ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿರತೆ ಸೆರೆಗೆ ಬೋನು ಅಳವಡಿಕೆ

Last Updated 31 ಡಿಸೆಂಬರ್ 2017, 7:26 IST
ಅಕ್ಷರ ಗಾತ್ರ

ಸಂಡೂರು: ತಾಲ್ಲೂಕಿನ ಸಿದ್ದಾಪುರ, ಸುಶೀಲಾನಗರ, ಕುರಿಮಟ್ಟಿಯಲ್ಲಿ ಕಾಣಿಸಿಕೊಂಡು ಗ್ರಾಮಸ್ಥರಲ್ಲಿ ಭೀತಿ ಉಂಟು ಮಾಡಿರುವ ಚಿರತೆಗಳನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆಯು ಸುಶೀಲಾನಗರ ಹಾಗೂ ಸಿದ್ದಾಪುರದಲ್ಲಿ ಬೋನುಗಳನ್ನು ಅಳವಡಿಸಿದೆ.

13 ಕಡೆಗಳಲ್ಲಿ ಮೊಕ್ಕಾಂ:
‘ರೈತರಲ್ಲಿ ಚಿರತೆ ಕುರಿತ ಭಯವನ್ನು ಹೋಗಲಾಡಿಸಲು ವೆಂಕಟಗಿರಿ, ಸಿದ್ದಾಪುರ, ಸುಶೀಲಾನಗರ, ಮುರಾರಿಪುರ, ರಾಮಘಡದಲ್ಲಿ ಇಲಾಖೆಯ ಸಿಬ್ಬಂದಿ ಮೊಕ್ಕಾಂ ಹೂಡಿದ್ದಾರೆ. ಅರಣ್ಯದಂಚಿನ ಹೊಲಗಳಲ್ಲಿ ಬೆಳೆ ಕಟಾವು ವೇಳೆ ರಕ್ಷಣೆ ನೀಡಲಿದ್ದಾರೆ’ ಎಂದು ಇಲಾಖೆಯ ದಕ್ಷಿಣ ವಲಯ ಅರಣ್ಯಾಧಿಕಾರಿ ನರಸಿಂಹಮೂರ್ತಿ :ಪ್ರಜಾವಾಣಿ’ಗೆ ಶನಿವಾರ ತಿಳಿಸಿದರು.

‘ಹೊಲಗಳು ಮತ್ತು ಜನ ವಸತಿ ಸ್ಥಳಗಳ ಕಡೆಗೆ ಕಾಡುಪ್ರಾಣಿಗಳು ಬಾರದಂತೆ ಬೆಳಿಗ್ಗೆ ಸಮಯದಲ್ಲಿ ಪಟಾಕಿ ಸಿಡಿಸಲಾಗುವುದು’ ಎಂದರು.
‘ಇತ್ತೀಚೆಗೆ ಸುಶೀಲಾನಗರ ಸುತ್ತಮುತ್ತ ಚಿರತೆ ಹಾವಳಿ ಹೆಚ್ಚಾಗಿದೆ. ಇಲಾಖೆಯು ಜನತೆಗೆ ಹೆಚ್ಚಿನ ರಕ್ಷಣೆ ಒದಗಿಸಬೇಕು’ ಎಂದು ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಧರ್ಮಾನಾಯ್ಕ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT