ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೌಚಾಲಯ, ನೀರಿನ ಸಮಸ್ಯೆ ಪರಿಹಾರಕ್ಕೆ ಆಗ್ರಹ

Last Updated 31 ಡಿಸೆಂಬರ್ 2017, 9:52 IST
ಅಕ್ಷರ ಗಾತ್ರ

ಇಂಡಿ: ಇಂಡಿಯ ಖೇಡ ಕಾಲೊನಿಯಲ್ಲಿ ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕ ಸಾರ್ವಜನಿಕ ಶೌಚಾಲಯ ನಿರ್ಮಿಸಲು ಹಾಗೂ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ಕಾಲೊನಿ ನಿವಾಸಿಗಳು ಈಚೆಗೆ ಪುರಸಭೆ ಎದುರು ಪ್ರತಿಭಟನೆ ನಡೆಸಿ, ಅಧ್ಯಕ್ಷ ಶ್ರೀಕಾಂತ ಕುಡಿಗನೂರಗೆ ಮನವಿ ಸಲ್ಲಿಸಿದರು.

ಎಂ.ಬಿ.ಮಾಣಿಕ ಮಾತನಾಡಿ, ಪಟ್ಟಣದ ಖೇಡ ಕಾಲೊನಿಯಲ್ಲಿ ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತ್ಯೇಕ ಶೌಚಾಲಯಗಳಿಲ್ಲದ ಕಾರಣ ಒಂದೇ ಬಯಲು ಸ್ಥಳದಲ್ಲಿ ಶೌಚಾಲಯಕ್ಕೆ ಹೋಗುವ ದುಸ್ಥಿತಿ ಉಂಟಾಗಿದೆ. ಹೀಗಾಗಿ ಕೂಡಲೇ ಪುರಸಭೆ ಇತ್ತ ಕಡೆ ಗಮನ ನೀಡಿ 15 ದಿನಗಳಲ್ಲಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು. ಇಲ್ಲದಿದ್ದರೇ ಉಗ್ರವಾದ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ರಾಮಚಂದ್ರ ಐರೊಡಗಿ, ಶಂಕರ ಹೂಗಾರ, ಅಂಬಣ್ಣ ಐರೊಡಗಿ, ಮಾದೇವ ದಂಡವತೆ, ಸುರೇಶ ಅರಬಳ್ಳಿ, ಅರ್ಜುನ ಕ್ಷತ್ರಿ, ಸೀತಾಬಾಯಿ ಮಾದರ, ನಿಂಗಪ್ಪ ಪೂಜಾರಿ, ಕಸ್ತೂರಿ ರಾಠೋಡ, ಸಾಬವ್ವ ಪೂಜಾರಿ, ಲಕ್ಷಿಂಬಾಯಿ ಆಕಳವಾಡಿ, ಶಾರದಾ ಕುಂಬಾರ, ಮೀರಮ್ಮ ಶೇಖ, ಬಾನು ಅಥಣಿಕರ, ನೀಲಬಾಯಿ ಪೂಜಾರಿ, ರೂಪಾ ಕನ್ನೊಳ್ಳಿ, ಶೋಭಾ ಐರೊಡಗಿ, ಗೋದಾಬಾಯಿ ಕ್ಷತ್ರಿ, ಭವರಮ್ಮ ಕರೂಟಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT