ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೌಳವ ಮಾಧ್ವರಲ್ಲಿ ಮಧ್ವಚಾರ್ಯರ ಸಿದ್ಧಾಂತದ ಕೊರತೆ: ಪೇಜಾವರ ಸ್ವಾಮೀಜಿ

Last Updated 31 ಡಿಸೆಂಬರ್ 2017, 10:18 IST
ಅಕ್ಷರ ಗಾತ್ರ

ಉಡುಪಿ: ‘ತೌಳವ ಮಾಧ್ವರಲ್ಲಿ ಮಧ್ವಚಾರ್ಯರ ಸಿದ್ಧಾಂತದ ಪರಿಚಯ ಇಲ್ಲದೆ ಇರುವುದು ಖೇದಕರ’ ಎಂದು ಪರ್ಯಾಯ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.

ಜಗದ್ಗುರು ಶ್ರೀ ಮಧ್ವಾಚಾರ್ಯ ಅದೃಶ್ಯರಾಗಿ 700ವರ್ಷ ಗತಿಸಿದ ಅಂಗವಾಗಿ ಉಡುಪಿ ತುಳು ಶಿವಳ್ಳಿ ಮಾಧ್ವಬ್ರಾಹ್ಮಣ ಮಹಾಮಂಡಲ ಶನಿವಾರ ಆಯೋಜಿದ್ದ ಆನಂದತೀರ್ಥ ಜ್ಞಾನಯಾತ್ರೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ತುಳುನಾಡಿನಲ್ಲೇ ಹುಟ್ಟಿ, ದೇಶಾದ್ಯಂತ ಭಕ್ತಿ ಸಿದ್ಧಾಂತ ಪಸರಿಸಿದ ಮಧ್ವಾಚಾರ್ಯರ ಸಿದ್ಧಾಂತದ ಪರಿಚಯ ತೌಳವ ಮಾಧ್ವರಿಗೆ ಇಲ್ಲ. ಆದರೆ ಹೈದರಾಬಾದ್ ಕರ್ನಾಟಕ, ಮಹಾರಾಷ್ಟ್ರ ಕರ್ನಾಟದ ಮಧ್ವ ಬ್ರಾಹ್ಮಣರಲ್ಲಿ ಶ್ರೀ ಜಗದ್ಗುರು ಮಧ್ವಾಚಾರ್ಯರ ಸಿದ್ಧಾಂತಗಳ ಸಾಕಷ್ಟು ಅಧ್ಯಯನ ಮಾಡಿ ಅಭಿಮಾನ ಬೆಳೆಸಿಕೊಂಡಿದ್ದಾರೆ. ಕೇರಳ ತಮಿಳುನಾಡಿನಲ್ಲಿ ಮಾಧ್ವ ಬ್ರಾಹ್ಮಣ ಸಂಘನೆಗಳು ಮಾದರಿಯಾಗಿವೆ ಎಂದು ಹೇಳಿದರು.

ಭಕ್ತಿ ದೀಕ್ಷೆ ಪಡೆದ ಶೂದ್ರನೂ ಬ್ರಾಹ್ಮಣನಂತೆ ಪೂಜ್ಯ ಎಂದು ಸಾರಿದ ಆಚಾರ್ಯರ ಸಂದೇಶ ಸಾರ್ವಕಾಲಿಕವಾಗಿದೆ. ಭಕ್ತಿ ಮಾರ್ಗದಿಂದ ಎಲ್ಲರೂ ಮೋಕ್ಷ ಪಡೆಯಬಹುದು ಎಂಬುದು ಮಧ್ವರ ನಿಲುವಾಗಿದೆ ಎಂದರು.

ಬೆಳಿಗ್ಗೆ 8.30ಕ್ಕೆ ನಗರದ ಸಂಸ್ಕೃತ ಮಹಾ ಪಾಠಶಾಲೆಯ ಆವರಣದಿಂದ ಶ್ರೀ ಮಧ್ವಾಚಾರ್ಯರ ಪ್ರತಿಮೆಯನ್ನು ಮಂಗಳವಾದ್ಯ
ಮೆರವಣಿಗೆಯೊಂದಿಗೆ ರಥಬೀದಿಯ ಮೂಲಕ ರಾಜಾಂಗಣಕ್ಕೆ
ಕರೆತರಲಾಯಿತು.

ಕಿರಿಯ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ , ತುಳು ಶಿವಳ್ಳಿ ಮಾಧ್ವಬ್ರಾಹ್ಮಣ ಮಹಾಮಂಡಲದ ಪ್ರದೀಪ್ ಕುಮಾರ್ ಕಲ್ಕೂರ, ಅಧ್ಯಕ್ಷ ಮಂಜುನಾಥ ಉಪಧ್ಯಾಯ, ಗೌರವಧ್ಯಕ್ಷ ಕೆ. ಕೃಷ್ಣರಾಜ ಸರಳಾಯ, ಎ.ಪಿ ಕೊಂಡಚ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT