7

ಹುಂಡಿಯಲ್ಲಿ ₹99.59 ಲಕ್ಷ ಸಂಗ್ರಹ

Published:
Updated:
ಹುಂಡಿಯಲ್ಲಿ ₹99.59 ಲಕ್ಷ ಸಂಗ್ರಹ

ಮಲೆ ಮಹದೇಶ್ವರ ಬೆಟ್ಟ: ಮಲೆ ಮಹದೇಶ್ವರ ಬೆಟ್ಟದ ದೇವಾಲಯದಲ್ಲಿ ಸಂಗ್ರಹವಾಗಿದ್ದ ಹುಂಡಿ ಹಣದ ಪರ್ಕಾವಣೆ ಹಾಗೂ ಎಣಿಕೆ ಕಾರ್ಯ ಶುಕ್ರವಾರ ನಡೆಯಿತು.

ಹುಂಡಿಯಲ್ಲಿ ₹99,59,963, 21 ಗ್ರಾಂ ಚಿನ್ನ, 968 ಗ್ರಾಂ ಬೆಳ್ಳಿ ಸಂಗ್ರಹವಾಗಿದೆ.

ದೇವಾಲಯದ ಹುಂಡಿಯಲ್ಲಿ ಕಳೆದ 30ದಿನಗಳಿಂದ ಸಂಗ್ರಹವಾಗಿದ್ದ ಹಣವನ್ನು ಸಾಲೂರು ಮಠದ ಅಧ್ಯಕ್ಷ ಗುರುಸ್ವಾಮಿ ನೇತೃತ್ವದಲ್ಲಿ ದೇವಾಲಯದಲ್ಲಿ ಪರ್ಕಾವಣೆ ಮಾಡಿ ಅಲ್ಲಿಂದ ಪೊಲೀಸರ ಭದ್ರತೆಯಲ್ಲಿ ಬಸ್ ನಿಲ್ದಾಣದಲ್ಲಿರುವ ವಾಣಿಜ್ಯ ಸಂಕೀರ್ಣದ ಮೇಲ್ಮಹಡಿಗೆ ಕೊಂಡೊಯ್ದು ಎಣಿಕೆ ಮಾಡಲಾಯಿತು.

ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿಗಳಾದ ಎಂ.ಜೆ ರೂಪಾ, ಪ್ರಭಾರ ನಿರ್ವಾಹಕ ಅಧಿಕಾರಿ ಬಸವರಾಜು, ಅಧೀಕ್ಷಕರಾದ ಮಾದರಾಜು, ಆರೋಗ್ಯ ನಿರೀಕ್ಷಕ ಶ್ರೀಕಾಂತ್‌ವಿಭೂತಿ ಮತ್ತು ದೇವಾಲಯದ ಸಿಬ್ಬಂದಿ ಹಾಗೂ ಭಾರತೀಯ ಸ್ಟೇಟ್ ಬ್ಯಾಂಕ್ ವ್ಯವಸ್ಥಾಪಕ ಸೆಂದಿಲ್‌ನಾದನ್, ಸಿಬ್ಬಂದಿಗಳಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry