ ಆನೆ ಸಾವು

Last Updated 30 ಡಿಸೆಂಬರ್ 2017, 20:31 IST
ಅಕ್ಷರ ಗಾತ್ರ

ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಕಂಠಾಪುರ ಆನೆ ಶಿಬಿರದಲ್ಲಿ ಒಡೇಮಾ ರೋಗದಿಂದ ಬಳಲುತ್ತಿದ್ದ 47 ವರ್ಷದ ಸಲಗ ಶನಿವಾರ ಮೃತಪಟ್ಟಿತು.

ಚಾಮರಾಜನಗರ ಜಿಲ್ಲೆ ಕೊಳ್ಳೆಗಾಲ ವ್ಯಾಪ್ತಿಯ ಅರಣ್ಯದಲ್ಲಿ ಈ ಆನೆಯ ಉಪಟಳ ಹೆಚ್ಚಾಗಿದ್ದರಿಂದ ಒಂದು ವರ್ಷದ ಹಿಂದೆ ಸೆರೆ ಹಿಡಿದು ಕುಂಠಾಪುರ ಶಿಬಿರಕ್ಕೆ ತರಲಾಗಿತ್ತು.

‘20 ದಿನಗಳಿಂದ ಬಳಲುತ್ತಿದ್ದ ಸಲಗ ಆಹಾರ, ನೀರು ತ್ಯಜಿಸಿತ್ತು. ಸೊಂಡಿಲಿನ ಭಾಗದಲ್ಲಿ ನೀರು ಶೇಖರಣೆಯಾಗಿ ಆಹಾರ ಸೇವಿಸಲು ಆಗುತ್ತಿರಲಿಲ್ಲ. ತೀವ್ರ ನೋವಿನಿಂದ ಬಳಲುತ್ತಿತ್ತು’ ಎಂದು ಪಶುವೈದ್ಯ ಡಾ.ಮುಜೀಬ್‌ ರೆಹಮಾನ್‌ ತಿಳಿಸಿದ್ದಾರೆ.

ನಾಗರಹೊಳೆ ಎಸಿಎಫ್‌ ಪ್ರಸನ್ನಕುಮಾರ್‌, ವಲಯ ಅರಣ್ಯಾಧಿಕಾರಿ ಕಿರಣ್‌ ಕುಮಾರ್‌ ಸಮ್ಮುಖದಲ್ಲಿ ಡಾ.ಮುಜೀಬ್‌ ರೆಹಮಾನ್‌ ಮರಣೋತ್ತರ ಪರೀಕ್ಷೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT