6

ಉಪವನ ಕಾಫಿ ಸವಿದ ತೆಲುಗು ನಟ ಶ್ರೀಕಾಂತ

Published:
Updated:

ಧಾರವಾಡ: ‘ಚಕ್ಕೋತಾ ಚಕ್ಕೋತಾ...’ ಎಂಬ ಯಾರೇ ನೀನು ಚೆಲುವೆ ಚಿತ್ರದ ಗೀತೆಯಲ್ಲಿ ನರ್ತಿಸಿದ್ದ ಕನ್ನಡ ಮೂಲದ ತೆಲುಗು ನಟ ಮಕ್ಕಾ ಶ್ರೀಕಾಂತ ಶನಿವಾರ ಧಾರವಾಡಕ್ಕೆ ಭೇಟಿ ನೀಡಿ, ಉಪವನ ಹೋಟೆಲಿನಲ್ಲಿ ಉಪಾಹಾರ ಸೇವಿಸಿದರು.

ಕುಟುಂಬ ಸಮೇತರಾಗಿ ದಾಂಡೇಲಿಗೆ ಪ್ರಯಾಣಿಸುತ್ತಿದ್ದ ಅವರು ಮಾರ್ಗ ಮಧ್ಯದಲ್ಲಿ ತಮ್ಮ ಸ್ನೇಹಿತರಾದ ಉಪವನ ಹೋಟೆಲ್ ಮಾಲೀಕ ದಿನೇಶ ಶೆಟ್ಟಿ ಅವರನ್ನು ಭೇಟಿಯಾಗಿ ಅಲ್ಲಿ ತಿಂಡಿ ಸವಿದರು.

ಈ ಕುರಿತಂತೆ ಪ್ರತಿಕ್ರಿಯಿಸಿದ ದಿನೇಶ, ‘ಗಂಗಾವತಿ ಮೂಲದವರಾದ ಶ್ರೀಕಾಂತ ನನ್ನ ಬಾಲ್ಯ ಸ್ನೇಹಿತ. ಒಂದೇ ಕಾಲೇಜಿನಲ್ಲಿ ಜತೆಗೆ ಓದಿದ್ದೆವು. ಬಹಳ ವರ್ಷಗಳ ನಂತರ ಭೇಟಿಯಾಗಿದ್ದೆವು’ ಎಂದರು.

ಹೇಂಡ್ತಿ ಹೇಳಿದರೆ ಕೇಳಬೇಕು, ಉಗಾದಿ, ಶಿವರಾಜಕುಮಾರ್ ಹಾಗೂ ಸುದೀಪ್ ನಟನೆಯ ದಿ ವಿಲನ್‌ ಚಿತ್ರದಲ್ಲೂ ಶ್ರೀಕಾಂತ ನಟಿಸುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry